ಬೆಳಗಾವಿ ನಗರ ಪೊಲೀಸರ ಭರ್ಜರಿ ಕಾರ್ಯಾಚರಣೆ

  • 15 Jan 2024 , 2:32 AM
  • Belagavi
  • 122

ಬೆಳಗಾವಿ :ಚನ್ನಮ್ಮ ನಗರದಲ್ಲಿರುವ ದಾಬಾ ಹಾಗೂ ಪಾನ್ ಶಾಪ್ ಮೇಲೆ ದಾಳಿ ನಡೆಸಿರುವ ಸೈಬರ್ ಕ್ರೈಮ್ ಪೊಲೀಸರು ಶುಕ್ರವಾರ 20 ಲಕ್ಷ ರು. ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದು, ಮೂವರನ್ನು ಬಂಧಿಸಿದ್ದಾರೆ‌. ಬಂಧಿತ ಆರೋಪಿಗಳನ್ನು 30 ವರ್ಷದ ಬರಕತ್ ಖಾನ್, 25 ವರ್ಷದ ಕಮಲೇಶ್ ಸುರಜನರಾಮ್ ಹಾಗೂ ಸರವನ್ ಎಂದು ಗುರುತಿಸಲಾಗಿದೆ.

ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ. ಕೆ.ತ್ಯಾಗರಾಜನ್, ಡಿಸಿಪಿ ವಿಕ್ರಮ್ ಅಮಟೆ ಮಾರ್ಗದಶನದಲ್ಲಿ ಸೈಬರ್ ಕ್ರೈಮ್ ಸಿಪಿಐ ಬಿ. ಆರ್ ಗಡ್ಡೇಕರ್ ನೇತೃತ್ವದಲ್ಲಿ ಖಚಿತ ಮಾಹಿತಿ ಆಧಾರದ ಮೇಲೆ ಹೊನಗಾ ಗ್ರಾಮದ ಪಿ.ಬಿ.ರಸ್ತೆ ಪಕ್ಕದಲ್ಲಿದ್ದ ರಾಜಸ್ತಾನ ದಾಬಾ ಪಾನ್ ಶಾಪ್ ಹಾಗೂ ಚೆನ್ನಮ್ಮ ನಗರದಲ್ಲಿನ ದಾಬಾದ ಮೇಲೆ ದಾಳಿ ನಡೆಸಲಾಗಿದೆ.

ಬಂಧಿತರಿಂದ 20 ಲಕ್ಷ ಮೌಲ್ಯದ 1 ಕೆಜಿ 15 ಗ್ರಾಂ ಅಫೀಮು ವಶಕ್ಕೆ ಪಡೆಯಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read All News