ಗೋ ರಕ್ಷಕರ ಕನಸು ನನಸು ಮಾಡಿದ ಸರ್ಕಾರದ ಕ್ರಮ ರಾಜ್ಯದಲ್ಲಿ ಹೊಸ ಇತಿಹಾಸ ಸೃಷ್ಠಿಸಿದೆ, ಡಾ.ಸೋನಾಲಿ

  • 5 Jan 2024 , 8:28 PM
  • Belagavi
  • 203

ಬೆಳಗಾವಿ: ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸುವದು, ಗೋರಕ್ಷಕರ ಬಹುದಿನಗಳ ಕನಸಾಗಿತ್ತು ಆದರೆ ಈಗ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಲಕ್ಷಾಂತರ ಗೋ ರಕ್ಷಕರ ಕನಸು ನನಸು ಮಾಡಿದ ಸರ್ಕಾರದ ಕ್ರಮ ರಾಜ್ಯದಲ್ಲಿ ಹೊಸ ಇತಿಹಾಸ ಸೃಷ್ಠಿಸಿದೆ ಎಂದು ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯೆ ಡಾ.ಸೋನಾಲಿ ಸರ್ನೋಬತ್ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸರ್ಕಾರ ಹೊರಡಿಸಿದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕುವ ಮೂಲಕ, ರಾಜ್ಯದ ಹಿತವನ್ನು ಕಾಪಾಡಿದ್ದು ಅಭಿನಂದಾರ್ಹ ಸಂಗತಿಯಾಗಿದೆ. ಸರ್ಕಾರ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಸಮರ್ಪಕವಾಗಿ ಜಾರಿ ಗೊಳಿಸುವ ಮೂಲಕ ನುಡಿದಂತೆ ನಡೆದಿದೆ.

logintomyvoice

ಕೊಟ್ಟ ಭರವಸೆ ಈಡೇರಿಸುವ ಮೂಲಕ ಜನರ ಪ್ರೀತಿಗೆ ಪಾತ್ರವಾಗಿದೆ ಎಂದು ಡಾ.ಸೋನಾಲಿ ಸರ್ಕಾರದ ದಿಟ್ಟ ಕ್ರಮವನ್ನು ಸ್ವಾಗತಿಸಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾದ ಸಂಧರ್ಭದಲ್ಲಿ ತಾನು ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯೆಯಾಗಿದ್ದು ನನ್ನ ಪೂರ್ವಜನ್ಮದ ಪುಣ್ಯವಾಗಿದೆ. ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ತನ್ನ ಜವಾಬ್ದಾರಿ ನಿಭಾಯಿಸಿದೆ.

ನಾನು ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯೆಯಾಗಿ ರಾಜ್ಯಾದ್ಯಂತ ಸಂಚರಿಸಿ ಕಾಯ್ದೆ ಅನುಷ್ಠಾನದ ಮೇಲೆ ನಿಗಾವಹಿಸುತ್ತೇನೆ ಎಂದು ಡಾ. ಸೋನಾಲಿ ಹೇಳಿದ್ದಾರೆ.

ಸೊಸೈಟಿ ಫಾರ್ ಪ್ರಿವೆಂಟಷನ್ ಆಫ್ ಅನಿಮಲ್ ಕ್ರುಯಾಲಿಟಿ ಸಮಿತಿ (SPCA)ಕುರಿತು ಡಾ.ಸೋನಾಲಿ ಸರ್ನೋಬತ್ ಚರ್ಚೆ

ಕರ್ನಾಟಕದಲ್ಲಿ ಈಗ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದು ಈ ಕಾಯ್ದೆಉಲ್ಲಂಘನೆ ಮಾಡುವವರ ಮೇಲೆ ನಿರಂತರವಾಗಿನಿಗಾಇಡಲಾಗುವದು,ರಾಜ್ಯದವಿವಿಧಜಿಲ್ಲೆಗಳಿಗೆಅನಿರೀಕ್ಷಿತಭೇಟಿನೀಡಿಕಾಯ್ದೆಉಲ್ಲಂಘನೆಮಾಡುವವರಮೇಲೆನಿಗಾಇಡುವದು ನಮ್ಮ ಜವಾಬ್ದಾರಿಯಾಗಿದ್ದು ಈ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿಭಾಯಿಸುವ ಸಂಕಲ್ಪ ಮಾಡಿರುವದಾಗಿ ಡಾ.ಸೋನಾಲಿಸರ್ನೋಬತ್ ತಿಳಿಸಿದ್ದಾರೆ.

Read All News