ಕಾಕತಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಅವಿರೋಧ ಆಯ್ಕೆ

  • 15 Jan 2024 , 3:10 AM
  • Belagavi
  • 199

ಯಮಕನಮರಡಿ :ಮತಕ್ಷೇತ್ರದ ಕಾಕತಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಬಂಬರಗಾ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ದತ್ತಮ್ಮ ಪಂದುರಗಿ, ಉಪಾಧ್ಯಕ್ಷರಾಗಿ ಯಲ್ಲವ್ವ ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶಾಸಕ ಸತೀಶ ಜಾರಕಿಹೊಳಿ ಅವರ ಆದೇಶದ ಮೇರೆಗೆ ಇವರನ್ನು ಆಯ್ಕೆ ಮಾಡಲಾಗಿದೆ. ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಸದಸ್ಯರು ಸನ್ಮಾನಿಸಿದರು. ತಾಲೂಕು ಪಂಚಾಯ್ತಿ ಸದಸ್ಯ ಭೀಮರಾವ್ ನಾಯ್ಕ, ಮುಖಂಡರಾದ ರಾಮಣ್ಣ ಗುಳ್ಳಿ, ಭಾರತಿ ಬಂದುರಗಿ, ಯಶವಂತ ಬಂದುರಗಿ, ಮಹಾದೇವ ಕೊಳೆ, ಪ್ರಕಾಶ ಕೊಳೆ ಇನ್ನಿತರರು ಇದ್ದರು.

Read All News