ಶಂಕರಗೌಡ ಪಾಟೀಲಗೆ ಎಂಪಿ ಟಿಕೆಟ್ ನೀಡುವಂತೆ ಉದ್ಯಮಿಗಳ ಒತ್ತಾಯ

  • 15 Jan 2024 , 2:47 AM
  • Belagavi
  • 163

 ಬೆಳಗಾವಿ: ಇಂಡಸ್ಟ್ರಿಯಲ್ ಮಾಲೀಕರ ವತಿಯಿಂದ ಈ ದಿನ ಸಭೆ ನಡೆಸಿ ನಮ್ಮ ಬೆಳಗಾವಿಯಲ್ಲಿ ಉದ್ಯಮ್ ಭಾಗದಲ್ಲಿರುವ ಎಲ್ಲಾ ಕಾರ್ಖಾನೆಗಳ ರಸ್ತೆ ಗಳ ಡಾಂಬರೀಕರಣ, ರಸ್ತೆಬದಿ ದೀಪಗಳು, ಕುಡಿಯುವ ನೀರಿನ ಸೌಲಭ್ಯ, ಶೌಚಾಲಯಗಳು,ಶೆಡ್ ಗಳ ನಿರ್ಮಾಣ ವಾಹನ ಪಾರ್ಕಿಂಗ್ ವ್ಯವಸ್ಥೆ, ಹಾಗೂ ರಿಂಗ್ ರೋಡ್ ಗಳ ರಸ್ತೆ ನಿರ್ಮಾಣ ಶೀಘ್ರ ಕೈಗೊಳ್ಳುವಂತೆ ಆಗ್ರಹಿಸಿ ಸಂಬಂಧಪಟ್ಟ ಇಲಾಖೆಗಳಿಗೆ ಭೇಟಿ ನೀಡಿ ಶೀಘ್ರ ಕೆಲಸ ಕಾರ್ಯಗಳು ಮಾಡುವಂತೆ ಒತ್ತಾಯಿಸಿದರು.

ಬೆಳಗಾವಿ ಲೋಕಸಭಾ ಉಪ ಚುನಾವಣೆಗೆ ಬಿಜೆಪಿ ಪಕ್ಷದ ಅಭ್ಯರ್ಥಿ ಆಯ್ಕೆ ಕುರಿತು ಹಲವಾರು ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಸಿ ಅದರಲ್ಲಿ ಸೂಕ್ತ ಅಭ್ಯರ್ಥಿ ಶಂಕರಗೌಡ ಪಾಟೀಲ್ ಅವರೇ, ಎಂದು ನಿರ್ಣಯಿಸಲಾಯಿತು. ಮತ್ತು ಅನೇಕ ಸಮಾಜದ ಗಣ್ಯರು ಕೂಡಾ ಬೆಂಬಲ ನೀಡಿದ್ದಾರೆ.

ಹಲವು ಮಠಾಧೀಶರ ಅಭಿಪ್ರಾಯ ಕೂಡ ಪರಿಗಣಿಸಿ ಜನರ ಸಮಸ್ಯೆ ಗಳಾದ ರೈತರ ಕಾರ್ಮಿಕರ, ಕಬ್ಬುಬೆಳೆಗಾರರ ಮತ್ತು ನದಿ ನೀರು ಹಂಚಿಕೆ ಅದರಲ್ಲಿ ಮಹದಾಯಿ ಹಾಗೂ ಕಳಸ ಬಂಡೂರಿ ಸಮಸ್ಯೆ, ಅಲ್ಲದೆ ರೈಲುಮಾರ್ಗಗಳ ಅಭಿವೃದ್ಧಿ ಕಾರ್ಯ ಬೆಳಗಾವಿಯಲ್ಲಿ, ರಿಂಗ್ ರೋಡ್ ಕುರಿತು ಈ ಎಲ್ಲ ಸಮಸ್ಯೆಗಳ ಬಗ್ಗೆ ಸಮರ್ಥವಾಗಿ ಸಾಮರ್ಥ್ಯವಿರುವ ಹಾಗೂ ಪ್ರಾಮಾಣಿಕ ಹಿರಿಯ ಮುತ್ಸದಿ, ರಾಜಕಾರಣಿ ಶ್ರೀಯುತ ಶಂಕರಗೌಡ ಪಾಟೀಲ್ ಅವರು ಸೂಕ್ತ ವ್ಯಕ್ತಿ ಎಂದು ಅಭಿಪ್ರಾಯ ವ್ಯಕ್ತವಾಗುತ್ತಿದೆ .

ಇದಕ್ಕೆ ಕಾರಣ ಶ್ರೀ ಶಂಕರಗೌಡ ಪಾಟೀಲ್ ಅವರ ಸುದೀರ್ಘ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆ ಪರಿಗಣಿಸಿ ನಿರ್ಧಾರಕ್ಕೆ ಬರಲಾಯಿತು ರಾಜಕೀಯ ಸಾಮಾಜಿಕ ಜೀವನ 1970 ದಶಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕ ಮುಂದೆ ಸಂಘಪರಿವಾರದ ಸೇವೆ 1981 _84 ವರಗೆ ಸಂಘದ ಪ್ರಚಾರಕರಾಗಿ ಮಂಗಳೂರು ಭಾಗದಲ್ಲಿ ಕಾರ್ಯನಿರ್ವಹಿಸಿದ್ದಾರೆ.

ನಂತರ 1992ರಲ್ಲಿ ಬಿಜೆಪಿ ರಾಜ್ಯ ಘಟಕದ ಯುವ ಮೋರ್ಚಾ ಕಾರ್ಯದರ್ಶಿಗಳಾಗಿ 2002 ರಲ್ಲಿ ಸ್ಪೈಸ್ ಬೋರ್ಡ್ ಸದಸ್ಯರಾಗಿ ಮುಂದೆ 2007ರಲ್ಲಿ ಬೆಳಗಾವಿನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿ 2009ರವರೆಗೆ ಸೇವೆ ಸಲ್ಲಿಸಿದ್ದಾರೆ. ನಂತರ 2010ರಲ್ಲಿ ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ 2013 ರವರಿಗೆ ಸಲ್ಲಿಸಿರುವ ಸೇವೆ. 2016 ರಾಜ್ಯ ಕಿಸಾನ ಮೋರ್ಚಾ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಿದರು. ಮುಂದೆ 2017 ರಿಂದ ರಾಷ್ಟ್ರೀಯ ಕಿಸಾನ್ ಮೋರ್ಚಾ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

2019ರಲ್ಲಿ ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿಗಳಾಗಿ ಸಲ್ಲಿಸಿರುವ ಸೇವೆ ಮತ್ತು ಪ್ರಸ್ತುತ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಯಾಗಿ ಸಲ್ಲಿಸಿದ ಸೇವೆಯನ್ನು ವಿಶ್ಲೇಷಿಸಿ ಶ್ರೀಯುತ ಶಂಕರಗೌಡ ಪಾಟೀಲರೇ ಬೆಳಗಾವಿ ಲೋಕಸಭಾ ಉಪ ಚುನಾವಣೆಗೆ ಬಿಜೆಪಿಯಿಂದ ಸೂಕ್ತ ಹಾಗೂ ಸಮರ್ಥ ವ್ಯಕ್ತಿ (ಅಭ್ಯರ್ಥಿ) ಎಂದು ಜನರ ಅಪೇಕ್ಷೆಯಂತೆ ನಮ್ಮ ಕಾರ್ಖಾನೆ ಮಾಲೀಕರ ಅಭಿಪ್ರಾಯ ಕೂಡ ಈ ವ್ಯಕ್ತಿ ಸೂಕ್ತವೆಂದು ಈ ಮೂಲಕ ತಿಳಿಯಪಡಿಸುತ್ತೇವೆ.

Read All News