ಶಾಹೀದ್ ಅಫ್ರಿದಿಗೆ ಕೊರೊನಾ ಪಾಸಿಟಿವ್

  • 15 Jan 2024 , 3:26 AM
  • world
  • 104
ಪಾಕಿಸ್ತಾನ ಕ್ರಿಕೆಟ್ ಟೀಂನ ಮಾಜಿ ಕ್ಯಾಪ್ಟನ್ ಶಾಹೀದ್ ಅಫ್ರಿದಿಗೆ ಕೊರೊನಾ ಪಾಸಿಟಿವ್ ಸೋಂಕು ಇರುವುದು ದೃಢವಾಗಿದೆ ಈ ಕುರಿತು ಸ್ವತಃ ಟ್ವೀಟ್ ಮಾಡಿರುವ ಅಫ್ರಿದಿ ಕಳೆದ ಒಂದು ವಾರದಿಂದ ನನ್ನ ಆರೋಗ್ಯ ಹದಗೆಟ್ಟಿದೆ, ಮೈ ಕೈ ನೋವಿನಿಂದ ಬಳಲುತ್ತಿದ್ದೇನೆ, ಹೀಗಾಗಿ ಆರೋಗ್ಯ ಪರೀಕ್ಷೆ ಮಾಡಿಸಿದೆ.. ದುರಾದೃಷ್ಟವಶಾತ್ ನಾನು ಕೋವಿಡ್ ಪಾಸಿಟಿವ್‌ ಆಗಿದ್ದೇನೆ.
ನನಗೆ ಗುರುವಾರದಿಂದ ಅಸೌಖ್ಯ ಕಾಡುತ್ತಿದೆ ನನ್ನ ಪರೀಕ್ಷೆ ನಡೆಸಿದಾಗ ಕೋವಿಡ್ 19 ಪಾಸಿಟಿವ್ ಇದೆಯೆಂದು ತಿಳಿದು ಬಂದಿದೆ. ನಾನು ಶೀಘ್ರ ಗುಣಮುಖನಾಗಲು ಇಚ್ಚಿಸುತ್ತೇನೆ ನನಗೆ ನಿಮ್ಮ ಪ್ರಾರ್ಥನೆಗಳ ಅಗತ್ಯವಿದೆ ಇನ್‍ ಶಾ ಅಲ್ಲಾಹ್, ಎಂದು ಅವರು ಟ್ವೀಟ್ ಮಾಡಿದ್ದಾರೆ.

Read All News