ಲಲಿತ ಕಲಾ ಅಕಾಡೆಮಿಯ ಸದಸ್ಯರಾಗಿ ಡಾ.ಸೋನಾಲಿ ಸರ್ನೋಬತ ಆಯ್ಕೆ

  • 15 Jan 2024 , 3:04 AM
  • Belagavi
  • 176
ಬೆಳಗಾವಿ: ಸಾಂಸ್ಕೃತಿಕ ಮಂತ್ರಾಲಯವು ಲಲಿತ ಕಲಾ ಅಕಾಡೆಮಿ, ನವ ದೆಹಲಿಯ ರಾಷ್ಟ್ರಿಯ ಸಮಿತಿಯ ನೂತನ ಸದಸ್ಯರನ್ನಾಗಿ ಬೆಳಗಾವಿಯ ಡಾ. ಸೋನಾಲಿ ಸರ್ನೋಬತರನ್ನು ಆಯ್ಕೆ ಮಾಡಿದೆ. ಲಲಿತ ಕಲಾ ಅಕಾಡೆಮಿಯ ನೂತನ ಸದಸ್ಯರಲ್ಲಿ ಬೆಳಗಾವಿಯ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಡಾಕ್ಟರ ವೃತ್ತಿಯನ್ನು ಮಾಡುತ್ತಾ ತಮ್ಮದೇ ಸೇವೆ ಸಲ್ಲಿಸುತ್ತಿದ್ದಾರೆ. ಡಾಕ್ಟರ್ ಸೋನಾಲಿ ಸರ್ನೋಬತ ಇವರ ವೈದ್ಯಕೀಯ ಸಾಹಿತ್ಯ, ಕಲಾ, ಸಮಾಜಕಾರ್ಯ, ಸೃಜನಶೀಲತೆ, ಕಲಾವಿಷಯದ ಲೇಖನ, ಅಭ್ಯಾಸ ಆದಿಗಳನ್ನು ಗಮನದಲ್ಲಿಟ್ಟುಕೊಂಡು ಇವರನ್ನು ಆಯ್ಕೆ ಮಾಡಲಾಗಿದೆ. ದೇಶದ ವಿವಿಧ ರಾಜ್ಯದಲ್ಲಿನ ಹತ್ತು ಜನರನ್ನು ಲಲಿತ ಕಲಾ ಅಕಾಡೆಮಿಯ ಸರ್ವಸಾಧಾರಣ ಸಮಿತಿಯಲ್ಲಿ ಆಯ್ಕೆ ಮಾಡಲಾಗಿದೆ. ಲಲಿತ ಕಲಾ ಅಕಾಡೆಮಿಯು ಕೇಂದ್ರ ಸರಕಾರದ ಸಾಂಸ್ಕೃತಿಕ ಮಂತ್ರಾಲಯದ ಆಧೀನವಿರುವ ಒಂದು ಪ್ರಖ್ಯಾತ ಸಂಸ್ಥೆ ಆಗಿದೆ. ಈ ಸಂಸ್ಥೆಯ ಸರ್ವಸಾಧಾರಣ ಮಂಡಳದಲ್ಲಿ ಸದಸ್ಯರೆಂದು ಆಯ್ಕೆಯಾಗುವುದು ಗೌರವಾಸ್ಪದ ಸುದ್ದಿ. ದೇಶದಲ್ಲಿನ ವಿವಿಧ ಕ್ಷೇತ್ರಗಳಲ್ಲಿ ಉಲ್ಲೇಖನೀಯ ಕಾರ್ಯ ಮಾಡುತ್ತಿದ್ದ ವ್ಯಕ್ತಿಗಳ ಗುಣವತ್ತೆ, ಕಾರ್ಯವನ್ನು ಧ್ಯಾನದಲ್ಲಿಟ್ಟು ಕೇಂದ್ರಿಯ ಸಾಂಸ್ಕೃತಿಕ ಮಂತ್ರಾಲಯವು ನಿಯುಕ್ತಿಯನ್ನು ಮಾಡುತ್ತದೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಸರ್ನೋಬತ್ ಬೆಳಗಾವಿ ಇದು ಕಲೆ ಮತ್ತು ಸಂಸ್ಕೃತಿಯನ್ನು ಜೋಪಾನಿಸುವ ನಗರ. ಬೆಳಗಾವಿಗೆ ಕಲೆಯ ಉಜ್ವಲ ಇತಿಹಾಸವಿದೆ. ಚಿತ್ರ ಮಹರ್ಷಿ ಕೈ. ಕೆ. ಬಿ. ಕುಲಕರ್ಣಿ, ರವಿ ಪರಾಂಜಪೆ, ಜಾನ್ ಫೆರ್ನಾಂಡಿಸ್ ಇವರಂತಹ ನಾಮವಂತ ಚಿತ್ರಕಾರರು ಬೆಳಗಾವಿಯವರೆ ಆಗಿದ್ದಾರೆ. ಅನೇಕ ಕಲೆಗಳಲ್ಲಿ ಬೆಳಗಾವಿಯ ಅನೇಕ ವ್ಯಕ್ತಿಗಳು ತಮ್ಮ ನಾಮಮುದ್ರೆಯನ್ನು ಚಿತ್ತಾರಿಸಿದ್ದಾರೆ. ಕಲೆಗೆ ಮತ್ತು ಕಲಾಕಾರರಿಗೆ ಪ್ರೋತ್ಸಾಹನೆ ಕೊಡುವುದು ನನ್ನ ಪ್ರಥಮ ಪ್ರಾಧಾನ್ಯ ಎಂದು ಡಾ.ಸೋನಾಲಿ ಸರ್ನೋಬತ್ ಹೇಳಿದ್ದಾರೆ. ಇತ್ತೀಚೆಗೆ ಕರ್ನಾಟಕ ಪ್ರಾಣಿ ಮಹಾಮಂಡಳಿಯ ಮೇಲೆ ಅವರ ನೇಮಕಾತಿಯಾಗಿದೆ. ಅವರ ತತ್ಪರೆತೆಗೆ ಈ ಅವಕಾಶ ಒಲಿದು ಬಂದಿದೆ. ಎಂದು ತಿಳಿದು ಬಂದಿದೆ. ಡಾ.ಸೋನಾಲಿ ಸರ್ನೋಬತರವರ ನಿಯತಿ ಫೌಂಡೇಶನ ವತಿಯಿಂದ ತಮ್ಮದೇ ರೀತಿಯಲ್ಲಿ ಸಾಮಾಜಿಕ ಸೇವೆ ಮಾಡುತ್ತಾ ಚಿರ ಪರಪರಿಚಿತರಾಗಿದ್ದಾರೆ.

Read All News