ಪಾಕಿಸ್ತಾನ ಜಿಂದಾಬಾದ್ ಎಂದಿದ್ದ ಅಮೂಲ್ಯ ಲಿಯೋನಗೆ ಜಾಮೀನು

  • 15 Jan 2024 , 3:24 AM
  • Bengaluru
  • 115
ಬೆಂಗಳೂರು ಸ್ವಾತಂತ್ರ್ಯ ಉದ್ಯಾನದಲ್ಲಿ ಪೆಬ್ರವರಿ 20 ರಂದು ನಡೆದ ಸಿಎಎ, ಎನ್‌ಆರ್‌ಸಿ ವಿರೋಧಿಸಿ ನಡೆದ ಸಮಾವೇಶದಲ್ಲಿ ಅಮೂಲ್ಯ ಲಿಯೋನಾ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿ ಇಡೀ ದೇಶದ ಜನರ ಕೆಂಗಣ್ಣಿಗೆ ಗುರಿಯಾಗಿದ್ದ ಸಮಾವೇಶದಲ್ಲಿ ಸಂಸದ ಅಸಾದುದ್ದಿನ್ ಓವೈಸಿ ಭಾಗಿಯಾಗಿದ್ದರು ಅಮೂಲ್ಯಗೆ ಕಾನೂನಿಗೆ ಬದ್ಧವಾಗಿ ಸಿ ಆರ್ ಪಿ ಸಿ ಸೆಕ್ಷನ್ 162 ಕಲಂ 2 ಅಡಿಯಲ್ಲಿ ( statutory bail ) ಷರತ್ತು ಬದ್ಧ ಜಾಮೀನು ಮಂಜೂರು ಆಗಿದೆ ಪಶ್ಚಿಮ ವಿಭಾಗ ಡಿಸಿಪಿ ರಮೇಶ ಬಾನೋತ್ ಮಾಹಿತಿ ನೀಡಿದ್ದಾರೆ ಉಪ್ಪಾರ ಪೀಠೆ ಪೋಲಿಸ್ ಠಾಣೆ ಯಲ್ಲಿ ದಾಖಲಾಗಿದ್ದ ದೇಶ ದ್ರೋಹ ಪ್ರಕರಣ‌ 3 ತಿಂಗಳ ಬಳಿಕ ಜಾಮೀನು ಲಭಿಸಿದೆ .
ಅಮೂಲ್ಯ ಲಿಯೊನ ವಿರುದ್ಧ ದೇಶದ್ರೋಹ ಹಾಗೂ ಸಮಾಜದಲ್ಲಿ ದ್ವೇಷ ಹೊತ್ತಿಸುವ ಆರೋಪವಿದೆ. ದೊಡ್ಡ ಸಮಾವೇಶದಲ್ಲಿಯೇ ಸಾರ್ವಜನಿಕರ ಎದುರು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕುಗಿದ್ದಳು 5 ನೇ ACMM ಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ ಇಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಅಮೂಲ್ಯ ಲಿಯೋನಾಗೆ ಬಿಡುಗಡೆ ಸಿಕ್ಕಿದೆ.

Read All News