ಪ್ರಾಣಿ ಹಿಂಸೆ ತಡೆ ಸಮಿತಿ ರಚನೆ ಸೇರಿದಂತೆ ಇತರೆ ನಾಲ್ಕು ಬೇಡಿಕೆಗಳಿಗೆ ನಗರಾಭಿವೃದ್ಧಿ ಸಚಿವರಿಗೆ ಡಾ.ಸೋನಾಲಿ ಸರ್ನೋಬತ್ ಮನವಿ

  • 15 Jan 2024 , 2:30 AM
  • Belagavi
  • 99

ಬೆಳಗಾವಿ: ಪ್ರಾಣಿಗಳಿಗೆ ಆಂಬ್ಯುಲೆನ್ಸ್ ಸೇವೆ ಒದಗಿಸಬೇಕು, ಬೀದಿ ನಾಯಿ, ಹಸುಗಳು ಇತರೆ ಪ್ರಾಣಿಗಳಿಗೆ ಆಶ್ರಯ ಸೇರಿದಂತೆ ನಾಲ್ಕು ಬೇಡಿಕೆಗಳನ್ನು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಅವರಿಗೆ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯೆ ಡಾ.ಸೋನಾಲಿ ಸರ್ನೋಭತ್ ಮನವಿ ಮಾಡಿದ್ದಾರೆ.

ನಗರದಲ್ಲಿ ಗೋಮಾಂಸ ಮಾರುಕಟ್ಟೆ ನಗರದ ಮಧ್ಯದಲ್ಲಿದೆ, ಅದು ಕಂಟೋನ್ಮೆಂಟ್‌ನ ವಲಯದಲ್ಲಿರುವುದರಿಂದ ಇಲ್ಲಿಯ ಹಸಿರು ವಲಯಕ್ಕೆ ಹಾಗೂ ಮತ್ತು ಸುತ್ತಮುತ್ತಲಿನ ಜನರ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ ಆದ್ದರಿಂದ ಇದನ್ನು ತಕ್ಷಣವೇ ಬೆಳಗಾವಿಯ ಹೊರವಲಯಕ್ಕೆ ಸ್ಥಳಾಂತರ ಮಾಡಬೇಕು. ನಗರದಲ್ಲಿ ದಿನದಿಂದ ದಿನಕ್ಕೆ ಬೀದಿ ಹಸುಗಳು, ನಾಯಿಗಳು ಹೆಚ್ಚಾಗುತ್ತಿದ್ದು ಇವುಗಳಿಗೆ ಸೂಕ್ತವಾದ ಆಶ್ರಯ ತಾಣ ಒದಗಿಸಿ ಕೊಡಬೇಕು.

ಈ ಬಗ್ಗೆ ಮೇಲಿಂದ ಮೇಲೆ ಪಶು ಸಂಗೋಪಣೆಯ ಉಪ ನಿರ್ದೇಶಕರಿಗೆ ಹಲವು ಭಾರಿ ಮನವಿ ಮಾಡಿದರು ಪ್ರಯೋಜನ ಆಗಿಲ್ಲ. ಜಿಲ್ಲೆಯಲ್ಲಿ ಪ್ರಾಣಿ ಹಿಂಸೆ ತಡೆ ಸಮಿತಿಯು ಇದುವರೆಗೆ ಜಿಲ್ಲೆಯಲ್ಲಿ ರಚನೆಯಾಗಿಲ್ಲ ಆದ್ದರಿಂದ ಈ ವಿಷಯವನ್ನು ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ನಿರ್ದೇಶನ ನೀಡಬೇಕೆಂದು ಡಾ.ಸೋನಾಲಿ ಸಚಿವರಿಗೆ ಮನವಿ ಮಾಡಿದ್ದಾರೆ.

Read All News