ಕಳ್ಳರನ್ನು ಹಿಡಿಯಲು ಹೋದ ಮಾಲಿಕ ಕಳ್ಳರಿಂದಲೇ ಸಾವು
- 14 Jan 2024 , 9:47 PM
- Belagavi
- 114
ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ಬೆಂಡವಾಡ ಗ್ರಾಮದ ತೋಟದ ಮನೆಗೆ ತಡರಾತ್ರಿ ಆರು ಜನರು ಕಳ್ಳರು ಕಳ್ಳತನಕ್ಕೆ ಯತ್ನಿಸಿದಾಗ ಮನೆಯ ಮಾಲಿಕ ಹಾಗೂ ಮಾಲಿಕನ ಮಗ ಕಳ್ಳರನ್ನು ಹಿಡಿಯಲು ಬೆನ್ನತ್ತಿದ್ದಾಗ ಕಳ್ಳರು ತಂದೆ, ಮಗನನ್ನು ಬಡೆದು ಹಲ್ಲೆ ನಡೆಸಿ ರಸ್ತೆ ಪಕ್ಕದಲ್ಲಿದ್ದ ಬಾವಿಗೆ ಎಸೆದು ಕಳ್ಳರು ಓಡಿ ಹೋದ ಘಟನೆ ನಡೆದಿದೆ. ಇನ್ನೂ ಹಲ್ಲೆಯಿಂದ ತಂದೆ ಸಾವನ್ನೊಪ್ಪಿದ್ದು ಮಗನನ್ನು ಗೋಕಾಕ ದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಮೃತ ವ್ಯಕ್ತಿಯನ್ನು ಬೆಂಡವಾಡ ಗ್ರಾಮದ ನಿವಾಸಿ ಮುಕುಂದ ಮೇತ್ರಿ (38) ಎಂದು ಗುರುತಿಸಲಾಗಿದ್ದು. ಇನ್ನೂ ಆತನ ಮಗ ರಾಘವೇಂದ್ರ ಮೇತ್ರಿ (23) ಗಂಭೀರ ಗಾಯವಾಗಿದ್ದರಿಂದ ಆತನನ್ನು ಗೋಕಾಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿಸಿದ್ದಾರೆ. ಘಟನಾ ಸ್ಥಳಕ್ಕೆ ರಾಯಬಾಗ ಪೊಲೀಸರು ಭೇಟಿ ನೀಡಿ ಪರಿಶೀಲಿನೆ ನಡೆಸಿದ್ದು ಕಳ್ಳರನ್ನು ಹಿಡಿಯಲು ಜಾಲ ಬೀಸಿದ್ದಾರೆ. ಈ ಕುರಿತು ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.