ಮೂರು ವರ್ಷ ಒಂದೇ ಶರ್ಟ್ ಹಾಕಿದ ರೈತ, ಸ್ವಾರ್ಥಕ್ಕಾಗಿ ಬದುಕು ನಡೆಸುವ ಜನರ ಮದ್ಯೆ ನಿಸ್ವಾರ್ಥದಿಂದ ಪಣ ತೊಟ್ಟ ರೈತ
- 15 Jan 2024 , 4:03 AM
- Belagavi
- 120
ಅದೊಂದು ಚಿಕ್ಕ ಗ್ರಾಮ, ಆ ಚಿಕ್ಕ ಗ್ರಾಮದಲ್ಲಿ ಆತ ಕೇವಲ ಒಂದು ಎಕರೆ ಜಮೀನು ಹೊಂದಿದ ಬಡ ರೈತ. ತನ್ನಂತೆ ಜಮೀನಿನಲ್ಲಿ ಬೆಳೆದ ಬೆಳೆಗೆ ಸೂಕ್ತ ನೀರಿಲ್ಲದೇ ಕಂಗಾಲಾಗಿದ್ದ ಅದೆಷ್ಟೋ ಅನ್ನದಾತರ ಸಂಕಷ್ಟಕ್ಕೆ ಈಗ ದನಿಯಾಗಿದ್ದಾನೆ, ಹೌದು ಸ್ನೇಹಿತರೆ... ಈಗ ನಾವು ಹೇಳಲು ಹೊರಟಿರುವುದು ಒಬ್ಬ ಸಾಮಾನ್ಯ ರೈತನ ರಿಯಲ್ ಕಹಾನಿ... ಅಂದು ಆ ರೈತ ತೆಗೆದುಕೊಂಡ ಆ ಒಂದು ನಿರ್ಧಾರದಿಂದ ಇಂದು ಹತ್ತಾರು ಹಳ್ಳಿ, ಸಾವಿರಾರು ಎಕರೆ ಜಮೀನಿಗೆ ನೀರು ಸಿಗುವಂತಾಗಿದೆ. ಹಾಗಾದ್ರೆ ಆ ರೈತ ಮಾಡಿದ ಅಂತಹ ನಿರ್ಧಾರವಾದರು ಏನು ? ಆ ರೈತನಿಂದ ಉಳಿದ ಅನ್ನದಾತರ ಬಾಳು ಬಂಗಾರವಾಗಿದ್ದು ಹೇಗೆ ? ಹಾಗಾದ್ರೆ ಮುಂದೆ ನೋಡಿ ಲೋಕಲ್ ವಿವ್ಯೂ ಬಿಚ್ಚಿಟ್ಟಿದೆ ಅಸಲಿಯತ್ತು...
ಆತ ಮೂರು ವರ್ಷದಿಂದ ಒಂದೇ ಒಂದು ಹರಿದ ಶರ್ಟ್ ಹಾಕ್ಕೊಂಡು ಬರಿಕಾಲಿನಲ್ಲಿ ಓಡಾಡಿದ್ದ ಎಣ್ಣೆನೆ ಇಲ್ಲದ ರೈತನ ತಲೆ, ಹರಿದ ಅಂಗಿ ತೊಟ್ಟಿದ್ದ ಆ ರೈತ ಅಂದು ತೆಗೆದುಕೊಂಡ ಆ ಒಂದು ನಿರ್ಧಾರದಿಂದ ಇಂದು ಸಾವಿರಾರು ಎಕರೆಗಳಿಗೆ ನೀರು ತಲುಪುವಂತಾಗಿದೆ. ಹರಿದ ಬಟ್ಟೆ, ಹಿಡಿದ ಹಠ, ಸಾಧಿಸಬೇಕೆಂಬ ಛಲ ತೊಟ್ಟಿದ್ದ ಈತನ ಹೆಸರು ಜೋತಿಬಾ ಮನವಾಡಕರ ಬೆಳಗಾವಿ ತಾಲೂಕಿನ ಹಂದಿಗನೂರು ಗ್ರಾಮದ ಬಡ ರೈತ. ಹಂದಿಗನೂರ ಸೇರಿದಂತೆ ಅಕ್ಕ ಪಕ್ಕದಲ್ಲಿರುವ ಗ್ರಾಮಗಳ ಸಾವಿರಾರು ಎಕರೆ ಜಮೀನಿಗೆ ನೀರಿನ ಅಭಾವವಿತ್ತು... ಹೀಗಾಗಿ ಜ್ಯೋತಿಬಾ ಮನವಾಡಕರಗೆ ಗ್ರಾಮದಲ್ಲಿ ಒಂದು ಕೆರೆ ತೆಗೆಯಬೇಕು ಎಂಬ ಯೋಚನೆ ಬಂದದ್ದೆ ತಡ ಕೆರೆ ಕೊರೆಯಲು ಭೂಮಿಯ ಅವಶ್ಯಕತೆ ಇತ್ತು, ಈತನ ಕನಸಿಗೆ ಇರುವಷ್ಟು ಭೂಮಿ ಅಷ್ಟು ಸುಲಭಕ್ಕೆ ಸಿಗೋ ಲಕ್ಷಣ ಕಾಣಿಸಲಿಲ್ಲ ಹೀಗಾಗಿ ಕೆರೆ ನಿರ್ಮಾಣಕ್ಕೆ ಭೂಮಿ ನೀಡಿ ಅಂತಾ ಎಷ್ಟೋ ಜನರ ಮುಂದೆ ಬೇಡಿಕೆ ಇಟ್ಟರೂ ಈತನ ಕನಸು ಮಾತ್ರ ಅಂದು ಕೈ ಗೂಡಲಿಲ್ಲ. ಕೆರೆಯ ನಿರ್ಮಾಣಕ್ಕಾಗಿ ಜಾಗ ಮುಂಜೂರು ಮಾಡಿ ಅಂತಾ ಕಳೆದ ಮೂರು ವರ್ಷಗಳಿಂದ ಜೋತಿಬಾ ಹಠ ಹಿಡಿದ ಅದಕ್ಕಾಗಿ ಅಲೆದೂ ಅಲೆದೂ ಚಪ್ಪಲಿ ಸವೆದವು ಹೊರತು ಯಾವುದೇ ಉಪಯೋಗ ಆಗಿಲ್ಲ., ಹಠವಾದಿ ಜೋತಿಬಾ ಮಾತ್ರ ಹಿಡಿದ ಹಠ ಬಿಡದೆ ಹಂದಿಗನೂರ ಗ್ರಾಮದಲ್ಲಿ ಕೆರೆ ನಿರ್ಮಾಣಕ್ಕಾಗಿ ಜಾಗ ಮುಂಜೂರು ಆಗುವವರೆಗೆ ಹಾಕಿದ ಶರ್ಟ್ ತೆಗೆಯಲ್ಲ, ಹೊಸ ಶರ್ಟ್ ಹಾಕಲ್ಲ ಅಂತಾ ಪ್ರತಿಜ್ಞೆ ಮಾಡಿದ್ದ ಹೀಗೆ ಕಳೆದ ಮೂರು ವರ್ಷಗಳಿಂದ ಒಂದೇ ಹಳೆಯ ಮತ್ತು ಹರಿದ ಶರ್ಟ್ ಮೇಲೆ ಕೆರೆ ನಿರ್ಮಾಣಕ್ಕಾಗಿ ಭೂಮಿ ಮುಂಜೂರು ಮಾಡಿ ಅಂತ ಅಲೆದಾಟ ನಡೆಸಿ ಕೊನೆಗೂ ಜಯ ಸಾಧಿಸಿದ್ದಾನೆ. ಇನ್ನು ಈ ಕ್ಷೇತ್ರದ ಶಾಸಕರಾದ ಸತೀಶ ಜಾರಕಿಹೊಳಿ ಕೂಡ ಅಧಿಕಾರಿಗಳ ಜೊತೆ ಮಾತನಾಡಿ ಜಾಗ ಮುಂಜೂರು ಮಾಡಲು ಸಹಕಾರ ನೀಡಿದ್ದಾರೆ. ಇದರಿಂದ ಜೋತಿಬಾ ಫುಲ್ ಖುಷ್ ಆಗಿದ್ದಾನೆ. ಅಂದು ಕೆರೆಯ ನಿರ್ಮಾಣಕ್ಕೆ ಜಾಗ ಮುಂಜೂರು ಆಗಿರಲಿಲ್ಲ, ಹೀಗಾಗಿ ಜೋತಿಬಾ ಕಳೆದ ಮೂರು ವರ್ಷಗಳಿಂದ ಕಚೇರಿಯಿಂದ ಕಚೇರಿಗೆ ಅಲೆದಾಡಿ ಮೂರು ವರ್ಷಗಳಿಂದ ಒಂದೇ ಶರ್ಟ್ ಹಾಕ್ಕೊಂಡು, ಹರಿದ ಶರ್ಟ್ ಪ್ಯಾಂಟ್ ನಿಂದ ವಿನೂತನವಾಗಿ ಹೋರಾಟ ನಡೆಸುತ್ತಾನೆ. ಅಧಿಕಾರಿಗಳು ಕೇಳಿದ 100ಕ್ಕೂ ಹೆಚ್ಚು ದಾಖಲಾತಿ ಪತ್ರಗಳನ್ನ ಒದಗಿಸಿದ ಬಳಿಕ ಹಂದಿಗನೂರ ಪಂಚಾಯತಿಯಲ್ಲಿ ಸದ್ಯ 21 ಎಕರೆ ಕೆರೆಯ ನಿರ್ಮಾಣಕ್ಕೆ ಜಾಗ ಮುಂಜೂರು ಆಗಿದೆ. ಲಾಕ್ ಡೌನ್ ನಂತರ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆರೆಯ ನಿರ್ಮಾಣ ಮಾಡಲಾಗುತ್ತದೆ. ಇದರಿಂದ ಹಂದಿಗನೂರ ಗ್ರಾಮ ಅಷ್ಟೇ ಅಲ್ಲದೆ ಹತ್ತಿರವಿರುವ ಶಿವಪುರ, ಕಟ್ಟನಬಾವಿ, ಬೋಡಕ್ಯಾನಟ್ಟಿ, ಅಗಸಗಿ, ಸೇರಿದಂತೆ ಸುತ್ತಲೂ ಹತ್ತು ಹಳ್ಳಿಯ ಜನರಿಗೆ ಈ ಕೆರೆಯ ಲಾಭವಾಗುತೆ. ಇನ್ನು ಕೆರೆ ನಿರ್ಮಾಣದ ಹಿನ್ನಲೆ ಸುತ್ತ ಮುತ್ತಲಿನ ಹಳ್ಳಿಯ ನೂರಾರು ಜನರಿಗೆ ಉದ್ಯೋಗ ಸಿಗುತ್ತೆ. ಜೋತಿಬಾ ಕೆರೆ ನಿರ್ಮಾಣಕ್ಕೆ ಹಾಗೂ ಜಾಗ ಮುಂಜೂರಿಗಾಗಿ ಮೂರು ವರ್ಷಗಳ ಕಾಲ ಒಂದೇ ಹರಿದ ಶರ್ಟ್ ನಲ್ಲೆ ಅಲೆದಾಡಿದ ಪರಿಣಾಮದಿಂದಾಗಿ ಈ ಕೆರೆ ನಿರ್ಮಾಣ ಆಗಲಿದೆ. ಇಂತಹ ಮಹತ್ಕಾರ್ಯಕ್ಕಾಗಿ ವಿಭಿನ್ನ ರೀತಿಯ ಪ್ರತಿಭಟನೆ ಕೈಕೊಂಡು ಸರ್ಕಾರದ ಕಣ್ಣು ತೆರೆಸಿದ ಜೋತಿಬಾಗೆ ಸ್ಥಳಿಯರು ಅಭಿನಂದನೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ ಮಾಜಿ ಸಚಿವ, ಶಾಸಕ ಸತೀಶ ಜಾರಕಿಹೊಳಿ ಕೂಡಾ ಜೋತಿಬಾ ಅವರನ್ನು ಕರೆದು ಅಭಿನಂದನೆ ಸಲ್ಲಿಸಿ ಹರಿದ ಶರ್ಟ್ ತೆಗೆಸಿ ಹೊಸ ಶರ್ಟ್ ನೀಡಿದ್ದಾರೆ. ಸ್ವಾರ್ಥಕ್ಕಾಗಿ ಬದುಕು ನಡೆಸುವ ಜನರ ಮದ್ಯೆ ನಿಸ್ವಾರ್ಥದಿಂದ ಪಣ ತೊಟ್ಟ ಬಡ ರೈತ ಜೋತಿಬಾ, ಹಳ್ಳಿಯ ಸಾವಿರಾರು ಜಮೀನುಗಳಿಗೆ ನೀರು ಹರಿಸೋದಕ್ಕೆ ಕಚೇರಿ, ಕಚೇರಿ ಅಲೆದು, ಕೆರೆ ನಿರ್ಮಾಣಕ್ಕೆ ಭೂಮಿ ಮುಂಜೂರು ಮಾಡಿ ರಾಜ್ಯಕ್ಕೆ ಮಾದರಿ ರೈತನಾಗಿದ್ದಾನೆ. ಲೋಕಲ್ ವಿವ್ಯೂ ವಿಶೇಷ