ಕಾಗಾಯ್- ಗೋಪಾಲನ್ ಎಂಟರ್‍ಪ್ರೈಸಸ್ ರವರ ಹೊಸ ತಂತ್ರಜ್ಞಾನ ಪಾಲುದಾರರು

  • 19 Dec 2023 , 2:30 AM
  • Bengaluru
  • 97

ಬೆಂಗಳೂರು: ಭಾರತದ ಮೊದಲ ಗ್ಯಾಮಿಫೈಡ್ ರಿಯಲ್ ಎಸ್ಟೇಟ್ ಮಾರಾಟದಿಂದ ಸಕ್ರಿಯಗೊಳಿಸಲ್ಪಟ್ಟ ಪ್ಲಾಟ್ ಫಾರ್ಮ್ ಆದ ಕಾಗಾಯ್, ಈಗಾಗಲೇ ಬೆಂಗಳೂರಿನ ಪ್ರಸಿದ್ಧ ಬಿಲ್ಡರ್ ಹಾಗೂ ಡೆವಲಪರ್ ಆದ ಗೋಪಾಲನ್ ಎಂಟರ್‍ಪ್ರೈಸಸ್ ನೊಂದಿಗೆ ತನ್ನ ತಂತ್ರಜ್ಞಾನ ಪಾಲುದಾರಿಕೆಯ ಬಗ್ಗೆ ವರ್ಚುಯಲ್ ಪತ್ರಿಕಾಗೋಷ್ಠಿ ನಡೆಸಿದೆ.

ಗೋಪಾಲನ್ ಎಂಟರ್‍ಪ್ರೈಸಸ್ ಮತ್ತು ಕಾಗಾಯ್ ನಡುವಿನ ತಂತ್ರಜ್ಞಾನ ಪಾಲುದಾರಿಕೆ ರಿಯಲ್ ಎಸ್ಟೇಟ್ ಮಾರಾಟವನ್ನು ಹೇಗೆ ಬದಲಾಯಿಸುತ್ತದೆ ಮತ್ತು ಕಾಗಾಯ್ ನಿಂದ ಮುಂಬರುವ ಅದ್ಭುತ ರಿಯಾಲ್ಟಿ ಫ್ಲ್ಯಾಶ್ ಸೇಲ್ ಹೇಗೆ ನಡೆಯಲಿದೆ, ಡಿಜಿಟಲ್ ಮತ್ತು ತಂತ್ರಜ್ಞಾನ ಮಾಧ್ಯಮದ ಅಭಿವೃದ್ಧಿಶೀಲ ದೃಢತೆ ಮತ್ತು ಪ್ರಭಾವದ ಬಗ್ಗೆ ಘೋಷಿಸಲು ಈ ಸಮ್ಮೇಳನವನ್ನು ಆಯೋಜಿಸಲಾಗಿತ್ತು.

ಸಮ್ಮೇಳನದಲ್ಲಿ ಗೋಪಾಲನ್ ಎಂಟರ್‍ಪ್ರೈಸಸ್ ನ ಅಧ್ಯಕ್ಷರಾದ ಶ್ರೀ. ಸಿ. ಗೋಪಾಲನ್ ಮತ್ತು ಕಾಗಾಯ್ ಸಹ-ಸಂಸ್ಥಾಪಕರಾದ ಶ್ರೀಮತಿ ಸ್ವಪ್ನಾ ಡಿ. ಮೋರೆ, ಕಾಗಾಯ್ ನ ಸಿಟಿಓ ಶ್ರೀ. ತುಷಾರ್ ದೇಸಾಯಿ ಮತ್ತು ಕಾಗಾಯ್ ನ ಕಾರ್ಪೊರೇಟ್ ಸಂವಹನಗಳು ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳ ಸಹಾಯಕ ನಿರ್ದೇಶಕರಾದ ಕುಮಾರಿ ನೂಪುರ್ ಸಾರಸ್ವತ್ ಉಪಸ್ಥಿತರಿದ್ದರು. ಸಹಯೋಗದ ಬಗ್ಗೆ ಮಾತನಾಡಿದ ಗೋಪಾಲನ್ ಎಂಟರ್‍ಪ್ರೈಸಸ್ ನ ಅಧ್ಯಕ್ಷರಾದ ಶ್ರೀ ಸಿ. ಗೋಪಾಲನ್, ಗೋಪಾಲನ್ ಎಂಟರ್‍ಪ್ರೈಸಸ್ ಉದ್ದಿಮೆಗೆ ಸುಲಭ ಪ್ರವೇಶ ನೀಡುವಲ್ಲಿ ರಿಯಲ್ ಎಸ್ಟೇಟ್ ವಲಯದ ಡಿಜಿಟಲೀಕರಣ ಪ್ರಸರಿಸಲು ಕಾಗಾಯ್ ಸಹಯೋಗ ಪಡೆಯಲು ಹರ್ಷಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಸಮ್ಮೇಳನದ ಬಗ್ಗೆ ಮಾತನಾಡಿದ, ಕಾಗಾಯ್ ನ ಸಹ-ಸಂಸ್ಥಾಪಕರಾದ, ಶ್ರೀಮತಿ ಸ್ವಪ್ನಾ ಡಿ. ಮೋರೆ, ಕಾಗಾಯ್ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಡಿಜಿಟಲ್ ಕ್ರಾಂತಿ ತರಲು ಸಂಪೂರ್ಣ ಸಿದ್ಧವಾಗಿದೆ. ಕಾಗಾಯ್ ಆಪ್ ಅನ್ನು ಕೇವಲ ರಿಯಾಲ್ಟರ್ ಗಳಿಗೆ ಮತ್ತು ಆಸ್ತಿ ಖರೀದಿದಾರರಿಗೆ ಪರಿಹಾರ ನೀಡಲು ಮಾತ್ರವಲ್ಲದೇ, ರಿಯಲ್ ಎಸ್ಟೇಟ್ ವಲಯದ ಅಭಿವೃದ್ಧಿಗೂ ವಿನ್ಯಾಸಗೊಳಿಸಲಾಗಿದ್ದು, ಈ ಮೂಲಕ ನಿಯೋಜಿತ ಸಮಯದ ಮಿತಿಯೊಳಗೆ ಮಾರಾಟ ಖಚಿತಪಡಿಸಬಹುದಾಗಿದೆ ಮತ್ತು ರಿಯಲ್ ಎಸ್ಟೇಟ್ ಆಸ್ತಿಗಳ ಶೀಘ್ರ ಮಾರಾಟಕ್ಕೆ ಕಾರಣವಾಗಲಿದೆ.

ಕಾಗಾಯ್ ರಿಯಲ್ ಎಸ್ಟೇಟ್ ಉದ್ದಿಮೆಯಲ್ಲಿ ಪ್ರಸ್ತುತ ಅಗತ್ಯವಿರುವ ಆವೇಗವನ್ನು ಉತ್ಪಾದಿಸುವ ಗುರಿ ಹೊಂದಿದೆ ಎಂದು ಹೇಳಿದ್ದಾರೆ. ಕಾಗಾಯ್ ಒಂದು ಐಎಸ್ಓ 9000:2015, ಐಎಸ್ಓ 27001, ಸಿಎಂಎಂ ಲೆವೆಲ್ 3 ಮತ್ತು ರೇರಾ ಪ್ರಮಾಣಿತ ಕಂಪನಿಯಾಗಿದ್ದು, ಸ್ಟಾರ್ಟಪ್ ಭಾರತದೊಂದಿಗೆ ನೋಂದಾಯಿಸಲ್ಪಟ್ಟಿದೆ.

ಇದು ಮಾರಾಟ ಸಕ್ರಿಯಗೊಳಿಸುವ ಪ್ರಾಪ್ ಟೆಕ್ ವೇದಿಕೆಯಾಗಿದ್ದು ಇದನ್ನು ದೇಶದಲ್ಲಿ ರಿಯಲ್ ಎಸ್ಟೇಟ್ ಮಾರುಕಟ್ಟೆಯನ್ನು ಸಾಂಪ್ರದಾಯಿಕತೆಯಿಂದ ಡಿಜಿಟಲ್ ನೆಡೆಗೆ ಕ್ರಾಂತಿಕಾರಿಯಾಗಿ ಮಾರ್ಪಾಡಾಗುವಂತೆ ವಿನ್ಯಾಸಗೊಳಿಸಲಾಗಿದೆ. ಪ್ಲಾಟ್ ಫಾರ್ಮ್ ಈಗಾಗಲೇ 50 ಸಾವಿರ ಡೌನ್ ಲೋಡ್ ಗಳನ್ನು ದಾಖಲಿಸಿದ್ದು, 2021 ರ ಗ್ರ್ಯಾಂಡ್ ರಿಯಾಲ್ಟಿ ಫ್ಲ್ಯಾಶ್ ಮಾರಾಟಕ್ಕೆ ಮೊದಲು 1 ಲಕ್ಷ ಸಾಧಿಸುವ ಭರವಸೆ ಹೊಂದಿದ್ದೇವೆ.

ಡೌನ್ ಲೋಡ್ ಗೆ ಮುಂಬೈ, ನವಿ ಮುಂಬೈ, ಥಾಣೆ, ನಾಗ್ಪುರದಂತಹ ನಗರಗಳು ಹಾಗೂ ದೆಹಲಿ ಎನ್ ಸಿ ಆರ್, ತೆಲಂಗಾಣ, ಕರ್ನಾಟಕ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳತ್ತ ನಾವು ಗಮನ ಹರಿಸಿದ್ದೇವೆ. ಗೋಪಾಲನ್ ಎಂಟರ್‍ಪ್ರೈಸಸ್ ನಮ್ಮೊಂದಿಗಿರುವುದರಿಂದ, ಕಾಗಾಯ್ 2020 ರಲ್ಲಿ ಆಸ್ತಿ ನೋಂದಣಿ ನಿಲುಗಡೆಗೆ ಕಾರಣವಾಗಿದ್ದ ಸಾಂಕ್ರಾಮಿಕದ ಹೊರತಾಗಿಯೂ ರಿಯಾಲ್ಟಿ ಮಾರುಕಟೆಯಲ್ಲಿ ತಾಂತ್ರಿಕವಾಗಿ ಮಾರ್ಪಾಡಾಗಿ, ಬದಲಾವಣೆಯತ್ತ ಸಾಗುವ ಗುರಿ ಹೊಂದಿದೆ.

Read All News