ಶಾಕಿಂಗ್ ನ್ಯೂಸ್: ಭಾರತದಲ್ಲಿ ಒಂದು ಲಕ್ಷ ಮೀರಿದ ಕೋರಾನ
- 14 Jan 2024 , 9:29 PM
- Delhi
- 116
ದಿನೇ ದಿನೇ ಕೊರೊನಾ ಆರ್ಭಟ ಭಾರತದಲ್ಲಿ ಹೆಚ್ಚಾಗುತ್ತಿದ್ದು , ಒಂದೇ ದಿನ ಬರೋಬ್ಬರಿ 6,088 ಮಂದಿಗೆ ಸೋಂಕು ತಗುಲಿದೆ . ಈ ಮೂಲಕ ಭಾರತದಲ್ಲಿ ಸೋಂಕಿತರ ಸಂಖ್ಯೆ 1,18,447 ಕ್ಕೆ ಏರಿಕೆಯಾಗಿದ್ದು , ಮಹಾಮಾರಿ ಕೊರೊನಾಗೆ ಕಳೆದ 24 ಗಂಟೆಯಲ್ಲಿ 148 ಮಂದಿ ಬಲಿಯಾಗಿದ್ದಾರೆ . ದೇಶದಲ್ಲಿ ಈವರೆಗೆ ಕೊರೊನಾ ಸೋಂಕಿಗೆ 3,583 ಮಂದಿ ಬಲಿಯಾಗಿದ್ದಾರೆ . ಒಟ್ಟು 48,533 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು , ಇನ್ನೂ 66,330 ಸೋಂಕಿತರಿಗೆ ಚಿಕಿತ್ಸೆ ಮುಂದುವರೆಸಲಾಗುತ್ತಿದೆ . ಕರ್ನಾಟಕದಲ್ಲಿ ಈವರೆಗೆ 1,605 ಮಂದಿಗೆ ಸೋಂಕು ತಗುಲಿದ್ದು , 41 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ . 571 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ . ಅತೀ ಹೆಚ್ಚು ಸೋಂಕು ಹರಡಿರ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು , ಮುಂಬೈ ಒಂದರಲ್ಲೇ ಈವರೆಗೆ 25 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ . ಗುರುವಾರ ಒಂದೇ ದಿನ ಮಹಾರಾಷ್ಟ್ರದಲ್ಲಿ 2 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣ ವರದಿಯಾಗಿದೆ . ಈವರೆಗೆ 41,642 ಮಂದಿ ಸೋಂಕಿಗೆ ಒಳಗಾಗಿದ್ದು , 1,454 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ . ಅಲ್ಲದೇ 11,726 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿದ್ದಾರೆ . ಸೋಂಕು ಹರಡಿರುವ ರಾಜ್ಯಗಳಲ್ಲಿ ಎರಡನೇ ಸ್ಥಾನದಲ್ಲಿ ತಮಿಳುನಾಡು ಇದೆ . ಈವರೆಗೆ 13,967 ಮಂದಿಗೆ ಸೋಂಕು ತಗುಲಿದ್ದು , 95 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ . ಗುಜರಾತ್ನದಲ್ಲಿ ಸೋಂಕಿತರ ಸಂಖ್ಯೆ 12,910 ಕ್ಕೆ ಏರಿಕೆಯಾಗಿದ್ದು , 773 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ . ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 11,659 ಮಂದಿಗೆ ಸೋಂಕು ತಗುಲಿದ್ದು , 194 ಮಂದಿ ಮೃತಪಟ್ಟಿದ್ದಾರೆ . ಸುಮಾರು 5,567 ಮಂದಿ ಸೋಂಕಿನಿಂದ ಗುಣವಾಗಿದ್ದಾರೆ . ರಾಜಸ್ಥಾನದಲ್ಲಿ 6,227 ಮಂದಿಗೆ ಸೋಂಕು ತಗುಲಿದ್ದು , 151 ಮಂದಿ ಸಾವನ್ನಪ್ಪಿದ್ದಾರೆ . ಮಧ್ಯಪ್ರದೇಶದಲ್ಲಿ 5,981 ಮಂದಿ ಸೋಂಕಿಗೆ ತುತ್ತಾಗಿದ್ದು , 271 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ . ಉತ್ತರ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 5,515 ಕ್ಕೆ ಏರಿಕೆಯಾಗಿದ್ದು , 138 ಮಂದಿ ಮೃತಪಟ್ಟಿದ್ದಾರೆ . ಆಂಧ್ರಪ್ರದೇಶದಲ್ಲಿ 2,605 ಮಂದಿಗೆ ಸೋಂಕು ತಗುಲಿದ್ದು , 54 ಮಂದಿ ಸಾವನ್ನಪ್ಪಿದ್ದಾರೆ . 1,705 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ . ತೆಲಂಗಾಣದಲ್ಲಿ 1,699 ಮಂದಿ ಕೊರೊನಾಗೆ ತುತ್ತಾಗಿದ್ದು , 45 ಮಂದಿ ಮೃತಪಟ್ಟಿದ್ದಾರೆ . ಕೇರಳದಲ್ಲಿ 691 ಮಂದಿ ಸೋಂಕಿಗೆ ಒಳಗಾಗಿದ್ದು , ನಾಲ್ವರು ಮೃತಪಟ್ಟಿದ್ದಾರೆ . 510 ಮಂದಿ ಸೋಂಕಿತರು ಕೊರೊನಾದಿಂದ ಗುಣಮುಖರಾಗಿದ್ದಾರೆ.