ವಿಜಯಪುರ :ಮೀಸಲಾತಿ ಹೋರಾಟಕ್ಕೆ ನಾನು ಸ್ವಾಗತ ಮಾಡುತ್ತೇನೆ. ಮೀಸಲಾತಿಯನ್ನು ಉಳ್ಳವರೆ ಅನುಭವಿಸುತ್ತಿದ್ದಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು. ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಪ್ಪ ಸಂಸದ, ಮಗ ಶಾಸಕರಾಗುತ್ತಿದ್ದಾರೆ. ರಾಜಕೀಯ ಮೀಸಲಾತಿ ಸಹ ಸಿರಿವಂತರೆ ಅನುಭವಿಸುತ್ತಿದ್ದಾರೆ ಎಂದರು. ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಖುರ್ಚಿ ಹೋದರೂ, ಚಾಮುಂಡೇಶ್ವರಿಯಲ್ಲಿ ಸೋತರು ಬುದ್ಧಿ ಬರಲಿಲ್ಲ ಎಂದು ಟೀಕಿಸಿದರು.
ಗೋವಿನ ಶಾಪದಿಂದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. ರಾಮನ ಶಾಪದಿಂದ ದೇಶದಲ್ಲಿ ಅಸ್ತಿತ್ವ ಕಳೆದುಕೊಳ್ಳಲಿದೆ. ತಾವೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುತ್ತಾರೆ. ಆದರೆ ಕಾಂಗ್ರೆಸ್ ನ ಯಾವೊಬ್ಬ ನಾಯಕನೂ ಹೇಳಲ್ಲ ಎಂದು ದೂರಿದರು. ಯತ್ನಾಳ ಹಿಂದೂತ್ವದ ಪ್ರಮುಖ ಶಕ್ತಿ.
ಮುಖ್ಯಮಂತ್ರಿ ಹಾಗೂ ಮಗ ವಿಜಯೇಂದ್ರನ ಬಗ್ಗೆ ಆರೋಪಗಳ ಬಗ್ಗೆ ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಮಾಡಲಿ. ಅದು ಬಿಟ್ಟು ಮಾಧ್ಯಮಗಳ ಮುಂದೆ ಸಾರ್ವಜನಿಕವಾಗಿ ಮಾತನಾಡಬೇಡಿ ಎಂದು ಯತ್ನಾಳರಿಗೆ ಹೇಳಿದ್ದೀನಿ ಎಂದರು. ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ತತ್ವ ಸಿದ್ಧಾಂತಗಳಿಲ್ಲ. ದೇಶ ಒಂದು ಕಡೆ ಕಾಂಗ್ರೆಸ್ ಒಂದು ಕಡೆ ಇದೆ.
ಪ್ರಾದೇಶಿಕ ಪಕ್ಷವಾಗುತ್ತ ಸಾಗಿದೆ. ರಾಹುಲ್ ಗಾಂಧಿ ಏನ್ ಮಾಡ್ತಾರೋ ಅವರಿಗೆ ಗೊತ್ತಿಲ್ಲ. ಕಾಂಗ್ರೆಸ್ ಎಂದರೆ ಸುಭಾಷ್ ಚಂದ್ರ ಭೋಸ್ ನಂತವರ ರಕ್ತದ ಒಂದ ಅಂಶವಾದರೂ ಇದೆಯಾ ? ಎಂದು ಪ್ರಶ್ನಿಸಿದರು. ಕಾಂಗ್ರೆಸ್ ದೇಶವನ್ನು ದಿವಾಳಿ ಮಾಡಿದ ಪಕ್ಷ, ಮುಸ್ಲಿಂ ಲೀಗ್ ದೇಶದ್ರೋಹಿ ಪಕ್ಷ ಹಾಗಾಗಿ ಈ ಎರಡು ಪಕ್ಷಗಳ ಜೊತೆ ಬಿಜೆಪಿ ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳಲ್ಲ ಎಂದರು.
ಸರ್ಕಾರದಲ್ಲಿ ಯಾವುದೇ ಗೊಂದಲಗಳಿಲ್ಲ. ಎಲ್ಲ ಇಲಾಖೆಗಳು ನಿರೀಕ್ಷೆ ಮೀರಿ ಕೆಲಸ ಮಾಡುತ್ತಿವೆ ಎಂದರು.