ಕುಂದಾನಗರಿಯಲ್ಲಿ ಮತ್ತೆ ಶುರುವಾದ ಜಿಟಿ ಜಿಟಿ ಮಳೆ
- 14 Jan 2024 , 11:12 PM
- Belagavi
- 106
ಬೆಳಗಾವಿ: ಕುಂದಾನಗರಿಯಲ್ಲಿ ಕೆಲದಿನಗಳಿಂದ ಬಿಟ್ಟು ಬಿಡದೆ ಜಿಟಿ ಜಿಟಿ ಮಳೆ ಯಾಗುತ್ತಿದೆ. ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆ ಸುರಿಯುತ್ತಿದ್ದು ಇಂದು ಬೆಳಗ್ಗೆಯಿಂದ ಸತತ ಜಿಟಿ ಜಿಟಿ ಮಳೆಯಾಗುತ್ತಿದೆ ನಗರದಲ್ಲಿ ವಾಹನ ಪರದಾಟ ವಾಗಿದೆ.
ಕಳೆದ ಕೆಲ ದಿನಗಳಿಂದ ಮೊಡ ಕವಿದ ವಾತಾವರಣ ಸೃಷ್ಟಿ ಯಾಗಿದೆ, ಯವುದೇ ಗಾಳಿ ಬಿಸಿಲು ಇಲ್ಲದೆ ಮಳೆ ಸುರಿದಿದ್ದು ಜಿಲ್ಲೆಯಲ್ಲಿ ವಿಶೇಷವಾಗಿತ್ತು .
ಜೂನ ದಿಂದ ಮಳೆಗಾಲ ಆರಂಭ ವಾಗಿದೆ ಮುಂಗಾರು ಬಿತ್ತನೆಗೆ ಸಜ್ಜಾದ ರೈತನ ಮೊಗದಲ್ಲಿ ಮಂದಹಾಸ ಮೂಡಿದೆ ಗ್ರಾಮೀಣ ಪ್ರದೇಶದ ರೈತರು ಹೊಲಗಳ ಉಳುಮೆ ಮಾಡಿ ಬಿತ್ತನೆಗೆ ಹದಗೊಳಿಸುತ್ತಿದ್ದಾರೆ ಸೋಯಾಬಿನ್,ಬತ್ತ, ಬೆಳೆಗಳ ಬಿತ್ತನೆ ಕಾರ್ಯ ಆರಂಭ ವಾಗಿದೆ.
ಜಿಟಿ ಜಿಟಿ ಮಳೆಯಿಂದ ನಗರದಲ್ಲಿ ತಗ್ಗು ಪ್ರದೇಶದ ರಸ್ತೆಗಳಲ್ಲಿ ನೀರು ನಿಂತು ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ಕಿರಿಕಿರಿಯನ್ನುಂಟು ಮಾಡಿದೆ. ವಾಹನಗಳ ಓಡಾಟವೂ ವಿರಳವಾಗಿತ್ತು ಮಳೆಯಿಂದ ರೈತನ ಮೂಗದಲ್ಲಿ ಸಂತೋಷದ ವಾತಾವರಣ ನಿರ್ಮಿಸಿದೆ .