ಬೆಳಗಾವಿ: ಮಹಾನಗರ ಪಾಲಿಕೆ ಎದುರಿನ ಕನ್ನಡ ಧ್ವಜ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಕೆಲ ಸಂಘಟನೆಗಳು ಸೋಮವಾರ ನಡೆಸಲು ಉದ್ಧೇಶಿಸಿರುವ ಮೋರ್ಚಾ ಕೈಬಿಡುವಂತೆ ಮುಖಂಡರಿಗೆ ಮನವಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.
ಪಾಲಿಕೆ ಎದುರಿನ ಧ್ವಜ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಶನಿವಾರ ತಮ್ಮನ್ನು ಭೇಟಿ ಮಾಡಿದ ಮರಾಠಾ ಸಮಾಜ ಹಾಗೂ ಎಂ.ಇ.ಎಸ್.ನ ಮುಖಂಡರ ಜತೆ ಚರ್ಚಿಸಲಾಯಿತು. ಎಲ್ಲ ಕನ್ನಡಪರ ಸಂಘಟನೆಗಳ ಜತೆಯೂ ಮಾತುಕತೆಯನ್ನು ನಡೆಸಿ ಈ ವಿಷಯವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು.
ಆದ್ದರಿಂದ ವಿವಿಧ ಸಂಘಟನೆಗಳು ಸೋಮವಾರ ನಡೆಸಲು ಉದ್ಧೇಶಿಸಿರುವ ಮೋರ್ಚಾ ಕೈಬಿಡಬೇಕು ಎಂದು ಮನವಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದ್ದಾರೆ.