ಉದ್ಯೋಗ ಖಾತ್ರಿಯಿಂದ ಸಾಮಾಜಿಕ ಬದಲಾವಣೆಯಾಗಬೇಕು : ಎಲ್.ಕೆ.ಅತೀಕ್

  • 15 Jan 2024 , 3:39 AM
  • Bengaluru
  • 108

ಬೆಂಗಳೂರು: ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕೆಲಸ ಪಡೆದ ಗ್ರಾಮೀಣ ಕುಟುಂಬಗಳು ಯೋಜನೆಯನ್ನೆ ಅವಲಂಬಿಸಿದೆ ತಮ್ಮ ಮಕ್ಕಳಿಗೆ ವೃತ್ತಿ ಕೌಶಲ್ಯತೆಯನ್ನು ಒದಗಿಸುವ ಮೂಲಕ ಕುಟುಂಬಗಳು ಸಾಮಾಜಿಕ ಬದಲಾವಣೆಯಾಗಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರು ಕರೆ ನೀಡಿದ್ದಾರೆ. ಅವರು ಇಂದು ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದಲ್ಲಿ ಆಯೋಜಿಸಿದ್ದ 15 ನೇ ನರೇಗಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ನಾಲ್ಕೈದು ವರ್ಷಗಳಿಂದ 5 ರಿಂದ 6 ಕೋಟಿ ಮಾನವ ದಿನಗಳು ಸೃಜನೆಯಾಗುತ್ತಿದ್ದದ್ದು ಪ್ರಸ್ತುತ14 ಕೋಟಿ ಮಾನವ ದಿನ ಸೃಜನೆಯಾಗುತ್ತಿದೆ. ಹೆಚ್ಚುವರಿ ಮಾನವ ದಿನಗಳ ಸೃಜನೆಯಿಂದ ರಾಜ್ಯಕ್ಕೆ ಈ ಸಾಲಿನಲ್ಲಿ ಸುಮಾರು ರೂ.2400/- ಅನುದಾನ ಸಿಕ್ಕಿದೆ. ಕೆಲಸ ಪಡೆಯುವುದು ನಿಮ್ಮ ಹಕ್ಕು ಎಂದು ತಿಳಿಸಿದರು.

ಇದೇ ವೇಳೆ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಆಯುಕ್ತರು ಅನಿರುದ್ಧ್ ಶ್ರವಣ್ರವರು ಮಾತನಾಡಿ ನರೇಗಾ ಯೋಜನೆ ಗ್ರಾಮೀಣ ಜನರಿಗೆ ಕೆಲಸದ ಖಾತ್ರಿಯಾಗಿದೆ. ಈಗಾಗಲೇ ಯೋಜನೆಯಡಿ ಕೈಗೊಂಡ ಅಭಿಯಾನಗಳ ಯಶಸ್ವಿಯೇ ಇದಕ್ಕೆ ಸಾಕ್ಷಿಯಾಗಿದ್ದು, ಜನರಿಗೆ ಕೆಲಸದ ಜೊತೆಗೆ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಿಸುವ ಮೂಲಕ ಮಾದರಿ ಗ್ರಾಮ ಪಂಚಾಯಿತಿಗಳಾಗಿ ರೂಪುಗೊಳ್ಳಲು ಯೋಜನೆ ಸಹಕಾರಿಯಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯಕಾರ್ಯಾಚರಣೆ ಅಧಿಕಾರಿ ಪ್ರಾಣೇಶ್ರಾವ್ರವರು ರಾಷ್ಟ್ರದಲ್ಲಿ ಬಡತನ ನಿರ್ಮೂಲನೆಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿದೆ. ಅದೇ ರೀತ್ಯಾ 2005 ರಲ್ಲಿ ನರೇಗಾ ಕಾಯ್ದೆಜಾರಿಗೆ ಅನುಷ್ಠಾನಕ್ಕೆ ಜಾರಿಗೊಂಡಿತು. ಇದರ ಪ್ರಯುಕ್ತ ಇಂದು ರಾಜ್ಯದಲ್ಲಿ ನರೇಗಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ 100 ದಿವಸ ಕೆಲಸ ಪಡೆದ ಮಂಡ್ಯ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ತುಮಕೂರು ಜಿಲ್ಲೆಯ ಆಯ್ದ ಕೆಲಸಗಾರರನ್ನು ಸನ್ಮಾನಿಸಲಾಯಿತು.

Read All News