ಕನ್ನಡ ಮಾಧ್ಯಮ ಪ್ರಶಸ್ತಿ ಪಡೆದ ವಿದ್ಯಾರ್ಥಿನಿ ಶರಾವತಿ ಬಡಿಗೇರ

  • 14 Jan 2024 , 11:50 PM
  • Belagavi
  • 121

ಬೆಳಗಾವಿ: ತಾಲೂಕಿನ ಅಷ್ಟೆ ಗ್ರಾಮದ ಶರಾವತಿ ಬಡಿಗೇರಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಕನ್ನಡ ಮಾಧ್ಯಮ ಪ್ರಶಸ್ತಿಗೆ ಭಾಜನಳಾಗಿದ್ದಾಳೆ. ಬೆಳಗಾವಿಯ ಜಿ.ಎ.ಪದವಿ ಪೂರ್ವ ಸಂಯುಕ್ತ ಮಹಾವಿದ್ಯಾಲಯದ ವಿದ್ಯಾರ್ಥಿನಿ, ಕು. ಶರಾವತಿ ದುಂಡಪ್ಪ ಬಡಿಗೇರ ಇವಳು ಕಳೆದ ವರ್ಷ ನಡೆದ ದ್ವಿತೀಯ ಪಿ.ಯು.ಪರೀಕ್ಷೆಯನ್ನು ಕನ್ನಡ ಮಾಧ್ಯಮದಲ್ಲಿಯೇ ಬರೆದು ಪ್ರತಿಶತ 95 ರಷ್ಟು ಅಂಕ ಪಡೆದುಕೊಂಡು ಬೆಳಗಾವಿ ತಾಲೂಕಿನಲ್ಲಿ ಅತಿ ಹೆಚ್ಚು ಅಂಕಗಳಿಸಿದ ಗ್ರಾಮೀಣ ಪ್ರತಿಭೆಯಾಗಿದ್ದಾಳೆ.

logintomyvoice

ಈಕೆಯ ಸಾಧನೆಗಾಗಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು ಹಾರ್ಧಿಕವಾಗಿ ಅಭಿನಂದಿಸಿ ಪ್ರಶಸ್ತಿ ಪತ್ರ ನೀಡಿದೆ.

Read All News