ಸಿದ್ದರಾಮಯ್ಯ ತಲೆ ಇಲ್ಲದ ರಾಜಕಾರಣಿ: ಸಚಿವ ಕೆ ಎಸ್ ಈಶ್ವರಪ್ಪ ವಾಗ್ದಾಳಿ

  • 17 Dec 2023 , 9:33 PM
  • Belagavi
  • 161

ಬೆಳಗಾವಿ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒಬ್ಬ ತಲೆ ಇಲ್ಲದ ರಾಜಕಾರಣಿ ಏನ್ ಬೇಕಾದ್ರೂ ಮಾತನಾಡ್ತಾರೆ ಬೆಳಗ್ಗೆ ಒಂದು, ಸಂಜೆ ಒಂದು ಹೇಳ್ತಾರೆ ಸಿದ್ದರಾಮಯ್ಯನ ಮಾತಿಗೆ ಯಾವುದಕ್ಕೂ ಬೆಲೆ ಕೊಡುವುದಿಲ್ಲ ಎಂದು ಗ್ರಾಮೀಣಾಭಿವೃದ್ದಿ, ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ನಗರದಲ್ಲಿಂದು ಬಿಜೆಪಿ ಕೋರ ಕಮಿಟಿ ಸಭೆಗೂ ಮುನ್ನ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಬದಲಾವಣೆ ಆಗುತ್ತಾರೆ ಎಂದು ಬಿಜೆಪಿ ಶಾಸಕರು ಹೇಳಿದ್ದಾರಾ? ಸಚಿವರು ಹೇಳಿದ್ದಾರಾ ? ಅಥವಾ ಎಂ.ಪಿ ಹೇಳಿದ್ದಾರಾ ? ಎಲ್ಲಾ ಊಹಾಪೋಹ. ಸಿದ್ದರಾಮಯ್ಯನ ಮಾತಿಗೆ ಯಾರೂ ಬೆಲೆ ಕೊಡುವುದಿಲ್ಲ. ಇಂತಹ ಮಾತಿನಿಂದಲೇ ಚಾಮುಂಡೇಶ್ವರಿ ಕ್ಷೇತ್ರ ಕಳೆದುಕೊಂಡಿದ್ದು ಎಂದು ವಾಗ್ದಾಳಿ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ಬಗ್ಗೆ ಏಕವಚನದಲ್ಲಿ ಮಾತನಾಡುವ ಸಿದ್ದರಾಮಯ್ಯನಿಗೆ ಅವನ ಹೇಳಿಕೆಗೆ ನಾನು ಉತ್ತರ ಕೊಡುವುದಿಲ್ಲ. ನಾನು ಅವನಿಗೆ ಏಕ ವಚನದಲ್ಲಿಯೇ ಹೇಳುತ್ತೇನೆ ಅವನಿಗೆ ಕೇಳಿ ಎಂದು ಖಾರವಾಗಿ ಉತ್ತರಿಸಿದರು. ಪವಿತ್ರವಾದ ಬೆಳಗಾವಿಯಲ್ಲಿ ಏಕಶ್ಚಿತ ರಾಜಕಾರಣಿ ಸಿದ್ದರಾಮಯ್ಯನ ಹೇಳಿಕೆಗೆ ನಾನು ಉತ್ತರ ಕೊಡಲ್ಲ ಎಂದ ಅವರು, ಏನ ಬಿಜೆಪಿ ಕೋರ ಕಮಿಟಿಯಲ್ಲಿ ಬಿಜೆಪಿ ಕಾರ್ಯಕಾರಿಣಿ ಸಮಿತಿಯ ರಾಜ್ಯ ಅಧ್ಯಕ್ಷರು ಯಾವ ಅಜೆಂಡಾ ತರುತ್ತಾರೆ ಆ ವಿಷಯದ ಮೇಲೆ ಚರ್ಚೆ ನಡೆಯುತ್ತದೆ ವಿಶೇಷವಾಗಿ ಏನು ಇಲ್ಲ. ಸಚಿವ ಸಂಪುಟ ವಿಸ್ತರಣೆ ಹಾಗೂ ಬೆಳಗಾವಿ ಲೋಕಸಭೆಯ ಉಪಚುನಾವಣೆ, ಮಸ್ಕಿ, ಬಸವ ಕಲ್ಯಾಣ ಸೇರಿದಂತೆ ಚುನಾವಣೆಯ ಕುರಿತಾಗಿ ಯಾವ ಅಭ್ಯರ್ಥಿಯ ಘೋಷಣೆಯೂ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಭಾನುವಾರವೇ ಸಚಿವ ಸಂಪುಟ ವಿಸ್ತರಣೆಯಾಗಬಹುದು ಅದು ನನಗೆ ಗೊತ್ತಿಲ್ಲ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. ಶಿವಮೊಗ್ಗದಲ್ಲಿ ಮುಸ್ಲಿಂ ಗುಂಡಾಗಳು ಮಾಡಿದ ದುಷ್ಕೃತ್ಯವನ್ನು ಬಿಜೆಪಿ ಸರಕಾರ ಯಾವುದೇ ಕಾರಣಕ್ಕೂ ಒಪ್ಪಲ್ಲ. ಬಜರಂಗದಳದ ಕಾರ್ಯಕರ್ತ ಗೋ ಕಳ್ಳತನ ಸಾಗಾಟವನ್ನು ತಡೆಯುತ್ತಿದ್ದ, ಗೋ ಹತ್ಯೆಯನ್ನು ಖಂಡನೆ ಮಾಡಬೇಕು ಎಂದು ನಮ್ಮನ್ನು ಮನವಿ ಮಾಡಿಕೊಂಡಿದ್ದರು. ನಾಲ್ಕು ಜನ ಗುಂಡಾಗಳು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಗಲ್ಲೆ ಮಾಡಿದ್ದು, ಖಂಡನೀಯ ಇದನ್ನು ಮಟ್ಟ ಹಾಕುತ್ತೇವೆ ಎಂದರು.

Read All News