ಭಾರತ ಮಾತೆಯ ಸೇವೆ ಸಲ್ಲಿಸಿ ಗ್ರಾಮಕ್ಕೆ ಮರಳಿದ ನಿವೃತ್ತ ಯೋಧರಿಗೆ ಸನ್ಮಾನ

  • 15 Jan 2024 , 2:57 AM
  • Belagavi
  • 142

ಬೈಲಹೊಂಗಲ: 17 ವರ್ಷಗಳ ಕಾಲ ಭಾರತ ಮಾತೆಯ ಸೇವೆ ಸಲ್ಲಿಸಿ ಮರಳಿ ಗ್ರಾಮಕ್ಕೆ ಆಗಮಿಸಿದ ತಾಲೂಕಿನ ಮರಡಿ ನಾಗಲಾಪುರ ಗ್ರಾಮದ ಬಸವರಾಜ್ ದೇಮಪ್ಪ ನರಸನ್ನವರ ಹಾಗೂ ಅರ್ಜುನ್ ಬಾಳಪ್ಪ ದೂಪದಾಳ ಅವರನ್ನು ಗ್ರಾಮದ ಜನರು ಅದ್ಧೂರಿಯಾಗಿ ಸನ್ಮಾನಿಸಿ ಬರಮಾಡಿಕೊಂಡರು. ಭಾರತೀಯ ಸೇನೆಯಲ್ಲಿ ಸುಮಾರು 17 ವರ್ಷಗಳ ಕಾಲ ಸೇವೆ ಸಲ್ಲಿಸಿ ಕಳೆದ ತಿಂಗಳು ನಿವೃತ್ತಿ ಪಡೆದು ಸ್ವಗ್ರಾಮಕ್ಕೆ ಆಗಮಿಸಿದ ಯೋಧ ರಾಜು ನರಸನ್ನವರ ಅವರನ್ನು ಅದ್ದೂರಿಯಾಗಿ ಗ್ರಾಮದ ಜನತೆ ಬರಮಾಡಿಕೊಂಡರು. ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿದ ಯೋಧ ರಾಜು ನರಸನ್ನವರ, ದೇಶ ಸೇವೆ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಜನ್ಮ ಸಾರ್ಥಕ ವಾಯಿತು. ಗ್ರಾಮದ ಯುವಕರು ದುಶ್ಚಟಗಳ ದಾಸರಾಗದೆ, ಒಳ್ಳೆಯ ಆರೋಗ್ಯ ಕಾಪಾಡಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ಸೈನ್ಯಕ್ಕೆ ಸೇರಿ ಭಾರತ ಮಾತೆಯ ಸೇವೆ ಸಲ್ಲಿಸಬೇಕು, ಯುವರು ದೇಶಸೇವೆಗಾಗಿ ಯಾವಾಗಲೂ ಕಾತುರರಾಗಿ ಎಂದು ತಿಳಿ ಹೇಳಿದರು. ಈ ಸಂದರ್ಭದಲ್ಲಿ ಊರಿನ ಮುಖಂಡರಾದ ಬಾಬು ಚಂದರಗಿ, ಸಂತೋಷ ನರಸನ್ನವರ, ಬಸಲಿಂಗಪ್ಪ ಹುಲಿಕಟ್ಟಿ, ಶ್ರೀಕಾಂತ್ ನರಸನ್ನವರ, ದೇಮಪ್ಪ ಕುರಿ, ಶಿವಾನಂದ ನರಸನ್ನವರ, ಶಂಕರ ನರಸನ್ನವರ ಹಾಗೂ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರೊ, ಆರ್ ಡಿ ಬಡಿಗೇರ ಕಾರ್ಯಕ್ರಮಕ್ಕೆ ಸ್ವಾಗತಿಸಿ ನಿರೂಪಿಸಿದರು.

Read All News