ದೇಶದಲ್ಲಿ ಕಿಲ್ಲರ್ ಕೊರೋನಾಗೆ ಮೊದಲ ಶಾಸಕ ಬಲಿ

  • 15 Jan 2024 , 1:59 AM
  • Tamilnadu
  • 98
ಚೆನ್ನೈ: ಕೊರೋನಾ ರಣಕೇಕೆಗೆ ಭಾರತ ದೇಶ ತತ್ತರಿಸಿ ಹೊಗಿದೆ. ಕೊರೋನ ಮಾಹಾಮಾರಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಇದರಿಂದ ಕೊರೋನಾ ಸೋಂಕಿಗೆ ದೇಶದಲ್ಲಿ ಶಾಸಕರೊಬ್ಬರು ಬಲಿಯಾದ ಘಟನೆ ನಡೆದಿದೆ. ಸತತ 3 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ತಮಿಳುನಾಡು ಡಿಎಂಕೆ ಶಾಸಕ ಜೆ.ಅನ್ಬಳಗನ್ ಇಂದು ಕೋರೊನಾ ವೈರಸದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ 62 ವರ್ಷದ ಡಿಎಂಕೆ ಶಾಸಕ ಜೆ ಅನ್ಬಳಗನ್ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು ಆಮ್ಲಜನಕದ ಪ್ರಮಾಣ ಇಳಿದಿದ್ದರಿಂದ ಅವರ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರದ ಕಾರಣ ಅವರಿಗೆ ಹೃದ್ರೋಗ, ರಕ್ತದೊತ್ತಡ, ಕಿಡ್ನಿ ಸಮಸ್ಯೆ ಕೂಡ ಇದ್ದಿತ್ತು ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಉಸಿರಾಟದ ಸಮಸ್ಯೆ ಎಂದು ಹೇಳಿ ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು ಶಾಸಕ ಅನ್ಬಳಗನ್ ಅವರಿಗೆ ಪರೀಕ್ಷೆ ಮಾಡಿದಾಗ ಕೊರೋನಾ ಸೋಂಕು ದೃಢಪಟ್ಟಿತ್ತು. ತೀವ್ರ ಆರೋಗ್ಯ ಸಮಸ್ಯೆ ನಡುವೆ ಕೊರೋನಾ ಸೋಂಕು ತಗಲಿ ಗಂಭೀರವಾಗಿ ಮೃತಪಟ್ಟಿದ್ದಾರೆ. ಆ ಮೂಲಕ ದೇಶದಲ್ಲಿ ಮೊದಲ ಬಾರಿಗೆ ಜನಪ್ರತಿನಿಧಿಯೊಬ್ಬರು ಕೊರೊನಾಗೆ ಬಲಿಯಾಗಿದ್ದಾರೆ.

Read All News