ಬೆಳಗಾವಿ: ದೆಹಲಿ ಈಚೆಗೆ ನಡೆದ ರಾಷ್ಟ್ರೀಯ ಕುಸ್ತಿ ಸ್ಪರ್ಧೆಯಲ್ಲಿ ಭಾಗಿಯಾಗಲು ತೆರಳಿದ್ದ ಕುಸ್ತಿಪಟುಗಳನ್ನು ಎರಡು ದಿನಗಳ ಕಾಲ ರಸ್ತೆಯಲ್ಲಿಯೇ ಮಲಗಿಸಿದ್ದಾರೆ. ಸರಿಯಾದ ವ್ಯವಸ್ಥೆ ಮಾಡಿಲ್ಲ ಎಂದು ಅಳಲು ತೋಡಿಕೊಂಡಿದ್ದಕ್ಕೆ ಏಕವಚನ ಅಸಹ್ಯವಾಗಿ ನಿಂದನೆ ಮಾಡಿದ್ದಾರೆ.ಹೀಗಾ ಈ ಕೂಡಲೇ ರಾಜ್ಯ ಕುಸ್ತಿ ಸಂಘದ ಕಾರ್ಯದರ್ಶಿಯನ್ನ ತಕ್ಷಣ ಬದಲಾವಣೆ ಮಾಡಬೇಕೆಂದು ಆಗ್ರಹಿಸಿ ಕುಸ್ತಿಪಟುಗಳ ಹಾಗೂ ಜಿಲ್ಲಾ ಕುಸ್ತಿ ಸಂಘಟನೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಕುಸ್ತಿಪಟುಗಳು,ದೆಹಲಿಯ ನೋಯಿಡಾದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಲು ಕರ್ನಾಟಕದಿಂದ ಕೇವಲ ಐದು ಜನ ಕುಸ್ತಿಪಟುಗಳು ತೆರಳಿದ್ವಿ.ಆದ್ರೆ, ಕರ್ನಾಟಕದಿಂದ ಹೋಗುವಾಗ ರಾಜ್ಯ ಕುಸ್ತಿಪಟುಗಳು ಸಂಘದಿಂದ ಟ್ರೈನ್ ಟಿಕೆಟ್ ಬುಕ್ ಮಾಡಿಸಿ ಕಳುಹಿಸಲಾಗಿತ್ತು. ಆದ್ರೆ, ಸಂಘದಿಂದ ಟ್ರೇನ್ ಟಿಕೆಟ್ ಬಿಟ್ರೆ ಮತ್ಯಾವ ಸವಲತ್ತುಗಳನ್ನು ಕಲ್ಪಿಸದೇ ನಮ್ಮನ್ನು ಕಡೆಗಣಿಸಲಾಗಿದೆ.ಭವಿಷ್ಯದಲ್ಲಿ ಕರ್ನಾಟಕ ಹೆಸರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬಲ್ಲ ಯುವ ಪ್ರತಿಭೆಗಳಿಗೆ ಕುಸ್ತಿ ಸಂಘದಿಂದ ಅನ್ಯಾಯವಾಗಿದ್ದು, ಕನಿಷ್ಠ ಸೌಲಭ್ಯಗಳನ್ನು ಒದಗಿಸಿಲ್ಲ ಎಂದು ಅಸಮಾಧಾನವ್ಯಕ್ತಪಡಿಸಿದರು. ಈಗಾಗಲೇ ಬೆಳಗಾವಿ ಜಿಲ್ಲೆಯಿಂದ ಕುಸ್ತಿ ಸ್ಪರ್ಧೆಯಲ್ಲಿ ಸಾಕಷ್ಟು ಜನರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ರಾಜ್ಯದ ಕೀರ್ತಿಪತಾಕೆ ಹಾರಿಸಿದ್ದಾರೆ.

ಆದ್ರೆ, ಇತ್ತೀಚಿಗೆ ದೆಹಲಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಕರ್ನಾಟಕ ತಂಡದ ಜೊತೆ ತರಬೇತುದಾರರು,ತಂಡದ ನಿರ್ದೇಶಕರು ಹಾಗೆಯೇ ಸಂಬಂಧ ಪಟ್ಟ ಯಾವುದೇ ಅಧಿಕಾರಿಗಳು ಹೋಗದೇ ನಿರ್ಲಕ್ಷ್ಯ ತೋರಿದ್ದಾರೆ. ಹೀಗಾಗಿ ನಮಗೆ ಸರಿಯಾದ ಮಾರ್ಗದರ್ಶನ ಮಾಡುವ ಕೋಚ್ ಗಳು ಕೂಡ ಯಾರು ಸಂಪರ್ಕಕ್ಕೆ ಸಿಗದೇ ಅವಕಾಶ ವಂಚಿತರಾಗಿ ಮರಳಿ ಬರಬೇಕಾದ್ರೆ ಟ್ರೇನ್ ಟಿಕೆಟ್ ಕೂಡ ರದ್ದಾಗಿದೆ. ಆಗ ರಾಜ್ಯ ಕುಸ್ತಿ ಸಂಘದ ಕಾರ್ಯದರ್ಶಿ ನರಸಿಂಹಮೂರ್ತಿ ಅವರಿಗೆ ಪೋನ್ ಕರೆ ಮಾಡಿ ಸಮಸ್ಯೆ ಬಗ್ಗೆ ಹೇಳಿಕೊಂಡರೆ ಏಕವಚನದಲ್ಲೇ ನಮಗೆ ನಿಂದನೆ ಮಾಡುವ ಮೂಲಕ ನಮ್ಮ ಸಮಸ್ಯೆಗೆ ಸ್ಪಂದಿಸಲಿಲ್ಲ. ಇದರಿಂದಾಗಿ ಎರಡು ರಾತ್ರಿ ದೆಹಲಿಯ ರೈಲ್ವೆ ನಿಲ್ದಾಣದಲ್ಲೇ ಮಲಗುವ ಸ್ಥಿತಿ ನಿರ್ಮಾಣವಾಗಿದೆ.

ಇದಕ್ಕೆಲ್ಲ ರಾಜ್ಯ ಕುಸ್ತಿ ಸಂಘದ ಕಾರ್ಯದರ್ಶಿಯೇ ಕಾರಣ ಹೀಗಾಗಿ ಅವರನ್ನು ತಕ್ಷಣ ಬದಲಾವಣೆ ಮಾಡಬೇಕು ಎಂದು ಒತ್ತಾಯ ಮಾಡಿದರು. ರಾಜ್ಯದಿಂದ ಕುಸ್ತಿಪಟುಗಳು ರಾಷ್ಟ್ರ ಮಟ್ಟದ ಸ್ಪರ್ದೆಯಲ್ಲಿ ಭಾಗವಹಿಸುವಾಗ ಅವರ ಜೊತೆ ಕಡ್ಡಾಯವಾಗಿ ಕೋಚ್ ಹೋಗಬೇಕು ಎನ್ನುವ ನಿಯಮ ಇದ್ದರೂ ರಾಜ್ಯದಿಂದ ದೆಹಲಿಗೆ ಹೋದ ಐದು ಜನ ಪೈಲವಾನ್ ರ ಜೊತೆಗೆ ಕೋಚ್ ಬರಲಿಲ್ಲ.ಆದ್ದರಿಂದ ಕುಸ್ತಿಪಟುಗಳು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಮುಂಬರುವ ಸ್ಪರ್ಧೆಯಲ್ಲಿ ಯಾವುದೇ ರೀತಿಯಲ್ಲಿ ಕುಸ್ತಿಪಟುಗಳಿಗೆ ತೊಂದರೆ ಆಗದಂತೆ ಸರ್ಕಾರ ಕ್ರಮಕೈಗೊಳ್ಳಬೇಕು. ಕುಸ್ತಿಪಟುಗಳ ಆಯ್ಕೆ ಆಗುತ್ತಿರುವ ಕೆಲ ತಾರತಮ್ಯ ತಪ್ಪಿಸಬೇಕು. ಇದರ ಜೊತೆಗೆ ಬೆಳಗಾವಿಯಲ್ಲಿ ಹಿರಿಯ ನ್ಯಾಷನಲ್ ಮತ್ತು ಕಿರಿಯ ನ್ಯಾಷನಲ್ ಇನ್ನಿತರ ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆಯನ್ನು ಆಯೋಜನೆ ಮಾಡಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಂಡರು.