ಉಪ ವಿದ್ಯುತ್ ಪರಿವೀಕ್ಷಕ ಅಧಿಕಾರಿ‌ ಮನೆ ಮೇಲೆ ಎಸಿಬಿ ದಾಳಿ

  • 15 Jan 2024 , 12:27 AM
  • Belagavi
  • 304

ಬೆಳಗಾವಿ: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ ಹಿನ್ನೆಲೆಯಲ್ಲಿ ಉಪ ವಿದ್ಯುತ್ ಪರಿವೀಕ್ಷಕ ಅಧಿಕಾರಿ‌ ಹಣಮಂತ ಚಿಕ್ಕಣ್ಣವರ್ ಮನೆ ಮೇಲೆ ಎಸಿಬಿ ದಾಳಿ ನಡೆದಿದೆ. ಬೆಳಗಾವಿಯ ವಲಯ ಎಸಿಬಿ ಅಧಿಕಾರಿಗಳಿಂದ ಒಟ್ಟು ನಾಲ್ಕು ಕಡೆ ದಾಳಿ ನಡೆದಿದ್ದು ಚನ್ನಮ್ಮ ನಗರದ ಮನೆ, ಕಚೇರಿ, ಅಪಾರ್ಟಮೆಂಟ್ ಮೇಲೆ‌ ದಾಳಿಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಜೊತೆಗೆ ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಗೋಲಭಾಂವಿ ತೋಟದಲ್ಲಿ ಪರಿಶೀಲನೆ ನಡೆಸಿದ್ದು ಅಧಿಕಾರಿ ಹೊಂದಿದ್ದ ಸಂಪತ್ತಿನ ಮಾಹಿತಿ ಸಂಗ್ರಹಣೆಯನ್ನು ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.

Read All News