ಭಾರತೀಯ ಸೇನೆಯ ಬಗ್ಗೆ ನಿಮಗೆಷ್ಟು ಗೊತ್ತು...?

  • 15 Jan 2024 , 1:03 AM
  • Delhi
  • 116

ಜನವರಿ15, 1949 ರಂದು, ಭಾರತೀಯ ಸೇನೆಯ ಆಜ್ಞೆಯು ಬ್ರಿಟಿಷ್ ಜನರಲ್ ಫ್ರಾನ್ಸಿಸ್ ಬುತ್ಚೆರ್ ಅವರಿಂದ ಫೀಲ್ಡ್ ಮಾರ್ಷಲ್ ಕೆ.ಎಂ.ಕರಿಯಪ್ಪ ಅವರ ಕೈಗೆ ಬಂದಿತು. ಇದರೊಂದಿಗೆ, ಬ್ರಿಟಿಷ್ ಪದವನ್ನು ಬ್ರಿಟಿಷ್ ಭಾರತೀಯ ಸೇನೆಯಿಂದ ಶಾಶ್ವತವಾಗಿ ತೆಗೆದು ಹಾಕಿ ಅದನ್ನು ಭಾರತೀಯ ಸೇನೆ ಎಂದು ಕರೆಯಲಾಯಿತು.

logintomyvoice

ಫೀಲ್ಡ್ ಮಾರ್ಷಲ್ ಕೆ.ಎಂ.ಕರಿಯಪ್ಪ ಅವರು ಸ್ವಾತಂತ್ರ್ಯ ಭಾರತದ ಮೊದಲ ಸೇನಾ ಮುಖ್ಯಸ್ಥರಾದರು. ಅಂದಿನಿಂದ ಪ್ರತಿ ವರ್ಷ ಜನವರಿ 15 ರಂದು ಸೇನಾ ದಿನವೆಂದು ಆಚರಿಸಲಾಗುತ್ತದೆ. ಭಾರತೀಯ ಸೇನೆಯನ್ನು ಸ್ವಾತಂತ್ರ್ಯದವರೆಗೂ ಬ್ರಿಟಿಷ್ ಭಾರತೀಯ ಸೇನೆ ಎಂದು ಕರೆಯಲಾಗುತ್ತಿತ್ತು.

logintomyvoice

ಆದರೆ ಜನವರಿ 15, 1949 ರಂದು, ಭಾರತೀಯ ಸೇನೆಯು ತನ್ನ ಮೊದಲ ಭಾರತೀಯ ಕಮಾಂಡರ್ ಇನ್ ಚೀಫ್ ಅನ್ನು ಪಡೆದುಕೊಂಡಿದೆ. ಭಾರತೀಯ ಸೇನೆಯು ಅಭಿವೃದ್ಧಿ ಹೊಂದಿದ್ದು, ವಿಶ್ವದಲ್ಲಿಯೇ ಅತೀ ದೊಡ್ಡ ಸೇನೆಯೆಂಬ ಪಾತ್ರಕ್ಕೆ ಒಳಗಾಗಿದೆ. ಭಾರತೀಯ ಸೈನ್ಯಕ್ಕೆ ಮಹಿಳೆಯರು ಮತ್ತು ಪುರುಷರು ಸ್ವ ಇಚ್ಛೆಯಿಂದ ಸೇರುತ್ತಿರುವುದು ಹೆಮ್ಮೆಯ ವಿಷಯ. 

logintomyvoice

ಸೇನಾದಿನಾಚರಣೆಪ್ರಯುಕ್ತದೇಶದನಾಯಕರುಯೋಧರನ್ನುಸ್ಮರಿಸಿಅವರತ್ಯಾಗ, ಬಲಿದಾನಗಳನ್ನುಕೊಂಡಾಡಿದ್ದಾರೆ

ಸೇನಾ ದಿನದ ಅಂಗವಾಗಿ ಭಾರತೀಯ ಸೇನೆಯ ಪರಾಕ್ರಮಿ ಮಹಿಳಾ ಮತ್ತು ಪುರುಷ ಸಿಬ್ಬಂದಿಗೆ ಅಭಿನಂದನೆಗಳು. ದೇಶದ ವಿಷಯ ಬಂದಾಗ ತಮ್ಮ ಜೀವವನ್ನು ಬದಿಗೊತ್ತಿ ತ್ಯಾಗ, ಬಲಿದಾನ ಮಾಡಿದವರನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳೋಣ. ಭಾರತ ಯಾವಾಗಲೂ ಸೈನಿಕರ ಧೈರ್ಯ, ಬದ್ಧತೆ, ನಿವೃತ್ತ ಯೋಧರು ಮತ್ತು ಅವರ ಕುಟುಂಬದ ಪರವಾಗಿರುತ್ತದೆ ಎಂದು ರಾಷ್ಟ್ರಪತಿರಾಮನಾಥ್ಕೋವಿಂದ್ ಶುಭಕೋರಿದ್ದಾರೆ.

logintomyvoice

ನಮ್ಮ ಸೇನೆ ಪ್ರಬಲವಾಗಿದೆ, ಧೈರ್ಯಶಾಲಿಯಾಗಿದೆ. ಇದು ಯಾವಾಗಲೂ ದೇಶವನ್ನ ಹೆಮ್ಮೆ ಪಡುವಂತೆ ಮಾಡಿದೆ. ದೇಶದ ಜನರ ಪರವಾಗಿ ಭಾರತೀಯ ಸೇನೆಗೆ ನಮಸ್ಕರಿಸುವೆ ಎಂದು ಪ್ರಧಾನಿನರೇಂದ್ರಮೋದಿ ಟ್ವೀಟ್ ಮೂಲಕ ಸೇನಾ ದಿನಾಚರಣೆ ಶುಭಕೋರಿದ್ದಾರೆ.

Read All News