ಕಾಂಗ್ರೆಸ್ ನಲ್ಲಿ ಯಾರನ್ನು ಯಾರು ಮೂಲೆ ಗುಂಪು ಮಾಡಲಾಗಲ್ಲ: ಸತೀಶ ಜಾರಕಿಹೊಳಿ

  • 14 Jan 2024 , 10:34 PM
  • Belagavi
  • 117

 ಬೆಳಗಾವಿ :ಕಾಂಗ್ರೆಸ್ ನಲ್ಲಿ ಯಾರನ್ನು ಯಾರು ಮೂಲೆ ಗುಂಪು ಮಾಡಲು ಸಾಧ್ಯವಿಲ್ಲ ಅಂತಾ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ ಬಣದ ಒಡಕು ಮೂಡಿರುವ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಭೂತರಾಮನಹಟ್ಟಿ ರಾಣಿಚನ್ನಮ್ಮ ಮೃಗಾಲಯದಲ್ಲಿ  ಪ್ರತಿಕ್ರಿಸಿದರು.

ಗೋಕಾಕ ಸೇರಿ  ಎಲ್ಲ ಕ್ಷೇತ್ರ ಹೆಚ್ಚು ಗೆಲವು ಸಾಧಿಸಲು  ಜಿಲ್ಲೆಯ ಕಾಂಗ್ರೆಸ್ ಎಲ್ಲ ಶಾಸರು, ಮುಖಂಡರು  ಜಂಟಿಯಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.

ಗ್ರಾಮೀಣ ಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿ ಹಸ್ತಕ್ಷೇತ್ರ ವಿಚಾರ,  ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕೆಡಿಪಿ ಸಭೆಯಲ್ಲಿ  ಪ್ರಶ್ನಿಸುವ ಅವಕಾಶವಿದೆ ಎಂದರು. ಮಹದಾಯಿ ವಿಚಾರವಾಗಿ  ಪ್ರತಿಕ್ರಿಯಿಸಿ,  ಮಹದಾಯಿ ಸಮಸ್ಯೆ ಬಗೆಹರಿಯಲು ಪ್ರಧಾನಿ ಮಧ್ಯಸ್ಥಿಕೆವಹಿಸಬೇಕು.

ನಾನಾ ಇಲಾಖೆ ಅನುಮತಿ ಬೇಕಿದೆ. ಮೂರು ರಾಜ್ಯಗಳು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಚುನಾಚಣೆ ಬಂದಾಗ ಬಿಜೆಪಿ‌ ಮಹದಾಯಿ ಹೆಸರು ಹೇಳುವುದು ಹೊಸದೇನಲ್ಲ ಎಂದು ಹೇಳಿದರು.

Read All News