ಬೆಳಗಾವಿ :ಜಿಲ್ಲೆಗೆ ಪ್ರಪ್ರಥಮ ಬಾರಿಗೆ 2020 ನೇ ಸಾಲಿನ ವಿಕಲಚೇತನರ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆಗಾಗಿ ಮನಿಷಾ ಮಹಾಂತೇಶ ಹೊಂಗಲ ವೈಯಕ್ತಿಕ ಪ್ರಶಸ್ತಿ ಗೆ ಆಯ್ಕೆ ಮಾಡಲಾಗಿದೆ ಎಂದು ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕರು ತಿಳಿಸಿದರು.
ಇದರಿಂದ ಬೆಳಗಾವಿ ಜಿಲ್ಲೆಗೆ ತುಂಬಾ ವಿಕಲಚೇತನರ ವಿಭಾಗದಲ್ಲಿ ತುಂಬಾ ಸಂತೋಷದ ವಿಚಾರವಾಗಿದೆ. ಮನಿಷಾರವರು ವಿಕಲಚೇತನರ ಏಳಿಗೆಗಾಗಿ ಮತ್ತು ಪುರ್ನವಸತಿಗೆ ಹೆಚ್ಚಿನ ಮಹತ್ವ ನಿಡುತ್ತಿದ್ದಾರೆ.
ಅಷ್ಟೇ ಅಲ್ಲದೇ ಮನಿಷಾ ರವರು ಕ್ರೀಡಾ ಕ್ಷೇತ್ರ ದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಮಹಿಳಾ ತಂಡದ ವ್ಹೀಲ್ ಚೇರ್ ಬಾಸ್ಕೆಟ್‌ಬಾಲ್ ಆಟಗಾರ್ತಿ ಆಗಿ ಬೆಳಗಾವಿ ನಗರಕ್ಕೆ ಕೀರ್ತಿ ತಂದಿದ್ದಾರೆ. ಸದ್ಯಕ್ಕೆ ವಿಕಲಚೇತನರ ಗ್ರಾಮೀಣ ಪುರ್ನವಸತಿ ಕಾರ್ಯಕರ್ತರಾಗಿ ಮತ್ತು ಬೆಳಗಾವಿ ಜಿಲ್ಲಾ ವಿಕಲಚೇತನರ ಕ್ರೀಡಾ ಸಂಘದ (ರಿ) ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.