ಬೆಳಗಾವಿ : ಕೋವಿಡ್-19 ನಡುವೆಯೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಪ್ರಸಕ್ತ ವರ್ಷ ಐತಿಹಾಸಿಕ ಬಜೆಟ್ ಮಂಡಣೆ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಶನಿವಾರ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಬಜೆಟ್ ಮಂಡಣೆಯ ವೇಳೆ ಕೇಂದ್ರ ಸರಕಾರದ ಮುಂದೆ ಇನ್ನಷ್ಟು ತೆರಿಗೆ ವಿಧಿಸಿ ಹಣ ಸಂಗ್ರಹಿಸುವುದು ಅಥವಾ ಸಾಲ ಮಾಡಿಯಾದರೂ ಹೆಚ್ಚು ಮೂಲಸೌಕರ್ಯ ಒದಗಿಸುವುದು, ಹಣಕಾಸು ಚಟುವಟಿಕೆಗಳ ಹೆಚ್ಚಳ ಹಾಗೂ ಉತ್ಪಾನೆ ಹೆಚ್ಚಳದ ಎರಡು ಆಯ್ಕೆಗಳಿದ್ದವು. ಅದರಲ್ಲಿ ಎರಡನೇ ಆಯ್ಕೆ ನಮ್ಮದಾಯಿತು. ಇದು ಭಾರತವನ್ನು 2025ರ ವೇಳೆಗೆ 5 ಟ್ರಿಲಿಯನ್ ಆರ್ಥಿಕ ವ್ಯವಸ್ಥೆಯತ್ತ ತೆಗೆದುಕೊಂಡು ಹೋಗಲಿದೆ ಎಂದರು.

ಇದೊಂದು ಐತಿಹಾಸಿಕ ಬಜೆಟ್. ಕೃಷಿ ಉತ್ಪಾದನೆ ಪ್ರಮಾಣ ಹೆಚ್ಚಳ, ಮೂಲಸೌಕರ್ಯ ಹೆಚ್ಚಳ, ಆರೋಗ್ಯ ಕ್ಷೇತ್ರದಲ್ಲಿ ಸೌಕರ್ಯ ವೃದ್ದಿಗೆ ಇದು ಪೂರಕ ಎನ್ನಿಸಲಿದೆ. ಎರಡನೇ ವಿಚಾರ ಕಷ್ಟದಾಯಕವಾದರೂ ಜನರ ಹಿತ ದೃಷ್ಠಿಯಿಂದ ಈ ವಿಚಾರವನ್ನು ಆಯ್ಕೆ ಮಾಡಲಾಯಿತು. ಅಂತರಾಷ್ಟ್ರೀಯ ಹಣಕಾಸು ನಿಧಿಯೂ ಭಾರತವು ಅತಿ ವೇಗದಿಂದ ಅಭಿವೃದ್ದಿ ಸಾಧಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದೆ.
ಇದೇ ಕಾರಣಕ್ಕೆ ನಾವು ಮೂಲ ಸೌಕರ್ಯಕ್ಕೆ ಗರಿಷ್ಠ ಒತ್ತನ್ನು ನೀಡಲಾಗಿದೆ. ಕೃಷಿ ಮೂಲಸೌಕರ್ಯಕ್ಕೆ 1 ಲಕ್ಷ ಕೋಟಿ ರು. ವೆಚ್ಚ ಮಾಡಲಾಗುವುದು. ವಿವಿಧ ಕ್ಷೇತ್ರಗಳ ಮೂಲಸೌಕರ್ಯ ವೃದ್ದಿಗೆ ಒಟ್ಟಾಗಿ ಮುಂದಿನ ಐದು ವರ್ಷಗಳಲ್ಲಿ 100 ಲಕ್ಷ ಕೋಟಿ ರು. ಖರ್ಚು ಮಾಡಲಾಗುವುದು ಎಂದು ಹೇಳಿದರು.
ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ 33 ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಅಡಿಗಲ್ಲು, 1.197 ಕಿ.ಮೀ, 10,904 ಕೋಟಿ ರು. ಬಿಡುಗಡೆ, 2021-22ರಲ್ಲಿ ಕರ್ನಾಟಕದಲ್ಲಿ 1,16.144 ಕೋಟಿ ರು.ನ ಮೂಲ ಸೌಕರ್ಯ ವ್ಯವಸ್ಥೆ ನಿರ್ಮಾಣ, 2ನೇ ಹಂತದ ಮೆಟ್ರೋ ನಿರ್ಮಾಣ ಕಾಮಗಾರಿಗೆ 14,788 ಕೋಟಿ ರು. ಬಿಡುಗಡೆಯಾಗಿದೆ.
ಕರ್ನಾಟಕದಲ್ಲಿ ರೈಲ್ವೆ ಯೋಜನೆಗಳಿಗೆ 4,870 ಕೋಟಿ ರು. ಅನುದಾನ ಬಿಡುಗಡೆಯಾಗಿದೆ. ತುಮಕೂರು 7,725 ಕೋಟಿ ರು. ವೆಚ್ಚದಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಾಣ. ಈ ಮೂಲಕ 2.8 ಲಕ್ಷ ಉದ್ಯೋಗಾವಕಾಶ ಲಭಿಸಲಿದೆ ಎಂದರು. ಅಮೇರಿಕಾ ಸಂಸ್ಥೆಯಾದ ಟೆಸ್ಲಾವು ಎಲೆಕ್ಟ್ರಿಕಲ್ ಕಾರು ಉತ್ಪಾದನಾ ಘಟಕವನ್ನು ಕರ್ನಾಟಕದಲ್ಲಿ ತೆರೆಯಲಿದೆ.
ಕೊಚ್ಚಿ-ಮಂಗಳೂರು ಗ್ಯಾಸ್ ಪೈಪ್‌ಲೈನ್ ಈಗಾಗಲೇ ಲೋಕಾರ್ಪಣೆಗೊಂಡಿದ್ದು, ಉತ್ತರ ಕರ್ನಾಟಕದ ಭಾಗದಲ್ಲಿ 21,100 ಕೋಟಿ ರು. ವೆಚ್ಚದಲ್ಲಿ 13 ಹೆದ್ದಾರಿ ಯೋಜನೆಗಳಿಗೆ ಅಸ್ತುವಾಗಿದೆ ಎಂದರು.
ಬಾಕ್ಸ್ಭದ್ರಾಯೋಜನೆರಾಷ್ಟ್ರೀಯ ಯೋಜನೆಮಾಡಲುಫೈನಲ್ಆಗಿದೆ: ಫೆ. 22 ರಂದು ಭದ್ರಾ ಯೋಜನೆ ರಾಷ್ಟ್ರೀಯ ಯೋಜನೆ ಮಾಡಲು ಫೈನಲ್ ಆಗಿದೆ. ಆಲಮಟ್ಟಿ, ಕೃಷ್ಣಾ ಯೋಜನೆ ರಾಷ್ಟ್ರೀಯ ಯೋಜನೆ ಮಾಡಲು ಪ್ರಯತ್ನ ಮಾಡಲಾಗುತ್ತಿದೆ. ರಾಷ್ಟ್ರೀಯ ಯೋಜನೆಯಾದರೆ ಕೇಂದ್ರ ಸರಕಾರದ 90% ಅನುದಾನ ನೀಡುತ್ತದೆ. ರಾಜ್ಯ ಸರಕಾರದಿಂದ 10% ಅನುದಾನ ಸಿಗಲಿದೆ ಎಂದು ಸ್ಪಷ್ಟಪಡಿಸಿದರು.

ಮಹಾದಾಯಿ ಯೋಜನೆಯನ್ನು ಆರಂಭ ಮಾಡಲು ಶೀಘ್ರದಲ್ಲೇ ದೆಹಲಿಗೆ ತೆರಳಿ ಸಭೆ ಮಾಡುತ್ತೇನೆ. ಆದಷ್ಟು ಬೇಗ ಕಾಮಗಾರಿಯನ್ನು ಆರಂಭಿಸಲು ಚಿಂತನೆ ನಡೆಸಲಾಗುವುದು ಎಂದು ಹೇಳಿದರು. ಸಾಂಬ್ರಾ ಹಾಗೂ ಬಾಗಲಕೋಟ ರಸ್ತೆಯನ್ನು ಚತುಷ್ಪತ ರಸ್ತೆ ಮಾಡಲು ಸರಕಾರಕ್ಕೆ ವಿನಂತಿಸಿಕೊಳ್ಳಲಾಗಿದೆ. ಸಾಂಬ್ರಾ ವಿಮಾನ ನಿಲ್ದಾಣ ಇರುವುದರಿಂದ ನಾಲ್ಕು ಮಾರ್ಗದ ರಸ್ತೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ಬಾಕ್ಸ್ ಹೆಬ್ಬಾಳ್ಕರ್‌ಗೆ ಔಟ್ ಆಫ್ ಮೈಂಡ್ ಎಂದ ಸಾಹುಕಾರ್ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮೈಡ್ ಔಟ್ ಆಗಿದೆ. ಈ ಹಿಂದೆ ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಸಂಜಯ ಪಾಟೀಲ ಶಾಸಕರಿದ್ದರು. ಆಗ ಆ ಕ್ಷೇತ್ರದಲ್ಲಿ ಆಕೆ ಮಾಡಿದ್ದೇನು. ಅವರ ಮೈಂಡ್ ಔಟ್ ಆಗಿದೆ. ಎಂದು ಲೇವಡಿ ಮಾಡಿದರು.
ಲಕ್ಷ್ಮೀ ಹೆಬ್ಬಾಳ್ಕರ್ ಗೋಕಾಕನಿಂದ ಸ್ಪರ್ಧೆ ಮಾಡೋದಾದ್ರೆ ಮೋಸ್ಟ್ ವೆಲ್ ಕಮ್ ಅಂತಾ ಹೇಳಿದ್ದೇನೆ. ಇನ್ನು ಹೆಬ್ಬಾಳ್ಕರ್ ಔಟ್ ಆಪ್ ಮೈಂಡ್ ಆಗಿದ್ದಾರೆ, ಅದಕ್ಕೆ ಹೀಗೆ ಮಾತಾನಡುತ್ತಿದ್ದಾರೆ. ಔಟ್ ಆಪ್ ಮೈಂಡ್ ಆದರೆ ಬಸ್ ನಿಲ್ದಾಣದಲ್ಲ್ಲಿ ಹುಡಕಬೇಕು ಎಂದು ವ್ಯಂಗ್ಯವಾಡಿದ್ದಾರೆ.