ಗಡಿನಾಡಿನಲ್ಲಿ ಮತ್ತೆ ಹಾರಾಡಿದ ಕನ್ನಡ ಧ್ವಜ

  • 15 Jan 2024 , 3:23 AM
  • Belagavi
  • 275

ಬೆಳಗಾವಿ: ಗಡಿಜಿಲ್ಲೆ ಬೆಳಗಾವಿಯಲ್ಲಿ ಇಂದು ಮತ್ತೆ ಕನ್ನಡ ಧ್ವಜ ಹಾರಡಿತು. ಹೌದು ಮಹಾನಗರ ಪಾಲಿಕೆ ಪ್ರವೇಶ ದ್ವಾರ ಮುಂದೆ ಹಳದಿ ಕೆಂಪು ಧ್ವಜ ತಲೆಯೆತ್ತಿ ನಿಂತಿದೆ. ಕನ್ನಡ ಹೋರಾಟಗಾರ ಶ್ರೀನಿವಾಸ ತಾಳೂಕರ ನೇತೃತ್ವದಲ್ಲಿ ಧ್ವಜ ಸ್ತಂಭದ ಸಮೇತ ಕನ್ನಡ ಧ್ವಜ ಹಾರಿಸಿ ಕರ್ನಾಟಕ ಮಾತೆಗೆ, ತಾಯಿ ಭುವನೇಶ್ವರಿ ಜಯವಾಗಲಿ ಅಂತಾ ಘೋಷಣೆ ಕೂಗಿದರು.

ಇದರ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಧ್ವಜಾರೋಹಣಕ್ಕೆ ಅಡ್ಡಿ ಪಡಿಸಿದರು. ಇತ್ತ ಕನ್ನಡಪರ ಹೋರಾಟಗಾರರು ಹಾಗೂ ಪೊಲೀಸರ ಮಧ್ಯ ಮಾತಿನ ಚಕಮಕಿಗೆ ನಡೆಯಿತು. ಇನ್ನೊಂದು ಕಡೆ ಪೊಲೀಸರು ಧ್ವಜ ತೆರವು ಗೊಳಿಸಲು ಮುಂದಾದಾಗ ದ್ವಜಾರೋಹಣದ ಹಗ್ಗ ಕೊರಳಿಗೆ ಕಟ್ಟಿಕೊಂಡು ಹೋರಾಟಗಾರರು ರಾಷ್ಟ್ರ ಗೀತೆ ಹಾಡಲು ಶುರುಮಾಡಿದರು. ಇತ್ತ ರಾಷ್ಟ್ರ ಗೀತೆಗೆ ಗೌರವ ಸಲಿಸಿದ ಪೊಲೀಸರು ಸ್ವಲ್ಪ ದೂರ ಸರಿಯಬೇಕಾಯ್ತು.

ಈಗಾಗಲೇ ಸುವರ್ಣ ಸೌಧ ಮುಂದೆ, ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಕನ್ನಡ ಧ್ವಜ ಹಾರಾಡುತ್ತಿದೆ ಹಾಗೆ ಮಹಾನಗರ ಪಾಲಿಕೆ ಮುಂದೆ ಕನ್ನಡ ಧ್ವಜ ಹಾರಲಿ, ನಮ್ಮ ನಾಡಿನಲ್ಲಿ ನಮ್ಮ ಧ್ವಜ ಹಾರಾಡಿದೇರುನು ತಪ್ಪು ಎಂದು ಹೋರಾಟಗಾರರು ಪ್ರಶ್ನಿಸಿದರು. ಧ್ವಜ ಸ್ತಂಭ ಮುಟ್ಟಿದರೆ ನಮ್ಮ ಹೆಣ ಹೆಣಬೀಳುತ್ತದೆ. ಕನ್ನಡ ನಾಡಿಗಾಗಿ ನಾವು ಪ್ರಾಣ ಕೊಡಲು ಸಿದ್ಧ ಎಂದು ಎಚ್ಚರಿಕೆ ನೀಡಿದರು. ಇತ್ತ ಪಾಲಿಕೆ ಅನುಮತಿ ಇಲ್ಲದೇ ಕನ್ನಡ ಧ್ವಜ ಸ್ಥಾಪಿಸಿದ್ದಕ್ಕೆ ಪೋಲಿಸರ ಆಕ್ಷೇಪ ವ್ಯಕ್ತಪಡಿಸಿದರು.

ಸ್ಥಳಕ್ಕೆ ಆಗಮಿಸಿದ ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಕೆ ಎಚ್ ಭೇಟಿ ನೀಡಿ ಕನ್ನಡಪರ ಹೋರಾಟಗಾರರೊಂದಿಗೆ ಮಾತುಕತೆಗೆ ಕರೆದರು ಆದರೆ ಇದಕ್ಕೆ ಕ್ಯಾರೇ ಅನ್ನದ ಹೋರಾಟಗಾರರು ಇಲ್ಲೇ ಮಾತನಾಡಿ ಎಂದು ಹೋರಾಟ ಮುಂದುವರೆಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಕಸ್ತೂರಿ ಭಾವಿ, ರಾಜ್ಯೋತ್ಸವ ದಿನ ರಾತ್ರಿ ನಾನು ಪಾಲಿಕೆ ಮೇಲೆ ಕನ್ನಡ ಧ್ವಜ ಹಾರಿಸಿದ್ದೆ ಅದನ್ನು ತೆರವು ಗೊಳಿಸಿದರಿ ನಮ್ಮ ನಾಡ ಧ್ವಜ ಹೆಣ್ಣು ಮಕ್ಕಳ ಕುಂಕುಮ ಅರಿಶಿನ ಸಂಕೇತ ಅಂತಹ ಧ್ವಜ ತೆರವುಗೊಳಿಸಿದರೆ ಒಂದು ಹೆಣ್ಣಿನ ಮುತೈದೇತನ ಕಸಿದಂತೆ ದಯವಿಟ್ಟು ಅದನ್ನು ಪೋಷಣೆ ಮಾಡುವಲ್ಲಿ ಮುಂದಾಗಿ ಎಂದು ಮನವಿ ಮಾಡಿದರು. ಒಟ್ಟಿನಲ್ಲಿ ಈ ಕನ್ನಡ ಧ್ವಜ ಮಹಾನಗರ ಪಾಲಿಕೆ ಮೇಲೆ ಸದಾ ಹಾರಾಡುತ್ತಾ ? ಎಂದು ಕಾದು ನೋಡಬೇಕು.

Read All News