ಗೋಕಾಕ: ತಾಲೂಕಿನ ಕುಂದರಗಿ ಗ್ರಾಮದ ಶ್ರೀ ಉಜ್ಜೇಶ್ವರ ಸಂಸ್ಥಾನ ಮಠದ ವತಿಯಿಂದ ಪ್ರತಿವರ್ಷ ಆಯೋಜಿಸುತ್ತೀರುವ ಸಾಮಾಜಿಕ ಶೈಕ್ಷಣೀಕ ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಶಂಸನೀಯವಾದದ್ದು ಎಂದು ಅಂಕಲಗಿ ಶ್ರೀ ಅಡವಿಸಿದ್ದೇಶ್ವರ ಮಠದ ಗುರುಸಿದ್ದ ಮಹಾಸ್ವಾಮಿಗಳು ಹೇಳಿದರು.
ಅವರು ರವಿವಾರ ದಿ 03 ರಂದು ಶ್ರೀ ಉಜ್ಜೇಶ್ವರ ಸಂಸ್ಥಾನ ಹಿರೇಮಠ ಪಾಶ್ಚಾಪೂರ ಕುಂದರಗಿಯಲ್ಲಿ ನಡೆದ ಶ್ರೀ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳವರ ಗುರುಪಟ್ಟಾಧೀಕಾರ, ಚತುರ್ಥ ವರ್ಧಂತಿ ಮಹೋತ್ಸವ ಮತ್ತು ಲಿಂ ಶ್ರೀ ಉಜ್ಜೇಶ್ವರ ಶಿವಾಚಾರ್ಯರ 87ನೇ ಪುಣ್ಯ ಸ್ಮರಣೊತ್ಸವ ಹಾಗೂ 22ನೇ ವೀರಶೈವ ಪರಿಷತ್ತು ಧರ್ಮ ಸಮಾರಂಭದಲ್ಲಿ ಮಾತನಾಡಿದರು. ಈ ಭಾಗದಲ್ಲಿ ವೈಶಿಷ್ಟ್ಯ ಪೂರ್ಣ ವಿಶೇಷ ಕಾರ್ಯಕ್ರಮಗಳು ಶ್ರೀ ಮಠದಿಂದ ನಡೆಯುತ್ತಿದೆ ಕಳೇದ ವರ್ಷ ಪುಸ್ತಕ ಜೋಳಿಗೆ ಕಾರ್ಯಕ್ರಮ, ಈ ವರ್ಷ ಕೋರೆನಾ ವಾರಿಯರ್ಸಗೆ ಸನ್ಮಾನ ಹಾಗೂ ಸಾಧಕರಿಗೆ ಸತ್ಕಾರ ಆಯೋಜಿಸಿದ್ದು ತುಂಬಾ ಶ್ಲಾಘನೀಯವಾಗಿದೆ ಎಂದು ಶ್ರೀ ಗುರುಸಿದ್ದ ಮಹಾಸ್ವಾಮಿಗಳು ಹೇಳಿದರು. ಮಠಾಧೀಶರಾದ ಶ್ರೀ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಜಗದ್ಗುರು ರೇಣುಕಾ ಚಾರ್ಯರ ಉಪದೇಶ ಮಾಡಿದಂತೆ ವೃತ್ತಿಯೇ ಚೈತನ್ಯ ರೂಪಿಣಿ ಅತಾರ್ಥ ಕಾಯಕವೇ ಕೈಲಾಸ ಎನ್ನುವ ವಾಣಿಯಂತೆ ಎಲ್ಲ ವೈದ್ಯ ಸಿಬ್ಬಂದಿ, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಪೋಲಿಸ್ ಇಲಾಖೆ ಸಿಬ್ಬಂದಿ ಹಾಗೂ ಸರಕಾರದ ಎಲ್ಲ ಅಧಿಕಾರಿ ಸಿಬ್ಬಂದಿ ವರ್ಗದವರು ತಮ್ಮ ಜೀವದ ಪ್ರಿತಿಯನ್ನೇ ಬದಿಗಿಟ್ಟು ನಮ್ಮ ಜೀವನ ಕಾಪಾಡಲು ಹಗಲಿರುಳು ಎನ್ನದೇ ಸೇವೆಗೈದಿದ್ದಾರೆ ಎಂದು ಹೇಳಿದರು.
ಇಂತಹ ಸೇವೆಗೈದ ಕೋರೊನಾ ಸೈನಿಕರಿಗೆ ಶ್ರೀ ರಕ್ಷೆ ನೀಡಿ ಗೌರವಿಸಲಾಯಿತು. ನಂತರ ಕುಂದರಗಿ ಶ್ರೀ ಅಡವಿಸಿದ್ದೇಶ್ವರ ಮಠದ ಅಮರ ಸಿದ್ದೇಶ್ವರ ಮಹಾಸ್ವಾಮಿಗಳು ಮಾತನಾಡಿ ಕರೊನಾ ಕಾಲಾವಧಿಯಲ್ಲಿ ನಮ್ಮ ರಕ್ಷಣೆ ಮಾಡಿದ ಕೊರೊನಾ ಸೈನಿಕರ ಕಾರ್ಯಸೇವೆಯು ಸ್ಮರಣೀಯವಾದದ್ದು ಎಂದು ಹೇಳಿದರು. ಈ ಸಂದರ್ಭದಲ್ಲಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಸ್ವಾಮಿಗಳು, ದೋರನಹಳ್ಳಿ ಶ್ರೀ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಹಣಬರಟ್ಟಿಯ ಬಸವಲಿಂಗ ಮಹಾಸ್ವಾಮಿಗಳು, ಉ.ಖಾನಾಪೂರದ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಮತ್ತು ಸಿದ್ದಲಿಂಗ ದೇವರು, ಮೊದಲಾದ ಶ್ರೀಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶ್ರೀ ಚಂದ್ರಶೇಖರ ಶಾಸ್ತ್ರಿಗಳು, ಸಂಪತ್ತಕುಮಾರ ಶಾಸ್ತ್ರಿಗಳು, ಮತ್ತು ಶಿವಲಿಂಗಯ್ಯಾ ಶಾಸ್ತ್ರಿಗಳು, ಮಹೇಶಕುಮಾರ ಶಾಸ್ತ್ರಿಗಳು ಇವರು ಕರ್ತೃ ಉಜ್ಜೇಶ್ವರ ಗದ್ದುಗೆಗೆ ಮಹಾರುದ್ರಾಭೀಷೇಕ ಬಿಲ್ವಾರ್ಚನೆ ಮಹಾಮಂಗಲ ಕಾರ್ಯಕ್ರಮ ನಡೆಸಿಕೊಟ್ಟರು. ಬೆಂಗಳೂರಿನ ಶ್ರೀಮತಿ ಗಾಯತ್ರಿ ಚಂದ್ರಶೇಖರ, ಡಾ|| ಸ್ಪೂರ್ತಿ ಮಾಸ್ತಿಹೊಳಿ ಇವರಿಗೆ ಉಜ್ಜೇಶ್ವರ ಸಾಧನಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಭಾರತೀಯ ಶೃಜನಶೀಲ ಕನ್ನಡ ಸಾಹಿತ್ಯ ಮಹಿಳಾ ಘಟಕ (ಹುಕ್ಕೇರಿ ತಾಲೂಕ),ರವಿ ಬೇಳಗೇರಿ ಕುರಿತಾದ ನುಡಿನಮನ ಸಲ್ಲಿಸುವ ಪುಸ್ತಕ ರವಿ ಬೇಳಗೇರಿ ಸಾಹಿತ್ಯ ಲೋಕದ ಬೆಳ್ಳಿಗೇರೆ ಪುಸ್ತಕ ಲೋಕಾರ್ಪಣೆ ಮಾಡಲಾಯಿತು. ಸೃಜನ ಶೀಲ ಕನ್ನಡ ಸಾಹಿತ್ಯ ಬಳಗ ಹುಕ್ಕೇರಿ ತಾಲೂಕಾ ಅಧ್ಯಕ್ಷರಾಗಿ ಶಿಕ್ಷಕ ಸಾಹಿತ್ಯಿ ಗುರಪ್ಪ ಮಾಳಗಿ ಇವರನ್ನು ಪದಗೃಹಣ ಮಾಡಿದರು. ಚನ್ನಬಸಪ್ಪ ಚೌಗಲಾ ಸ್ವಾಗತಿಸಿದರು. ಭಾರತೀಯ ಸೃಜನಶೀಲ ಕನ್ನಡ ಸಾಹಿತ್ಯ ಬಳಗದ ರಾಜ್ಯಾಧ್ಯಕ್ಷ ಶ್ರೀಧರ ಆಸಂಗಿಹಾಳ, ಕಾರ್ಯಕ್ರಮ ನಿರೂಪಿಸಿದರು.