ಹುಕ್ಕೇರಿ: ತಾಲೂಕಿನ ಹಿಡಕಲ್ ಡ್ಯಾಮಿನ ವಿಶ್ವೇಶ್ವರಯ್ಯಾ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಬಸವ ದಳ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು (ರಿ) ತಾಲೂಕಾ ಘಟಕ ಹುಕ್ಕೇರಿ ಕರ್ನಾಟಕ ರಾಜ್ಯ ಎಸ್.ಸಿ.ಎಸ್.ಟಿ ಪ್ರಾಥಮಿಕ/ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘ ಹುಕ್ಕೇರಿ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾಯಕಯೋಗಿ ನಿಜಶರಣ ಶ್ರೀ ಮಾದರ ಚನ್ನಯ್ಯರ ಜಯಂತಿ ಹಾಗೂ ಭಾರತದ ಪ್ರಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿ ಪುಲೆ ಇವರ ಜನ್ಮ ದಿನ ಸಮಾರಂಭದಲ್ಲಿ ಶಿಕ್ಷಣ ಪ್ರೇಮಿ ಸಮಾಜ ಸೇವಕ ವಿಶ್ವೇಶ್ವರ ಪ್ರೌಢಶಾಲೆಯ ಅಧ್ಯಕ್ಷ ಬಸವರಾಜ ಖಡಕಬಾಂವಿ ಇವರನ್ನು ಸನ್ಮಾನಿಸಲಾಯಿತು.