ದೆಹಲಿ :2021 ಫೆಬ್ರವರಿ 15/16 ರ ಮಧ್ಯ ರಾತ್ರಿಯಿಂದ ರಾಷ್ಟ್ರೀಯ ಹೆದ್ದಾರಿಗಳ ಶುಲ್ಕ ಪ್ಲಾಜಾಗಳಲ್ಲಿನ ಎಲ್ಲಾ ಪಥಗಳನ್ನು “ಫಾಸ್ಟ್ಟ್ಯಾಗ್ಲೇನ್ಓಫ್ದಿಫೀಪ್ಲಾಜಾ ” ಎಂದು ಘೋಷಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನಿರ್ಧರಿಸಿದೆ.
ಆದ್ದರಿಂದ ಎನ್ಎಚ್ ಶುಲ್ಕ ನಿಯಮ 2008 ರ ಪ್ರಕಾರ ಯಾವುದೇ ವಾಹನ ಮಾನ್ಯತೆ ಇಲ್ಲದ ಫಾಸ್ಟ್‌ಟ್ಯಾಗ್ ಅಥವಾ ಫಾಸ್ಟ್ ಟ್ಯಾಗ್ ರಿಂಗ್ ಅಳವಡಿಸಲಾಗಿದ ವಾಹನಕ್ಕೆ ಅನ್ವಯವಾಗುವ ಶುಲ್ಕದ ಎರಡು ಪಟ್ಟು ಸಮಾನವಾದ ಶುಲ್ಕವನ್ನು ಪಾವತಿಸುತ್ತದೆ ಎಂದು ತಿಳಿಸಿದೆ.
ಇಂದು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಡಿಜಿಟಲ್ ಮೋಡ್ ಮೂಲಕ ಶುಲ್ಕ ಪಾವತಿಯನ್ನು ಮತ್ತಷ್ಟು ಉತ್ತೇಜಿಸಲು, ಸಮಯ ಮತ್ತು ಇಂಧನ ಬಳಕೆಯನ್ನು ಕಡಿಮೆ ಮಾಡಲು ಮತ್ತು ಶುಲ್ಕ ಪ್ಲಾಜಾಗಳ ಮೂಲಕ ತಡೆರಹಿತ ಮಾರ್ಗವನ್ನು ಒದಗಿಸಲು ಇದನ್ನು ಮಾಡಲಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
2021 ರ ಜನವರಿ 1 ರಿಂದ ಜಾರಿಗೆ ಬರುವಂತೆ ಎಂ & ಎನ್ ವಿಭಾಗದ ಮೋಟಾರು ವಾಹನಗಳಲ್ಲಿ ಫಾಸ್ಟ್ಯಾಗ್ ಅಳವಡಿಸಲು ಸಚಿವಾಲಯ ಕಡ್ಡಾಯಗೊಳಿಸಿತ್ತು.