ಬಾಲಿವುಡ್ ಖ್ಯಾತ ಯುವ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ

  • 15 Jan 2024 , 1:49 AM
  • Mahashtra
  • 134
ಮುಂಬೈ: ಬಾಲಿವುಡ್ ನ ಖ್ಯಾತ ಯುವ ನಟ ಸುಶಾಂತ್ ಸಿಂಗ್ ರಜಪೂತ್ ತಮ್ಮ ಮುಂಬೈ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮ್ಮ ಮನೆಯ ಕೋಣೆಯಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಸುಶಾಂತ್ ಸಿಂಗ್ ಪತ್ತೆಯಾಗಿದ್ದಾರೆ. ಅವರು ಖಿನ್ನತೆಯಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ. ಸುಶಾಂತ್​ ಎಂಎಸ್​ ಧೋನಿ, ಕೇದಾರನಾಥ್​​, ಪಿಕೆ, ಶುದ್ಧ್​ ದೇಸಿ ರೋಮ್ಯಾನ್ಸ್​ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು.

ಮುಂಬೈನ ಬಾಂದ್ರಾದಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ 34 ವರ್ಷದ ಸುಶಾಂತ​ರ ಶವ ಪತ್ತೆಯಾಗಿದೆ. ಇದನ್ನು ಮನೆಯಕೆಲಸದವರು ನೋಡಿ ಮಾಹಿತಿ ನೀಡಿದ್ದಾರೆ. ಬಾಂದ್ರಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read All News