ಸಂಪಗಾಂವಿಗೆ ತಂದಿಟ್ಟ ಅಜ್ಮೀರ ಸಂಕಟ; ಸಂಪಗಾವ ಗ್ರಾಮ ಸೀಲ್ ಡೌನ್

  • 14 Jan 2024 , 11:11 PM
  • Belagavi
  • 139
ಬೈಲಹೊಂಗಲ: ತಾಲೂಕಿನ ಸಂಪಗಾಂವ ಗ್ರಾಮದಲ್ಲಿ ಕ್ವಾರಂಟೈನ್‌ದಲ್ಲಿದ್ದ ಇಬ್ಬರಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಗುರುವಾರ ಗ್ರಾಮವನ್ನು ಸಂಪೂರ್ಣ ಬಂದ್ ಮಾಡಿ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ . ಏಳು ಜನರಲ್ಲಿ ಇಬ್ಬರಿಗೆ ಸೋಂಕು ದೃಢವಾಗುತ್ತಿದ್ದಂತೆ ತಾಲೂಕಾಡಳಿತ ಗ್ರಾಮದ ಕ್ವಾರಂಟೈನ್ ಸ್ಥಳದ 200 ಮೀಟರ್ ಪ್ರದೇಶವನ್ನು ಸಂಪೂರ್ಣ ಸೀಲ್‌ಡೌನ್ ಮಾಡಿ ಅಂಗಡಿ ಮುಂಗಟ್ಟುಗಳನ್ನು ಬಂದ್‌ಮಾಡಿಸಲಾಗಿದ್ದು. ಬೈಲಹೊಂಗಲ ತಾಲೂಕಿನಲ್ಲಿ ಈ ವರೆಗೂ ಯಾವುದೇ ಪ್ರಕರಣ ಕಂಡುಬಂದಿರಲಿಲ್ಲ ಆದರೆ ಸದ್ಯ ತಾಲೂಕಿ ಜನರಲ್ಲಿ ಭಯದ ವಾತಾವರಣ ಮೂಡಿದ್ದು ಸಂಪಗಾಂವ ಗ್ರಾಮದ 7 ಜನರು ಅಜ್ಮೀರದಿಂದ ಆಗಮಿಸುತ್ತಿದ್ದಂತೆ ಅವರ ಗಂಟಲು ದ್ರವವನ್ನು ಪರೀಕ್ಷೆಗೆ ರವಾನಿಸಲಾಗಿತ್ತು ಅದರಲ್ಲಿ ಇಬ್ಬರಿಗೆ ಕೋರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ ಈಗಾಗಲೆ ಸೋಂಕಿತರ ಸಂಬಂಧಿಕರನ್ನು ಕ್ವಾರಂಟೈನ್ ಮಾಡಲಾಗಿದ್ದು ಸಾರ್ವಜನಿಕರು ತಮ್ಮ ಆರೋಗ್ಯದ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ಓಡಾಡ ಬೇಕಿದೆ
ಒಂದು ವೇಳೆ ಮಾಸ್ಕ ದರಿಸದೆ ಇದ್ದಲ್ಲಿ ದಂಡ ವಿಧಿಸಲಾಗುವದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Read All News