ಕನ್ನಡಿಗರಿಗೆ ದೈರ್ಯ ತುಂಬಿದ ಕಡಾಡಿ

  • 15 Jan 2024 , 3:21 AM
  • Belagavi
  • 119

ಬೆಳಗಾವಿ: ಎಂಇಎಸ್, ಶಿವಸೇನೆಯ ಹಾವಳಿ ಕಡಿಮೆಯಾಗಿದೆ. ಸಂಸತ್ತಿನಲ್ಲಿ ಕರ್ನಾಟಕದ ಎಲ್ಲ ಸಂಸದರು ಕನ್ನಡದ ಪರ ಕೆಲಸ ಮಾಡುತ್ತೇವೆ ಎಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಭರವಸೆ ನೀಡಿದರು. ಸೋಮವಾರ ಹಳೆ ಜಿಪಂ ಸಭಾಂಗಣದಲ್ಲಿ ಕನ್ನಡ ಮುಖಂಡರ ಸಭೆಯಲ್ಲಿ ಮಾತನಾಡಿದರು. ಲೋಕಸಭೆಯಲ್ಲಿ ಶಿವಸೇನೆಯ ಸಂಸದರು ಬೆಳಗಾವಿ, ಗಡಿ ವಿಷಯದ ಕುರಿತು ಧ್ವನಿ ಎತ್ತಿದ್ದರು.

ಈ ಕುರಿತು ಬೆಳಗಾವಿ ಕನ್ನಡ ಕ್ರೀಯಾ ಸಮಿತಿ ರಾಜ್ಯದ ಎಲ್ಲ ಸಂಸದ, ರಾಜ್ಯಸಭಾ ಸದಸ್ಯರಿಗೆ ಪತ್ರ ಬರೆದಿದ್ದರು. ಅಲ್ಲದೆ ಮೊದಲು ನಿಪ್ಪಾಣಿ ಜಿಪಂ, ಬೆಳಗಾವಿ ಪಾಲಿಕೆಯಲ್ಲಿ ಎಂಇಎಸ್ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗುತ್ತಿದ್ದರು. ಅದು ಈಗ ಕ್ರಮೇಣ ಕಡಿಮೆಯಾಗಿದೆ. ಸದ್ಯ ಎಂಇಎಸ್ ನ ನಾಯಕರು ರಾಷ್ಟ್ರೀಯ ಪಕ್ಷಗಳ ಜತೆಗೆ ಗುರುತಿಸಿಕೊಂಡಿದ್ದಾರೆ ಎಂದರು.

ಕನ್ನಡ ಸಂಘಟನೆಗಳು ನೀಡುವ ಸಲಹೆ ಸೂಚನೆಯನ್ನು ಕರ್ನಾಟಕ ಸರಕಾರ ಹಾಗೂ ಕೇಂದ್ರ ಸರಕಾರದ ಮುಖಂಡರ ಗಮನಕ್ಕೆ ತರುವೆ ಎಂದು ಕನ್ನಡ ಸಂಘಟನೆಯ ಮುಖಂಡರಿಗೆ ಭರವಸೆ ನೀಡಿದರು.

Read All News