ಖಾಲಿ ಬಂಡಿ ಶರತ್ತು ಮತ್ತು ಕ್ರಿಕೇಟ ಪಂದ್ಯಾವಳಿ ಉದ್ಘಾಟಿಸಿದ ರಾಹುಲ ಜಾರಕಿಹೊಳಿ

  • 30 Dec 2023 , 12:11 AM
  • Belagavi
  • 103

ಹುಕ್ಕೇರಿ: ತಾಲೂಕಿನ ಕರಗುಪ್ಪಿ ಗ್ರಾಮದಲ್ಲಿ 28ನೇ ವರ್ಷದ ಶ್ರೀ ಬಸವಣ್ಣ ದೇವರ ಕಾರ್ತಿಕೋತ್ಸವ ಕಾರ್ಯಕ್ರಮ ನಿಮಿತ್ಯ ಹಮ್ಮಿಕೊಂಡಿದ್ದ ಖಾಲಿ ಗಾಡಿ ಓಡಿಸುವ ಭಾರಿ ಷರತ್ತು ಮತ್ತು ಕರಗುಪ್ಪಿ ಗ್ರಾಮದ ಟಾರ್ಗೇಟ್ ಕ್ರಿಕೇಟ್ ಕ್ಲಬ್ ನವರು ಆಯೋಜಿಸಿದ ಕ್ರಿಕೇಟ ಪಂದ್ಯಾವಳಿಯನ್ನು ಯುವ ಧುರೀಣ ರಾಹುಲ ಜಾರಕಿಹೊಳಿ ಮತ್ತು ಸಂಜು ಪಾಟೀಲ ಗುರುವಾರ ದಿ. 07 ರಂದು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಲಗೌಡ ಪಾಟೀಲ, ಮಾರುತಿ ನಾಯಿಕ, ಗಂಗಪ್ಪ ಕಂಟಿಕಾರ, ಗುರುಸಿದ್ದ ಪಾಯನ್ನವರ, ಯಲ್ಲಪ್ಪ ಜೋರ್ಲಿ, ಅಶೋಕ ಚೌಗಲಾ, ಆನಂದ ಚೌಗಲಾ, ಸೋಮಲಿಂಗ ಜೋರ್ಲಿ, ಹುಕ್ಕೇರಿ ಗ್ರಾಮೀಣ ವಿದ್ಯುತ ಸಂಘದ ನಿರ್ದೇಶಕ ಈರಪ್ಪ ರು. ಬಂಜಿರಾಮ, ಮಾರುತಿ ಕುದರಿ, ಮಲಿಕಜಾನ್ ದೇಸಾಯಿ, ಲಗಮಣ್ಣಾ ಪೂಜೇರಿ, ಶ್ರೀಕಾಂತ ಚೌಗಲಾ, ಎನ್.ಎಸ್.ಮೋಮಿನ, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Read All News