ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಬೇಡ, ರವಿ ಜಿಂಡ್ರಾಳಿ ಕಿವಿಮಾತು

  • 23 Dec 2023 , 2:32 PM
  • Belagavi
  • 101

ಹುಕ್ಕೇರಿ : ಗ್ರಾಮ ಪಂಚಾಯತ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ಅಭಿವೃದ್ದಿ ವಿಷಯದಲ್ಲಿ ರಾಜಕೀಯ ಮಾಡದೆ, ಪಕ್ಷಾತಿತವಾಗಿ ಗ್ರಾಮದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಬೇಕು ಎಂದು ಯುವ ಧುರೀಣ ರವೀಂದ್ರ ಜಿಂಡ್ರಾಳಿ ಕಿವಿಮಾತು ಹೇಳಿದರು.

ಅವರು ಮಂಗಳವಾರ ಯಮಕನಮರಡಿ ಆರ.ಸಿ. ಗ್ರಾಮದಲ್ಲಿ ಇತ್ತಿಚಿಗೆ ನಡೆದ ಹತ್ತರಗಿ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಯಮಕನಮರಡಿ ಆರ.ಸಿ ವಾರ್ಡದಿಂದ ವಿಜಯಶಾಲಿಯಾದ ನೂತನ ಸದಸ್ಯರಿಗೆ ಸತ್ಕರಿಸಿ ಮಾತನಾಡಿದ ಜಿಂಡ್ರಾಳಿ ಶಾಸಕ ಸತೀಶ ಜಾರಕಿಹೊಳಿ ಅವರು ನಮ್ಮ ಗ್ರಾಮದ ಸರ್ವತೋಮುಖ ಅಭಿವೃದ್ಧಿ ಮಾಡಲು ಕಂಕಣಬದ್ದರಾಗಿದ್ದು ನಾವೆಲ್ಲರೂ ಅವರ ಮಾರ್ಗದರ್ಶನದಲ್ಲಿ ಸಾಗೋಣ ಶಾಸಕ ಸತೀಶ ಜಾರಿಕಿಹೊಳಿ ಅವರ ಸಹಕಾರ ಮತ್ತು ಮಾರ್ಗದರ್ಶನದಲ್ಲಿ ಸರಕಾರದ ಯೋಜನೆಗಳು ಅನುಷ್ಠಾನಕ್ಕೆ ತಂದು ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕು.

ಗೆದ್ದವರು ಸೊತವರೊಂದಿಗೆ ಕೂಡಿಕೊಂಡು ಪರಸ್ಪರ ಸಹಕಾರದೊಂದಿಗೆ ಗ್ರಾಮದ ಅಭಿವೃದ್ದಿಗೆ ಬಗ್ದರಾಗಿರಬೇಕೆಂದು ಯುವ ಧುರೀಣ ರವೀಂದ್ರ ಜಿಂದ್ರಾಳಿ ಕರೆ ನೀಡಿದರು. ಹತ್ತರಗಿ ಗ್ರಾಮಪಂಚಾಯಿತಿಗೆ ಯಮಕನಮರಡಿ ಆರ.ಸಿ ವಾರ್ಡದಿಂದ ಚುನಾಯಿತರಾದ ಬಸವರಾಜ ಕೋಟೆವಾಲೆ, ಯಲ್ಲಪ್ಪಾ ಮೇಕಲಿ, ಬಳ್ಳಾರಿ ಪಾತ್ರೋಟ ಗೌರವ್ವ ಹುದ್ದಾರ, ಬಾಳವ್ವ ಮಗದುಮ್ಮ, ಕಸ್ತೂರಿ ತವಕರಿ, ಸಮೀರ ಬೇಪಾರಿ, ಬೀಬಿಜಾನ ಫನಿಬಂದ ಇವರನ್ನು ಸತ್ಕರಿಸಿಲಾಯಿತು ಈ ಸಂದರ್ಭದಲ್ಲಿ ಹುಕ್ಕೇರಿ ತಾ.ಪಂ. ಅಧ್ಯಕ್ಷ ದಸ್ತಗೀರ ಬಸಾಪುರಿ, ರಾಮ ಚೌಗಲಾ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Read All News