ಬೆಳಗಾವಿ :ಸಮ್ಮಿಶ್ರ ಸರಕಾರವನ್ನು ಪತನಗೊಳಿಸಿ ಬಿಜೆಪಿಗೆ ಬಂದಿರುವ ೧೭ಜನ ಶಾಸಕರು ಆನಂದದಿಂದ ಕೆಲಸ ಮಾಡುತ್ತಿದ್ದೇವೆ. ನಾವು ಬಿಜೆಪಿಯಲ್ಲಿ ಗಟ್ಟಿಯಾಗಿದ್ದೇವೆ. ನಾಣು ಮನಸ್ಸು ಮಾಡಿದ್ದರೆ ೨೪ ಗಂಟೆಯಲ್ಲಿ ಐದು ಜನ ಕಾಂಗ್ರೆಸ್ ಶಾಸಕರನ್ನು ಬಿಜೆಪಿಗೆ ಕರೆಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸವಾಲ್ ಹಾಖಿದರು.

ಭಾನುವಾರ ನಗರದ ಸಿಪಿಎಡ್ ಮೈದಾನದಲ್ಲಿ ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಳದ ನೂತನ ಗ್ರಾಪಂಗೆ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಸತ್ಕಾರ ಸಮಾರಂಭದ ಉದ್ಘಾಟಿಸಿ ಮಾತನಾಡಿದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಜತೆಗೆ ನಾವು ಇಂದಿಗೂ ಮಾತನಾಡುತ್ತೇನೆ. ಅವರೊಂದಿಗೆ ನಾನು ದಿನಕ್ಕೆ ಎರಡು ಬಾರಿ ಕರೆ ಮಾಡಿ ಮಾತನಾಡುತ್ತೇನೆ. ಆದರೆ ಪಕ್ಷದ ವಿಚಾರಕ್ಕೆ ಬಂದರೆ ನಾನು ಬಿಜೆಪಿಗ.
ನೀವು ನಂಬಲು ಆಗಲ್ಲ ಅಂಥ ದೊಡ್ಡ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರಲು ಸಿದ್ದರಾಗಿದ್ದಾರೆ. ಟಾಪ್ ೫ ಜನರ ಶಾಸಕರ ಹೆಸರು ಹೇಳಿದರೆ ನೀವು ಗಾಬರಿಯಾಗುತ್ತಿದ್ದಿರಿ. ಕಾಂಗ್ರೆಸ್ ಮಹಾನ್ ನಾಯಕರುಗಳನ್ನು ನಾನು ಬಿಜೆಪಿಗೆ ತರುತ್ತೇನೆ ಎಂದು ಸವಾಲ್ ಹಾಕಿದರು.
ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ರಾಜಕೀಯವಾಗಿ ಮಾತನಾಡುವಾಗ ಅನುಭವಬೇಕು. ನಾವು ಅವರ ಬಗ್ಗೆ ಕೆಟ್ಟದನ್ನು ಮಾತನಾಡುವುದಿಲ್ಲ. ನೀವು ಮಾತನಾಡಬೇಡಿ ಎಂದು ಸಲಹೆ ನೀಡಿದರು.