ಮಹಾತಪಸ್ವಿ ಕುಮಾರಸ್ವಾಮಿ ಅವರ 115 ನೇಯ ಜಯಂತ್ಯೋತ್ಸವ

  • shivaraj B
  • 17 Aug 2024 , 10:47 PM
  • Dharwad
  • 649

ಧಾರವಾಡ : ಇಲ್ಲಿನ ತಪೋವನದ ಮಹಾತಪಸ್ವಿ ಶ್ರೀ ಕುಮಾರಸ್ವಾಮಿಜಿ ಪ್ರತಿಷ್ಠಾನದ ವತಿಯಿಂದ ಕುಮಾರಸ್ವಾಮಿಜಿಯವರ 115 ನೇಯ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಇದೇ ಸೋಮವಾರ ದಿ.‌19 ರಂದು ಧಾರವಾಡ ಕ್ಯಾರಕೊಪ್ಪ ರಸ್ತೆಯ ತಪೋವನದ ಸಮೂದಾಯ ಭವನದಲ್ಲಿಆಯೋಜಿಸಲಾಗಿದೆ. 

ಸಾನಿಧ್ಯವನ್ನು ಹರಿಹರ ವೀರಶೈವ ಪಂಚಮಸಾಲಿ ಲಿಂಗಾಯತ ಪೀಠದ ವಚನಾನಂದ ಸ್ವಾಮಿಜಿ ವಹಿಸುವರು, ಅತಿಥಿಗಳಾಗಿ ಇದೇ ಪ್ರತಿಷ್ಠಾನದ ಖಜಾಂಜಿ ಶಿವಶಂಕರಜಿ ಲಾತೂರೆ ಆಗಮಿಸುವರು. ಅಧ್ಯಕ್ಷತೆಯನ್ನು ವೀರಶೈವ ಮಹಾಸಭಾದ ತಾಲೂಕಾ ಸದಸ್ಯ ಸಿದ್ದಪ್ಪ ಮರಕುಂಬಿ ವಹಿಸುವರು.

ಮುಂಜಾನೆ 9 ಕ್ಕೆ ತೊಟ್ಟಿಲು ಸೇವೆ, 10.30 ಕ್ಕೆ ವೇದಿಕೆಯ ಕಾರ್ಯಕ್ರಮ ಜರುಗಲಿದೆ, ಕಾರ್ಯಕ್ರಮದ ನಂತರ ಮಹಾಮಂಗಲ ಹಾಗೂ ಪ್ರಸಾದ ವ್ಯವಸ್ಥೆ ಇರುತ್ತದೆ ಎಂದು ಗೌರವ ಕಾರ್ಯದರ್ಶಿ ಕಾಶೀನಾಥ ಹಾದಿಮನಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವರದಿ : ರವಿಕಿರಣ್  ಯಾತಗೇರಿ 

Read All News