ಹುಕ್ಕೇರಿ : ಕುಲದ ನೆಲೆಯನ್ನು ಮೀರಿ ಬೆಳೆದ ಶಿವಶರಣರು ತೀರ ಕೆಳ ಸಮುದಾಯದ ಉದ್ದಾರಕ್ಕಾಗಿ ಶ್ರಮಿಸುವುದರೊಂದಿಗೆ ಮಾನವೀಯ ಭಾಂಧವ್ಯವನ್ನು ಭಾರತೀಯರಿಗೆ ಎತ್ತಿ ತೋರಿಸಿದ್ದಾರೆ. ಅಂತ ಶರಣರ ಪರಿಶ್ರಮದಿಂದ ಭಾರತೀಯ ಸಮಾಜ ಚರಣ ಶಿಲತೆ ಪಡಡೆಯಿತೆಂದು ಕರ್ನಾಟಕ ಲಲಿತ ಕಲಾ ಅಕಾಡೆಮಿ ಸದಸ್ಯ ಹಾಗೂ ಗೋಕಾಕ ಸಿದ್ದಾರ್ಥ ಲಲಿತ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಜಯಾನಂದ ಮಾದರ ಹೇಳಿದರು. ಅವರು ರವಿವಾರ ರಂದು ತಾಲೂಕಿನ ಹಿಡಕಲ್ ಡ್ಯಾಮಿನಲ್ಲಿ ರಾಷ್ಟ್ರೀಯ ಬಸವ ದಳ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ತಾಲೂಕಾ ಘಟಕ ಹುಕ್ಕೇರಿ, ಕರ್ನಾಟಕ ರಾಜ್ಯ ಎಸ್.ಸಿ.ಎಸ್.ಟಿ ಪ್ರಾಥಮಿಕ/ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘ ಹುಕ್ಕೇರಿ ಹಾಗೂ ವಿಶ್ವೇಶ್ವರಯ್ಯಾ ಪ್ರೌಢ ಶಾಲೆ ಹಿಡಕಲ್ ಡ್ಯಾಮ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾಯಕ ಯೋಗಿ ನಿಜ ಶರಣ ಶ್ರೀ ಮಾದರ ಚನ್ನಯನರ ಜಯಂತಿ ಹಾಗೂ ಭಾರತ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿ ಪುಲೆ ಅವರ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡುತ್ತಾ ಕನ್ನಡ ನೆಲದಲ್ಲಿ ಪ್ರತಿರೋಧದ ಕಿಡಿಯಂತೆ ದಾರ್ಶನಿಕರು ಸಮಾನತೆಗಾಗಿ ಬದುಕಿದ್ದಾರೆ ಅವರ ಆದರ್ಶ ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಜಯಂತಿ ಉತ್ಸವಗಳು ಸಾರ್ಥಕ ಹೊಂದುತ್ತವೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ವಿಶ್ವೇಶ್ವರಯ್ಯಾ ಪ್ರೌಢ ಶಾಲೆಯ ಅಧ್ಯಕ್ಷ ಬಸವರಾಜ ಕಟಕಬಾಂವಿ ವಹಿಸಿದ್ದರು, ರಾಷ್ಟ್ರೀಯ ಬಸವದಳ ಅಧ್ಯಕ್ಷ ಎಸ್.ಎಮ್.ಶಿರೂರ ಕಾರ್ಯಕ್ರಮ ಉದ್ಫಾಟಿಸಿದರು. ಹಿರಿಯ ಸಾಹಿತಿ ಕಾ.ಹೊ.ಶಿಂಧೆ, ಬಾಳೇಶ ಬಸರಗಿ, ಮಹಾತ್ಮ ಪುಲೆ ಐ.ಟಿ.ಐ ಕಾಲೇಜಿನ ಟಿ.ಎನ್.ಚೌಗಲಾ, ಪ್ರಕಾಶ ಹೊಸಮನಿ, ಸಿ.ಆರ್.ಸಿ ರಾಜಗೋಪಾಲ ಮಿತ್ರನ್ನವರ, ಕರ್ನಾಟಕ ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಬಸವರಾಜ ನಾಗನೂರಿ, ಕಾ.ರಾ.ಸ.ನೌ ಸಂಘ ಯೋಜನಾ ಘಟಕ ಹಿಡಕಲ್ ಡ್ಯಾಮ್ ನಿರ್ದೇಶಕ ಎನ್.ಎಮ್.ದುರದುಂಡಿ, ಶಿಕ್ಷಕಿ ಎ.ಜಿ.ಕಾಂಬಳೆ, ಉದಯಕುಮಾರ ಕಂಬಾರ, ಬಿ.ಎಸ್.ಮಾನೆ ಎಮ್.ಬಿ.ಕಮತೆ, ಲಕ್ಷ್ಮಣ ಪೂಜೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಸ್ತೂರಿ ಹುರಳಿ ಕಾರ್ಯಕ್ರಮ ನಿರೂಪಿಸಿದರು