ಮಾ.27 ರಂದು‌ ರಂಗ ಸಂಪದ ದಿನಾಚಾರಣೆ: ಕುಲಕರ್ಣಿ

  • 15 Jan 2024 , 4:51 AM
  • Belagavi
  • 150

ಬೆಳಗಾವಿ: ಮಾ.27ರಂದು ವಿಶ್ವರಂಗ ಸಂಪದ ದಿನಾಚಾರಣೆಯ ಅಂಗವಾಗಿ ಲೋಕಮಾನ್ಯ ರಂಗಮಂದಿರದಲ್ಲಿ ಸಂಜೆ 6ಕ್ಕೆ ರಂಗ ಸಂಪದದಲ್ಲಿ ಸಾಧನೆಗೈದವರಿಗೆ ರಂಗಸಖ ಪ್ರಶಸ್ತಿ ನೀಡಲಾಗುತ್ತಿದೆ ಎಂದು ರಂಗ ಸಂಪದ ಅಧ್ಯಕ್ಷ ಡಾ. ಅರವಿಂದ ಕುಲಕರ್ಣಿ ಹೇಳಿದರು.

ಮಂಗಳವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ರಂಗ ಸಂಪದ ಬೆಳಗಾವಿ ವತಿಯಿಂದ ರಂಗಭೂಮಿ ಚಟುವಟಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ.ಶ್ರಿಪತಿ ಮಂಜನಬೈಲು ಮತ್ತು ಉಳಿದವರ ಸಹಕಾರದೊಂದಿಗೆ ಸಾಕಷ್ಟು ನಾಟಕಗಳ ಪ್ರದರ್ಶನ ಜತೆಗೆ ಉಳಿದ ರಂಗಭೂಮಿ ಚಟುವಟಿಕೆಗಳನ್ನು ಮಾಡುತ್ತ ಬಂದಿದೆ.

ಕಳೆದ ಐದು ವರ್ಷದಲ್ಲಿ ಡಾ. ಅರವಿಂದ ಕುಲಕರ್ಣಿ ಅಧ್ಯಕ್ಷತೆಯಲ್ಲಿ ಸಾಕಷ್ಟು ನಾಟಕ ಪ್ರದರ್ಶನವಾಗಿದೆ ಎಂದರು. ಮಾ.27ರಂದು ರಂಗ ಕರ್ಮಿಗಳಿಗೆ ರಂಗಸಖ ಎನ್ನುವ ಪ್ರಶಸ್ತಿ ಹಾಗೂ ಐದು ಸಾವಿರ ರು. ನಗದು ಬಹುಮಾನದೊಂದಿಗೆ ಸತ್ಕರಿಸಲಾಗುತ್ತಿದೆ. ರಂಗಸಖ ಪ್ರಶಸ್ತಿಯನ್ನು ಧಾರವಾಡದ ಆಟಮಾಟ ತಂಡದ ಪ್ರಸಿದ್ದ ಕಲಾವಿದ ಮತ್ತು ನಿರ್ದೇಶಕ ಮಹಾದೇವ ಹಡಪದ ಅವರಿಗೆ ನೀಡಲಾಗುತ್ತಿದೆ.

ಹಿರಿಯ ಕಲಾವಿದರಾದ ಚಂದ್ರಿಕಾ ನಾಡಿಗೇರ, ರುಘುನಾಥ ನಾಡಿಗೇರ, ರಾಘವೇಂದ್ರ ಹಲಗತ್ತಿ ಅವರಿಗೆ ಗೌರವ ಸನ್ಮಾನ ಮಾಡಲಾಗುವುದು ಎಂದರು. ಕಾರ್ಯಕ್ರಮದ ಅತಿಥಿಯಾಗಿ ದೂರದರ್ಶನ ಧಾರವಾಹಿಯ ನಿರ್ದೇಶಕ, ನಟ ಮತ್ತು ಕಥೆಗಾರ ಎಸ್.ಎನ್.ಸೇತುರಾಮ, ರಂಗಸಂಪದ ಗೌರವಾಧ್ಯಕ್ಷ ಶ್ರೀಪತಿ ಮಂಜನಬೈಲ್ ಆಗಮಿಸಲಿದ್ದಾರೆ ಎಂದು ಹೇಳಿದರು.

ಶರಣಗೌಡ ಪಾಟೀಲ, ರಮೇಶ ಅನಿಗಳ, ರಾಮಚಂದ್ರ ಕಟ್ಟಿ, ರಾಜಪುರೋಹಿತ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Read All News