ಹುಕ್ಕೇರಿ: ತಾಲೂಕಿನ ಕರಗುಪ್ಪಿ ಗ್ರಾಮದ ಶ್ರೀ ಬಸವಣ್ಣ ದೇವರ 28 ನೇ ವರ್ಷದ ಕಾರ್ತಿಕ ಮಹೋತ್ಸವ ಕಾರ್ಯಕ್ರಮದಲ್ಲಿ ಸಮಾಜ ಸೇವಕರು ರಾಜ್ಯ ಮಟ್ಟದ ಸೇವಾ ರತ್ನ ಪ್ರಶಸ್ತಿ ಪಡೆದ ಅಶೋಕ ಘೂಳಪ್ಪ ಚೌಗಲಾ ಇವರ ನೇತೃತ್ವದಲ್ಲಿ ಗುರುವಾರ ದಿ 02 ರಂಧು ನೂತನವಾಗಿ ಕರಗುಪ್ಪಿ ಗ್ರಾಮ ಪಂಚಾಯತಿಯ ಸದಸ್ಯರಿಗೆ ಮತ್ತು ವಿವಿಧ ಗಣ್ಯರಿಗೆ ಸನ್ಮಾನ ಸಮಾರಂಭವು ಜರುಗಿತು. ಕಾರ್ಯಕ್ರಮದ ಸಾನಿಧ್ಯವನ್ನು ಕುಂದರಗಿ ಅಡವಿ ಸಿದ್ದೇಶ್ವರ ಮಠದ ಶ್ರೀ ಅಮರ ಸಿದ್ದೇಶ್ವರ ಮಹಾಸ್ವಾಮಿಗಳು ವಹಿಸಿದ್ದರು.
ನೂತನ ಗ್ರಾಮದ ಗೌಡರಾದ ಸಂಜೀವ ಬಸವಣ್ಣಿ ಪಾಟೀಲ ಪಾಶ್ಚಾಪೂರ, ಜಿಲ್ಲಾ ಪಂಚಾಯತ ಸದಸ್ಯ ಮಂಜುನಾಥ ಪಾಟೀಲ, ತಾ.ಪಂ ಸದಸ್ಯೆ ಅಶ್ವೀನಿ ಹನುಮಂತ ಗುಟಗುದ್ದಿ, ಬಿ.ಜೆ.ಪಿ ರೈತ ಮೊರ್ಚಾ ಅಧ್ಯಕ್ಷ ಶಿದ್ದಲಿಂಗ ಸಿದ್ದಗೌಡರ, ಹುಕ್ಕೇರಿ ಪಿ.ಎಲ್.ಡಿ ಬ್ಯಾಂಕಿನ್ ಉಪಾಧ್ಯಕ್ಷ ದುರದುಂಡಿ ಪಾಟೀಲ, ಹುಕ್ಕೇರಿ ಗ್ರಾಮೀಣ ವಿದ್ಯುತ ಸಂಘದ ನಿರ್ದೇಶಕ ಈರಪ್ಪ ರುದ್ರಪ್ಪ ಬಂಜಿರಾಮ, ಮಾನಿಕರಾವ್ ಪಾಟೀಲ, ಕೆಂಪಣ್ಣ ವಂಟಮೂರಿ, ಅಶೋಕ ಮಠದ, ಲಗಮೋಜಿ ಪೂಜೇರಿ, ಪಾಶ್ಚಾಪೂರ ಎ.ಎಸ್.ಮುಲ್ಲಾ, ಗ್ರಾಮ ಪಂಚಾಯತ ಸದಸ್ಯರಾದ ಶ್ರೀಕಾಂತ ಚೌಗಲಾ,
ಇನ್ನುಳಿದ ಗ್ರಾಮ ಪಂಚಾಯತ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅರಭಾಂವಿ ಮಠದ ಜಾನಪದ ಗಾನ ಕೋಗಿಲೆ ಸಾವಿರ ಹಾಡಿನ ಸರದಾರ ಬಸವರಾಜ ಘೀವಾರಿ, ಹಾಗೂ ಕಲಾ ಬಳಗದಿಂದ ಮತ್ತು ಖ್ಯಾತ ಗಾಯಕಿಯರಿಂದ ಜಾನಪದ ರಸಮಂಜರಿ ಹಾಗೂ ಕಾಮಿಡಿ ನಗೆ ಹಬ್ಬ ಕಾರ್ಯಕ್ರಮವು ಜರುಗಿತು ಸಮಾಜ ಸೇವಕರಾದ ಅಶೋಕ ಚೌಗಲಾ ಅವರ ನೇತೃತ್ವದಲ್ಲಿ ಸುತ್ತ ಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಪಾಲ್ಗೊಂಡು ರಸಮಂಜರಿ ರಸದೂತನ ಸವಿದರು.