ಬೆಳಗಾವಿ: ಕುಂದಾನಗರಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುಳ್ಳೂರ ಗುಡ್ಡದಲ್ಲಿ ಶಿವನ ಮೂರ್ತಿ ಎದುರುಗಡೆ ಬೃಹತ್ ನಂದಿ ಮೂರ್ತಿ ನಿರ್ಮಾಣ ಗೊಳಿಸಲಾಗಿದೆ. ಈ ನಂದಿ ಮೂರ್ತಿಯ ಎತ್ತರ 22ಅಡಿ ಅಗಲ 14ಅಡಿ ಉದ್ದ 32ಅಡಿ ಇದೆ. ಈ ನಂದಿ ವಿಗ್ರಹ ದೇಶದಲ್ಲೆ ಅತೀ ಎತ್ತರದ ವಿಗ್ರಹ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಮದುರ್ಗದ ಶಿವ ಪ್ರತಿಷ್ಠಾನಾ ಸೇವಾ ಸಮಿತಿ ಹಾಗೂ ಅಶೋಕವನದ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ನಿರ್ಮಾಣಗೊಂಡ ನಂದಿ ವಿಗ್ರಹವನ್ನು ಮಹಾಶಿವರಾತ್ರಿ ದಿನ ಗುರುವಾರದಂದು ಬೆಳ್ಳಿಗೆ 9.00 ಗಂಟೆಗೆ ಲೋಕಾರ್ಪಣೆ ಮಾಡಲಾಗುತ್ತಿದೆ ಈ ಶುಭ ಸಂದರ್ಭದಲ್ಲೆ ವಿಶೇಷ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಶಿವ ಪ್ರತಿಷ್ಟಾನಾ ಸೇವಾ ಸಮಿತಿಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಅಶೋಕ ಪಟ್ಟಣ ತಿಳಿಸಿದ್ದಾರೆ.