ಇಂದು ಒಂದೇ ದಿನ 176 ಕೊರೋನಾ ಸೋಂಕು ಪತ್ತೆ

  • 15 Jan 2024 , 1:26 AM
  • Bengaluru
  • 97
ಬೆಂಗಳೂರು: ಕರ್ನಾಟಕದಲ್ಲಿ ಒಂದೇ ದಿನ ಮತ್ತೆ 176 ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 7,000ಕ್ಕೆ ಏರಿಕೆಯಾಗಿದೆ.
ಇಂದು ಬೆಂಗಳೂರು ನಗರದಲ್ಲಿ 42, ಉಡುಪಿ 21, ಯಾದಗಿರಿ 22, ಬೀದರ್ 20​, ಕಲಬುರಗಿ ಜಿಲ್ಲೆಯಲ್ಲಿ 13 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಇಂದು ಸಂಜೆ ಬಿಡುಗಡೆಗೊಳಿಸಿದ ಹೆಲ್ತ್ ಬುಲೆಟಿನ್ ನಲ್ಲಿ ಕೊರೋನಾ ದಿಂದ ಒಂದೇ ದಿನ ಐದು ಸಾವು, 176 ಕೋವಿಡ್ ಪ್ರಕರಣಗಳು ಪಾಸಿಟಿವ್ ಬಂದಿರುವುದಾಗಿ ಮಾಹಿತಿ ನೀಡಲಾಗಿದೆ.
ಇಂದು ಒಟ್ಟು 312 ಜನರು ಗುಣವಾಗಿದ್ದು. ಈ ಮೂಲಕ ರಾಜ್ಯದಲ್ಲಿ ಗುಣಮುಖರಾದವರ ಸಂಖ್ಯೆ 3955ಗೆ ಏರಿದ್ದು, 2956 ಆಕ್ಟಿವ್​ ಕೇಸ್​ ಇದೆ ಅಂತಾ ಆರೋಗ್ಯ ಇಲಾಖೆ ತಿಳಿಸಿದೆ.

Read All News