ಬೀಕರ ರಸ್ತೆ ಅಪಘಾತ ಸ್ಥಳದಲ್ಲೇ ಹನ್ನೊಂದು ಜನರ ಸಾವು

  • 14 Jan 2024 , 9:45 PM
  • Dharwad
  • 235

ಧಾರವಾಡ: ಟೆಂಪೋ ಟ್ರ್ಯಾವರ್ ಹಾಗೂ ಟಿಪ್ಪರ್ ನಡುವೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ 11ಜನರು ಸಾವನ್ನಪ್ಪಿರುವ ಘಟನೆ ಧಾರವಾಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಇಟ್ಟಿಗಟ್ಟಿ ಗ್ರಾಮದ ಬಳಿ ನಡೆದಿದೆ. ಹೌದು, ಇಂದು ಬೆಳಂಬೆಳ್ಳಗ್ಗೆ ಜವರಾಯ ಅಟ್ಟಹಾಸ ಮೆರದಿದ್ದು, ಗೋವಾ ಟೂರ್ ಗೆ ಹೊರಟಿದ್ದ 11ಜನರು ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದಾವಣಗೆರೆಯಿಂದ ಟೆಂಪೋ ಟ್ರ್ಯಾವರ್ ಮೂಲಕ ಗೋವಾಗೆ ತೆರಳುತಿದ್ದ ಹತ್ತು ಜನ ಮಹಿಳೆಯರು ಸೇರಿದಂತೆ ಓರ್ವ ಚಾಲಕ ಸೇರಿ ಹನ್ನೊಂದು ಜನರು ಇದ್ದರು.

logintomyvoice

ಇನ್ನೂ ಟಿಪ್ಪರ್ ಬೆಳಗಾವಿಯಿಂದ ಹುಬ್ಬಳ್ಳಿ ಕಡೆ ಹೊರಟಿದ್ದು, ನಸುಕಿನ ಜಾವ ಈ ದುರ್ಘಟನೆ ಸಂಭವಿಸಿದೆ‌. ಸ್ಥಳಕ್ಕೆ ಈಗಾಗಲೇ ಎಸ್.ಪಿ ಕೃಷ್ಣಕಾಂತ್ ಹಾಗೂ ಧಾರವಾಡ ಗ್ರಾಮೀಣ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತೀವ್ರವಾಗಿ ಗಾಯಗೊಂಡ ಐದಕ್ಕೂ ಹೆಚ್ಚು ಜನರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನೂ ಈ ಕುರಿತು ಧಾರವಾಡ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

logintomyvoice

Read All News