ಲಕ್ಷ್ಮಿ ತಾಯಿ ಫೌಂಡೇಶನ್ ವತಿಯಿಂದ ಕುರಿಗಾಹಿಗಳ ಕುಟುಂಬಕ್ಕೆ ನೆರವು

  • 15 Jan 2024 , 2:12 AM
  • Belagavi
  • 132

ಬೆಳಗಾವಿ: ಆಕಸ್ಮಿಕವಾಗಿ ವಿಷಪೂರಿತ ಸಸ್ಯಗಳನ್ನು ತಿಂದು ಸುಮಾರು ಹದಿನೈದು ಕುರಿಗಳು ಸಾವನ್ನಪ್ಪಿರುವ ಘಟನೆ ನಗರದ ಸಮೀಪದ ಸುಳಗಾ ಗ್ರಾಮದಲ್ಲಿ ನಡೆದಿದೆ. ಈ ಹಿನ್ನಲೆ ಇಂತಹ ಘಟನೆ ಸುದ್ದಿ ತಿಳಿದು ತಕ್ಷಣ ಸ್ಪಂದಿಸಿದ ಲಕ್ಷ್ಮಿ ತಾಯಿ ಫೌಂಡೇಶನ್ ಇವರಿಗೆ ಆರ್ಥಿಕ ನೆರವು ನೀಡಿದರು.

ಸುಳಗಾ ಗ್ರಾಮದ ಪರುಶರಾಮ ಭೀಮಾ ಉಚಗಾಂವಕರ್ ಹಾಗೂ ಯಲ್ಲಪ್ಪ ರಾಮಾ ನರೋಟಿ ಕುಟುಂಬಗಳಿಗೆ ಸಂಬಂಧಪಟ್ಟ ಸುಮಾರು ಹದಿನೈದು ಕುರಿಗಳು ಆಕಸ್ಮಿಕವಾಗಿ ವಿಷಪೂರಿತ ಸಸ್ಯಗಳನ್ನು ತಿಂದು ಸಾವನ್ನಪ್ಪಿದ್ದವು. ಈ ಸುದ್ದಿ ತಿಳಿದ ತಕ್ಷಣ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಅವರ ಮನೆಗಳಿಗೆ ತೆರಳಿ ಕುಟುಂಬದವರಿಗೆ ಸಾಂತ್ವನವನ್ನು ಹೇಳಿ ಲಕ್ಷ್ಮೀ ತಾಯಿ ಫೌಂಡೇಷನ್ ವತಿಯಿಂದ ಧನ ಸಹಾಯ ಮಾಡಿ ಧೈರ್ಯವನ್ನು ತುಂಬಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕಿ, ಕುರಿಗಳನ್ನು ನಂಬಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಇಂತವರಿಗೆ ಕುರಿಗಳೇ ಜೀವನದ ಆಧಾರ ಸ್ತಂಭಗಳಾಗಿವೆ. ಕುರಿಗಳ ಸಾವಿನ ಹಿನ್ನೆಲೆಯಲ್ಲಿ ಈ ಕುಟುಂಬಗಳು ಪರಿತಪಿಸುತ್ತಿದ್ದು, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹೆಚ್ಚಿನ ಪರಿಹಾರ ಕೊಡಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು. ಹಿರಿಯರಾದ ಬಾಗಣ್ಣ ನರೋಟಿ, ಯುವರಾಜ ಕದಂ ಮುಂತಾದವರು ಉಪಸ್ಥಿತರಿದ್ದರು

Read All News