ಬೆಳಗಾವಿ: ಜಿಲ್ಲೆಯ ರಾಮದುರ್ಗ ತಾಲೂಕಿನ ಹಲಗತ್ತಿ ಗ್ರಾಮದಲ್ಲಿ 72 ನೇ ಗಣರಾಜ್ಯೋತ್ಸವದ ಅಂಗವಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಗೆಳೆಯರ ಬಳಗ ಹಲಗತ್ತಿ ಇವರ ಸಂಯುಕ್ತ ಆಶ್ರಯದಲ್ಲಿ 52 ಕೆ.ಜಿ.ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಸಮಾರಂಭವನ್ನು ಉದ್ಯಮಿಗಳು ಹಾಗೂ ಸಮಾಜ ಸೇವಕ ಚಿಕ್ಕರೇವಣ್ಣ ಅವರು ಉದ್ಘಾಟಿಸಿದರು.
ಸೋಲು ಮತ್ತು ಗೆಲುವುಗಳನ್ನು ಸಮವಾಗಿ ಸ್ವೀಕರಿಸಿ; ಸಮಾಜ ಸೇವಕ ಚಿಕ್ಕರೇವಣ್ಣ pic.twitter.com/wcJOUS6hbL
— localview.in (@LocalviewIn) January 28, 2021
ಈ ಸಂದರ್ಭದಲ್ಲಿ ಮಾತನಾಡಿದ ಚಿಕ್ಕರೆವಣ್ಣ ಕಬಡ್ಡಿ ಅಪ್ಪಟ ದೇಶೀ ಆಟವಾಗಿದೆ. ಈ ಆಟ ಕೇವಲ ಪುರುಷರಿಗಷ್ಟೇ ಸೀಮಿತ ಅಲ್ಲ, ಮಹಿಳೆಯರೂ ಈ ಆಟದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಅದರಲ್ಲಿಯೂ ಇಲ್ಲಿ ಹೊನಲು ಬೆಳಕಿನ ಪಂದ್ಯಾಟವನ್ನು ಆಯೋಜಿಸಿರುವುದು ಶ್ಲಾಘನೀಯವಾಗಿದೆ. ಇದರಿಂದ ಯುವ ಆಟಗಾರರ ಮೇಲೆ ಪ್ರಭಾವ ಬೀರಿ, ತಾವೂ ಕ್ರೀಡೆಯಲ್ಲಿ ಸಾಧನೆ ಮಾಡಬೇಕು ಎಂಬ ಮನೋಭಾವನೆ ಬೆಳೆಯುತ್ತದೆ. ಕ್ರೀಡಾಳುಗಳು ಸೋಲು ಮತ್ತು ಗೆಲುವುಗಳನ್ನು ಸಮವಾಗಿ ಸ್ವೀಕರಿಸಬೇಕು ಎಂದು ಕಿವಿಮಾತು ಹೇಳಿದರು. ಹಲಗತ್ತಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಯಂಕಣ್ಣ ಮುಧೋಳ, ಉಪಾಧ್ಯಕ್ಷರಾದ ಮಾರುತಿ ಚೌಡಕಿ, ಸುರೇಶ ಹೊಸಕೋಟಿ, ಬೀರಪ್ಪ ಕಳ್ಳೆನ್ನವರ್, ಪಿಕೆಪಿಎಸ್ ಅಧ್ಯಕ್ಷರಾದ ಬಸಪ್ಪಾ ಶೇಡಬಾಲ್ ಎಸ್.ಎಫ.ಹುಳಕುಂದ ಸೇರಿದಂತೆ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.