ಪ್ರಧಾನಿ ಮೋದಿಗೆ ಶಬ್ಬಾಷ್ ಎಂದ ವಿಶ್ವ ಆರೋಗ್ಯ ಸಂಸ್ಥೆ

  • 14 Jan 2024 , 4:04 PM
  • world
  • 89

ಡಬ್ಲ್ಯೂಎಚ್ಓ :ಕೋವಿಡ್ -19 ನಿಂದ ಇಡೀ ವಿಶ್ವವೇ ತಲ್ಲಣಗೊಂಡ ಸಂದರ್ಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡು ಸಮರ್ಥವಾಗಿ‌ ನಿಭಾಯಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶ್ವ ಆರೋಗ ಸಂಸ್ಥೆಯ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಕೊಂಡಾಡಿದ್ದಾರೆ‌. ಜಾಗತಿಕ ಕೋವಿಡ್ 19 ಪ್ರತಿಕ್ರಿಯೆಗೆ ನಿಮ್ಮ ನಿರಂತರ ಬೆಂಬಲಕ್ಕಾಗಿ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ರವರಿಗೆ ಧನ್ಯವಾದಗಳು. ಜ್ಞಾನದ ಹಂಚಿಕೆ ಸೇರಿದಂತೆ ನಾವು ಒಗ್ಗಟಾಗಿದ್ದರೆ ಮಾತ್ರ ನಾವು ಈ ವೈರಸನ್ನು ತಡೆ ಹಿಡಿದು ಅನೇಕ ಜೀವ ಮತ್ತು ಜೀವನೋಪಾಯಗಳನ್ನು ಉಳಿಸಬಹುದು ಎಂದು ಹೇಳಿದ್ದಾರೆ.

ಇದುವರೆಗೂ ಭಾರತವು ಭೂತಾನ್, ಮಾಲ್ಡೀವ್ಸ್, ಬಾಂಗ್ಲಾದೇಶ, ನೇಪಾಳ, ಸೀಶೆಲ್ಸ್, ಮ್ಯಾನ್ಮಾರ್ ಮತ್ತು ಮಾರಿಷಸ್ - ಅನುದಾನದ ಸಹಾಯವಾಗಿ ಭಾರತದ ಆರಂಭಿಕ ಲಸಿಕೆಗಳ ಭಾಗವಾಗಿದೆ. ಅಫ್ಘಾನಿಸ್ತಾನ ಮತ್ತು ಶ್ರೀಲಂಕಾಕ್ಕೆ ಡೋಸೇಜ್ ಪೂರೈಸುವ ಯೋಜನೆಯೂ ಇದೆ.

Read All News