ಬೆಂಗಳೂರು: ನೂತನವಾಗಿ ಪ್ರಮಾಣವಚನ ಸ್ವೀಕರಿಸಿದ ಏಳು ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗುತ್ತಿದೆ ಹಾಗೂ ಸದ್ಯ ಇರುವ ಹಲವು ಸಚಿವರ ಖಾತೆಯಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ ಇದರಿಂದ ಮತ್ತೆ ಬಿಎಸ್ವೈ ಸಚಿವ ಸಂಪುಟದಲ್ಲಿ ಅಸಮಾಧಾನ ಭುಗಿಲೇಳುವ ಲಕ್ಷಣಗಳು ಕಂಡುಬರುತ್ತಿವೆ.
ಸಣ್ಣ ನೀರಾವರಿ ಖಾತೆ ಬದಲಾವಣೆಗೆ ಜೆ.ಸಿ. ಮಾಧುಸ್ವಾಮಿ ಆಕ್ರೋಶಗೊಂಡು ತಮ್ಮ ರಾಜೀನಾಮೆ ಪತ್ರವನ್ನು ತಮ್ಮ ಆಪ್ತ ಸಹಾಯಕನಿಗೆ ನೀಡಿ ಹೋಗಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿದೆ. ಹಾಗೂ ಸಚಿವರುಗಳಾದ ಗೋಪಾಲಯ್ಯ, ಸುಧಾಕರ್ ಸೇರಿದಂತೆ ಇನ್ನು ಕೆಲವು ಸಚಿವರ ಖಾತೆಗಳು ಬದಲಾಗುವ ಸಂಭವವಿದೆ ಎಂದು ಹೇಳಲಾಗುತ್ತಿದೆ.