ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ರಾಜು ಶೇಠ್

  • 14 Jan 2024 , 10:08 PM
  • Belagavi
  • 134
ಬೆಳಗಾವಿ: ಕಿಲ್ಲರ್ ಕೋರೊನಾದಿಂದ ರಾಜ್ಯದ ಜನರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ನಿತ್ಯದ ದುಡಿಮೆಯನ್ನು ನಂಬಿ ಜೀವನ ಸಾಗಿಸುತ್ತಿರುವ ನೇಕಾರರು, ಆಟೋ ಚಾಲಕರು, ಬೀದಿ ವ್ಯಾಪಾರಸ್ಥರು ಬದುಕು ಸಾಗಿಸುವುದು ದುಸ್ತರವಾಗಿದೆ ಎಂದು ಬೆಳಗಾವಿ ಜಿಲ್ಲಾ ಕಾಂಗ್ರೇಸ್ ನಗರ ಸಮಿತಿಯಿಂದ ಇಂದು ಬೆಳಗಾವಿ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ರಾಜು ಶೇಠ ಕೋರೊನಾ ಹಾವಳಿಯಿಂದ ನೋಂದವರಿಗೆ ರಾಜ್ಯ ಸರ್ಕಾರ 50 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕಿತ್ತು ಆದರೆ 1610 ಕೋಟಿ ರೂ ಮಾತ್ರ ಘೋಷಣೆ ಮಾಡಿ ಜನತೆಗೆ ವಿಶ್ವಾಸ ದ್ರೋಹ ಬಗೆದಿದೆ. ಜಿಲ್ಲೆಯಲ್ಲಿ ಮೂರು ಜನ ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಜಿಲ್ಲಾಡಳಿತದಿಂದ ಒಂದು ರೂಪಾಯಿ ಕೂಡ ಪರಿಹಾರ ಧನವನ್ನು ನೀಡಿಲ್ಲ ಅವರಿಗೆ ತಕ್ಷಣವೇ 10 ಲಕ್ಷ ರೂಪಾಯಿಗಳ ಪರಿಹಾರ ಒದಗಿಸ ಬೇಕು ಎಂದು ರಾಜು ಶೇಠ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

Read All News