ಬೆಂಗಳೂರು: ಜನವರಿ 1ರಿಂದ ರಾಜ್ಯದಲ್ಲಿ ಎಸ್‌ಎಸ್‌ಎಲ್ ಸಿ, ದ್ವಿತೀಯ ಪಿಯುಸಿ ಹಾಗೂ 6 ರಿಂದ 9 ನೇ ತರಗತಿ ವರೆಗಿನ ಶಾಲಾ ಕಾಲೇಜು ಆವರಣದಲ್ಲಿ ವಿದ್ಯಾಗಮ ಕಲಿಕೆ ಆರಂಭವಾಗಿದೆ. ಈ ಹಿನ್ನಲೆ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹಳೆಯ ಪಾಸ್ ನಲ್ಲೇ ಉಚಿತವಾಗಿ ಪ್ರಯಾಣಿಸಲು ಕೆ.ಎಸ್.ಆರ್.ಟಿ.ಸಿ ಅವಕಾಶ ಕಲ್ಪಿಸಿದೆ.
ಈಗಾಗಲೇ ತರಗತಿಗಳು ಆರಂಭವಾಗಿದ್ದು ವಿದ್ಯಾರ್ಥಿಗಳು ಶಾಲಾ, ಕಾಲೇಜಿಗೆ ಹೋಗಿ ಬರಲು ಅನುಕೂಲವಾಗುವಂತೆ ಜನವರಿ 31 ರವರೆಗೆ ಹಿಂದಿನ ವರ್ಷದ ಪಾಸ್ ನಲ್ಲಿಯೇ ಉಚಿತವಾಗಿ ಪ್ರಯಾಣಿಸಲು ಕೆ.ಎಸ್.ಆರ್.ಟಿ.ಸಿ ಅವಕಾಶ ನೀಡಿದೆ.
ಶಾಲಾ, ಕಾಲೇಜಿಗೆ ಹೋಗಿ ಬರುವ ವಿದ್ಯಾರ್ಥಿಗಳು 2019 -20 ನೇ ಸಾಲಿನ ಬಸ್ ಪಾಸ್ ಮತ್ತು ಪ್ರಸಕ್ತ ಶೈಕ್ಷಣಿಕ ಸಾಲಿನ ಶುಲ್ಕ ಪಾವತಿ ರಸೀದಿಯನ್ನು ನಿರ್ವಾಹಕರಿಗೆ ತೋರಿಸಿ ಸಾಮಾನ್ಯ ಮತ್ತು ವೇಗದೂತ ಕೆ.ಎಸ್.ಆರ್.ಟಿ.ಸಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ ಎಂದು ಹೇಳಲಾಗಿದೆ.