ಬಜೆಟ್ ಲೆಕ್ಕ ಬಲು ಪಕ್ಕಾ; ಇಡಿ ರಾಜ್ಯದ ಸಂಪೂರ್ಣ ಡಿಟೇಲ್ಸ್
- 15 Jan 2024 , 12:31 AM
- Bengaluru
- 198
ಬೆಂಗಳೂರು: ಕೊರೊನಾ ಸಂಕಷ್ಟದ ನಡುವೆ ಬಜೆಟ್ ಮಂಡಿಸಿರುವ ಸಿಎಂ ಯಡಿಯೂರಪ್ಪ ತಮ್ಮ ತವರು ಜಿಲ್ಲೆ ಶಿವಮೊಗ್ಗಕ್ಕೆ ಬಂಪರ್ ಕೊಡುಗೆ ನೀಡಿದ್ದಾರೆ. ಶಿವಮೊಗ್ಗದ ಜೊತೆ ಕುಮಾರಸ್ವಾಮಿಯ ರಾಮನಗರ, ಸಿದ್ದರಾಮಯ್ಯನವರ ಬಾದಾಮಿಗೂ ಅನುದಾನ ನೀಡಿದ್ದಾರೆ. ಜೊತೆಗೆ ಎಲ್ಲ ಜಿಲ್ಲೆಗಳಿಗೂ ಬಜೆಟನ ಸ್ಪರ್ಶ ನೀಡಿದ್ದಾರೆ.
ಹಾಗಾದ್ರೆರಾಜ್ಯದಸಂಪೂರ್ಣಡಿಟೇಲ್ಸ್ಇಲ್ಲಿದೆನೋಡಿ.
ಬೆಳಗಾವಿ
- ನಿಪ್ಪಾಣಿಯಲ್ಲಿ ಕೊಲ್ಹಾಪುರಿ ಪಾದರಕ್ಷೆ ಕ್ಲಸ್ಟರ್ ಸ್ಥಾಪನೆ.
- ಬೆಳಗಾವಿ ವರ್ತುಲ ರಸ್ತೆ ನಿರ್ಮಾಣಕ್ಕೆ 140 ಕೋಟಿ.
- ಬೆಳಗಾವಿ-ಕಿತ್ತೂರು-ಧಾರವಾಡ ಹೊಸ ರೈಲು ಮಾರ್ಗಕ್ಕೆ 463 ಕೋಟಿ
- ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟಿ
- ಸ್ವಯಂ ಚಾಲಿತಾ ಚಾಲನಾ ಪರೀಕ್ಷಾ ಪಥ ಕಾಮಗಾರಿ ಈ ವರ್ಷ ಪೂರ್ಣ.
ಶಿವಮೊಗ್ಗ
- ಆಯುರ್ವೇದ ಕಾಲೇಜು ಆಯುಷ್ ವಿವಿಯಾಗಿ ಮೇಲ್ದರ್ಜೆಗೆ
- ಶಿವಮೊಗ್ಗ ಪ್ರಾದೇಶಿಕ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಕ್ಕೆ 100 ಕೋಟಿ
- 2 ಕೋಟಿ ವೆಚ್ಚದಲ್ಲಿ ಸಂಶೋಧನಾ ಕೇಂದ್ರ ಸ್ಥಾಪನೆ
- ತೀರ್ಥಹಳ್ಳಿಯಲ್ಲಿ ಅಡಿಕೆ ಸಂಶೋಧನಾ ಕೇಂದ್ರಕ್ಕೆ 25 ಕೋಟಿ
- ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 384 ಕೋಟಿ
- ಮಲೆನಾಡು ಕರಾವಳಿ ಭಾಗದ ಕಾಲುದಾರಿ ನಿರ್ಮಾಣಕ್ಕೆ 100 ಕೋಟಿ
ಬಾಗಲಕೋಟೆ
- ಬಾದಾಮಿಯ ಗುಳೇದಗುಡ್ಡದಲ್ಲಿ ಗುಳೆ ತಪ್ಪಿಸಲು ಜವಳಿ ಪಾರ್ಕ್ (ಖಾಸಗಿ-ಸರ್ಕಾರಿ ಸಹಭಾಗಿತ್ವ)
- ಬಾದಾಮಿಯಲ್ಲಿ ಎಲೆಕ್ಟ್ರಿಕ್ ಬೈಕ್, ಟ್ಯಾಕ್ಸಿ ಯೋಜನೆಗೆ 25 ಕೋಟಿ
- ಕುರಿ, ಮೇಕೆಗಳ ಆಕಸ್ಮಿಕ ಸಾವಿಗೆ ಪರಿಹಾರ ನೀಡುವ `ಅನುಗ್ರಹ ಕೊಡುಗೆ’ ಮುಂದುವರಿಕೆ
- ಆಲಮಟ್ಟಿ ಜಲಾಶಯದಿಂದ ಬಾಗಲಕೋಟೆಗೆ ಜಲಮಾರ್ಗ ಪ್ರವಾಸೋದ್ಯಮ ಅಭಿವೃದ್ಧಿಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಕೆ.
ಚಿಕ್ಕಮಗಳೂರು
- ಮಲೆನಾಡು-ಕರಾವಳಿ ಭಾಗದಲ್ಲಿ ಕಾಲುಸಂಕ ನಿರ್ಮಾಣಕ್ಕೆ 100 ಕೋಟಿ
- ಕೆಮ್ಮಣ್ಣುಗುಂಡಿ ಪ್ರವಾಸೋದ್ಯಮಕ್ಕೆ ಹಸ್ತಾಂತರ
- ಭದ್ರಾ ಮೇಲ್ದಂಡೆ ಯೋಜನೆ ತ್ವರತಿ ಅನುಷ್ಠಾನಕ್ಕೆ ಆದ್ಯತೆ
- ಕೆಮ್ಮಣ್ಣುಗುಂಡಿ ಗಿರಿಧಾಮವನ್ನು ಅಂತರಾಷ್ಟ್ರೀಯ ಪರಿಸರ ಪ್ರವಾಸೋದ್ಯಮ ತಾಣವನ್ನಾಗಿ ಅಭಿವೃದ್ಧಿ
- ಅಡಿಕೆಗೆ ಸಂಬಂಧಿಸಿದ ಹಳದಿ ಎಲೆ ರೋಗ ಕುರಿತು ಸಂಶೋಧನೆ ಮತ್ತು ಪರ್ಯಾಯ ಬೆಳೆಯನ್ನು ಪ್ರೋತ್ಸಾಹಿಸಲು 25 ಕೋಟಿ ಅನದನ.
ಮಂಡ್ಯ
- ಮಂಡ್ಯದಲ್ಲಿ ಕ್ರೀಡಾಂಗಣ ಉನ್ನತೀಕರಣಕ್ಕೆ 10 ಕೋಟಿ
- ಕ್ರೀಡಾಂಗಣ ಉನ್ನತೀಕರಣಕ್ಕೆ 10 ಕೋಟಿ * ಮಿಮ್ಸ್‌ನಲ್ಲಿ ಪ್ರಸಕ್ತ ಸಾಲಿನಿಂದ 100 ಸ್ನಾತಕೋತ್ತರ ಸೀಟುಗಳ ಹೆಚ್ಚಳ
- ಮೈ ಶುಗರ್ ಕಾರ್ಖಾನೆಯ ಆರಂಭದ ಪ್ರಸ್ತಾಪವಾಗಿಲ್ಲ.
ರಾಮನಗರ
- ರಾಮನಗರದಲ್ಲಿ ರೇಷ್ಮೆಗೂಡು ಮಾರುಕಟ್ಟೆಗೆ ಹೈಟೆಕ್ ಸ್ಪರ್ಶ – 75 ಕೋಟಿ (ನಬಾರ್ಡ್ ಸಹಾಯ)
ಮೈಸೂರು
- ಹೊರ ವಲಯದ ಮುಡಾ ವ್ಯಾಪ್ತಿ ಬಡಾವಣೆಗಳಿಗೆ ಕಾವೇರಿ ನೀರು
- 100 ಕೋಟಿ ವೆಚ್ಚದಲ್ಲಿ ಪ್ರಾದೇಶಿಕ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ
- ಮೈಸೂರು ವೈದ್ಯಕೀಯ ವಿದ್ಯಾಲಯದಲ್ಲಿ ತುರ್ತು ಚಿಕಿತ್ಸಾ ಘಟಕ ಸ್ಥಾಪನೆ
- ಕೆಆರ್‍ಎಸ್ ಮಾದರಿಯಲ್ಲಿ ಕಬಿನಿಯಲ್ಲಿ ಪಾರ್ಕ್
- ನಿರ್ಮಾಣ ಕಾರ್ಮಿಕರಿಗೆ ವಸತಿ ನೀಡಲು ತಾತ್ಕಾಲಿಕ ವಸತಿ ಗೃಹ ಹಾಸನ
- 10 ವರ್ಷದಿಂದ ಬಾಕಿ ಉಳಿದಿರುವ ಹಾಸನದ ವಿಮಾನ ನಿಲ್ದಾಣಕ್ಕೆ 175 ಕೋಟಿ
- ನಿರ್ಮಾಣ ಕಾರ್ಮಿಕರಿಗೆ ವಸತಿ ನೀಡಲು ತಾತ್ಕಾಲಿಕ ವಸತಿ ಗೃಹ.
- ಅಂಬೇಡ್ಕರ್ ಭೇಟಿ ನೀಡಿದ್ದ ಎ.ಕೆ. ಬೋರ್ಡಿಂಗ್ ಹೋಮ್‌ನಲ್ಲಿ ಐತಿಹಾಸ ಸ್ಮಾರಕ ಭವನ ನಿರ್ಮಾಣಕ್ಕೆ 1 ಕೋಟಿ ಅನುದಾನ.
- ಶ್ರವಣಬೆಳಗೊಳ ಸೇರಿದಂತೆ ಇತರೇ ಜೈನ ಕ್ಷೇತ್ರಗಳಲ್ಲಿ ಮೂಲಭೂತ ಸೌಕರ್ಯ ನಿರ್ಮಾಣಕ್ಕೆ 50 ಕೋಟಿ.
- ಸ್ವಯಂ ಚಾಲಿತಾ ಚಾಲನಾ ಪರೀಕ್ಷಾ ಪಥ ಕಾಮಗಾರಿ ಈ ವರ್ಷ ಪೂರ್ಣ.
ತುಮಕೂರು
- ಶ್ರೀ ಶಿವಕುಮಾರ ಸ್ವಾಮೀಜಿ ಗೌರವಾರ್ಥ ಸ್ಮೃತಿ ವನ ನಿರ್ಮಾಣಕ್ಕೆ 2 ಕೋಟಿ ರೂ.
- ವೃಷಭಾವತಿ ಕಣಿವೆಯಿಂದ ತುಮಕೂರಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆ.
ದಕ್ಷಿಣ ಕನ್ನಡ
- ಮಂಗಳೂರಿನಗಂಜಿಮಠದಲ್ಲಿ ಪ್ಲಾಸ್ಟಿಕ್ ಪಾರ್ಕ್‍ಗೆ 150 ಕೋಟಿ
- ಸೋಮೇಶ್ವರ ಕಡಲ ತೀರದಲ್ಲಿ ಪ್ರವಾಸೋದ್ಯಮಕ್ಕೆ 10 ಕೋಟಿ
- ಮಂಗಳೂರು-ಪಣಜಿ ಜಲಮಾರ್ಗ ಅಭಿವೃದ್ಧಿ
- ಮಂಗಳೂರಿನಲ್ಲಿ ಅಡ್ವಾನ್ಸ್ ಬಯೋಟೆಕ್ ಸೆಂಟರ್ ಫಾರ್ ಆಕ್ವಾ ಮೆರಿನ್ ಸ್ಥಾಪನೆ
- ಮಂಗಳೂರಿನಲ್ಲಿ ಸ್ವಯಂ ಚಾಲಿತಾ ಚಾಲನಾ ಪರೀಕ್ಷಾ ಪಥ ಕಾಮಗಾರಿ ಈ ವರ್ಷ ಪೂರ್ಣ
- ಅಡಿಕೆಗೆ ಸಂಬಂಧಿಸಿದ ಹಳದಿ ಎಲೆ ರೋಗ ಕುರಿತು ಸಂಶೋಧನೆ ಮತ್ತು ಪರ್ಯಾಯ ಬೆಳೆಯನ್ನು ಪ್ರೋತ್ಸಾಹಿಸಲು 25 ಕೋಟಿ ಅನದಾನ.
ಉತ್ತರ ಕನ್ನಡ
- ಅಡಿಕೆಹಳದಿ ರೋಗ ನಿವಾರಣೆಗೆ ಸಂಶೋಧನಾ ಕೇಂದ್ರ ಹಾಗೂ ಪರ್ಯಾಯ ಬೆಳೆಗೆ ಪ್ರೋತ್ಸಾಹ 25 ಕೋಟಿ
- ಯಾಂತ್ರಿಕ ದೋಣಿಗಳಿಗೆ ಟ್ಯಾಕ್ಸ್ ರಹಿತ ಡೀಸೆಲ್ ವಿತರಣೆ
- ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಅನುಷ್ಠಾನಕ್ಕೆ 62 ಕೋಟಿ
- 6 ಕೋಟಿ ವೆಚ್ಚದಲ್ಲಿ ಮೀನಿನ ಉತ್ಪನ್ನ ಸಂಸ್ಕರಣೆ, ಮೌಲ್ಯ ವರ್ದಿತಾ ಕೇಂದ್ರ ಸ್ಥಾಪನೆ
- ಗ್ರಾಮ ಬಂಧು ಯೋಜನೆಯಡಿ ಕರಾವಳಿ, ಮಲೆನಾಡು ಭಾಗದಲ್ಲಿ ಕಾಲುಸಂಕ ನಿರ್ಮಾಣ ಯೋಜನೆಗೆ 100 ಕೋಟಿ
- ಅಂಕೋಲಾ ನೌಕಾ ವಾಯುನೆಲೆ ಸಮೀಪದಲ್ಲಿ ಸಿವಿಲ್ ಎನ್‍ಕ್ಲೇವ್ ಅಭಿವೃದ್ಧಿ
- ಶಿರಸಿಯಲ್ಲಿ 7 ಕೋಟಿ ವೆಚ್ಚದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ.
ಉಡುಪಿ
- ತ್ರಾಸಿ, ಮರವಂತೆ, ಒತ್ತಿನೆಣೆ ಹಾಗೂ ಇತರ ಕಡಲ ತೀರ ಅಭಿವೃದ್ಧಿಗೆ 10 ಕೋಟಿ
- ಬೈಂದೂರು-ಸೋಮೇಶ್ವರಬೀಚ್ ಅಭಿವೃದ್ಧಿ 10 ಕೋಟಿ
- ತ್ರಾಸಿ, ಒತ್ತಿನೆಣೆ, ಮರವಂತೆ ಬೀಚ್ ಅಭಿವೃದ್ಧಿಗೆ 10 ಕೋಟಿ
- ಯಾಂತ್ರೀಕೃತ ದೋಣಿಗಳಿಗೆ ತೆರಿಗೆ ರಹಿತ ಡೀಸೆಲ್
- ಪಶ್ಚಿಮ ವಾಹಿನಿ ಯೋಜನೆಗೆ 500 ಕೋಟಿ
- ಉಡುಪಿಯಲ್ಲಿಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಗೌರವಾರ್ಥ ಸ್ಮೃತಿ ವನ ನಿರ್ಮಾಣಕ್ಕೆ 2 ಕೋಟಿ ರೂ.
ಯಾದಗಿರಿ
- ಕಡೆಚೂರಿನಲ್ಲಿ ಬಲ್ಕ್ ಡ್ರಗ್ ಪಾರ್ಕ್ ನಿರ್ಮಾಣಕ್ಕೆ 1,478 ಕೋಟಿ.
ರಾಯಚೂರು
- ಸುಗಮ ಸಂಚಾರಕ್ಕೆ ರಿಂಗ್ ರಸ್ತೆ *ರಾಯಚೂರಿನಲ್ಲಿ ಸ್ವಯಂ ಚಾಲಿತಾ ಚಾಲನಾ ಪರೀಕ್ಷಾ ಪಥ ಕಾಮಗಾರಿ ಈ ವರ್ಷ ಪೂರ್ಣ.
ಹಾವೇರಿ
- ಕರ್ನಾಟಕ ರಾಜ್ಯ ಮೀಸಲು ಪಡೆ ಬಲಪಡಿಸಲು 8 ಕೋಟಿ ಅನುದಾನ * ನೂತನ ಜಿಲ್ಲಾ ಪೋಲಿಸ್ ಸಂಕೀರ್ಣ ನಿರ್ಮಾಣಕ್ಕೆ 8 ಕೋಟಿ
- ಬ್ಯಾಡಗಿ ಎಪಿಎಂಸಿಯಲ್ಲಿ 4 ಕೋಟಿ ವೆಚ್ಚದಲ್ಲಿ ಆಧುನಿಕ ಗುಣ ವಿಶ್ಲೇಷಣಾ ಘಟಕ. ಬೀದರ್
- ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ 500 ಕೋಟಿ. ದಾವಣಗೆರೆ
- ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ ಉಪ ಕೇಂದ್ರ ಸ್ಥಾಪನೆಗೆ 20 ಕೋಟಿ
- ನಿರ್ಮಾಣ ಕಾರ್ಮಿಕರಿಗೆ ವಸತಿ ನೀಡಲು ತಾತ್ಕಾಲಿಕ ವಸತಿ ಗೃಹ.
ಚಿತ್ರದುರ್ಗ
- ಚಿತ್ರದುರ್ಗದಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ
- ಕೇಂದ್ರ ಪಾದರಕ್ಷೆ ತರಬೇತಿ ಸಂಸ್ಥೆಯ ವಿಸ್ತರಣಾ ಕೇಂದ್ರ. ವಿಜಯಪುರ *
- ವಿಜಯಪುರ ಜಿಲ್ಲೆ ಇಟ್ಟಂಗಿಹಾಳದಲ್ಲಿ ಆಹಾರ ಪಾರ್ಕ್ ಜಗಜ್ಯೋತಿ ಬಸವಣ್ಣ ಜನ್ಮಸ್ಥಳ ಅಭಿವೃದ್ದಿಗೆ 5 ಕೋಟಿ ವಿಜಯಪುರ ವಿಮಾನ ನಿಲ್ದಾಣಕ್ಕೆ 220 ಕೋಟಿ.
ಕೊಪ್ಪಳ
- ನಾರಿ ಸುವರ್ಣ ಕುರಿ ಸಂವರ್ಧನ ಕೇಂದ್ರ *
- ತೋಟಗಾರಿಕೆತಂತ್ರಜ್ಞಾನ ಪಾರ್ಕ್ ಅಭಿವೃದ್ಧಿ. ಧಾರವಾಡ
- ಹುಬ್ಬಳ್ಳಿ ಕಿಮ್ಸ್‌ನಲ್ಲಿ ತುರ್ತು ಚಿಕಿತ್ಸಾ ವಿಭಾಗಕ್ಕೆ 5 ಕೋಟಿ
- ಧಾರವಾಡ-ಬೆಳಗಾವಿ ನೂತನ ರೈಲು ಮಾರ್ಗಕ್ಕೆ 463 ಕೋಟಿ ಆದಿಕವಿ ಪಂಪನ ಕೃತಿಗಳ ಡಿಜಿಟಲೀಕರಣ
- ಹುಬ್ಬಳ್ಳಿಗೆ ವಿಧಿವಿಜ್ಞಾನ ಪ್ರಯೋಗಾಲಯದ ಪ್ರಾದೇಶಿಕ ಕೇಂದ್ರ ಮಂಜೂರು.